ಐಪಿಎಲ್ ಇತಿಹಾಸದಲ್ಲಿ 13 ಬಾರಿ ಡಕ್ಔಟ್ ಆಗಿ ಕೆಟ್ಟ ದಾಖಲೆ ಬರೆದಿರುವ 6 ಆಟಗಾರರಿವರು!

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಈ ವಾರಾಂತ್ಯದಲ್ಲಿ ಆರಂಭವಾಗಲಿದ್ದು, ಮಾರ್ಚ್ 26ರಂದು ನಡೆಯಲಿರುವ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವಿನ ಪಂದ್ಯದ ಮೂಲಕ ಟೂರ್ನಿ ಆರಂಭಗೊಳ್ಳಲಿದೆ. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಟ್ರೋಫಿಗಾಗಿ ಒಟ್ಟು ಹತ್ತು ತಂಡಗಳ ನಡುವೆ ಸೆಣಸಾಟ ನಡೆಯಲಿದ್ದು, ಹೊಸ ನಿಯಮ ಹಾಗೂ ಹೊಸ ನಾಯಕರು ಇರುವುದು ಈ ಬಾರಿಯ ಟೂರ್ನಿಯ ವಿಶೇಷತೆಯಾಗಿರಲಿದೆ. ಅತ್ತ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸಮೀಪಿಸುತ್ತಿದ್ದಂತೆ ಐಪಿಎಲ್ ಇತಿಹಾಸದಲ್ಲಿ ನಿರ್ಮಾಣವಾಗಿರುವ ದಾಖಲೆಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಆರಂಭವಾಗಿದ್ದು, ಇವುಗಳ ಜೊತೆಗೆ ಐಪಿಎಲ್ ಇತಿಹಾಸದಲ್ಲಿ ಆಟಗಾರರು ನಿರ್ಮಿಸಿರುವ ಬೇಡವಾದ ದಾಖಲೆಗಳ ಕುರಿತು ಕೂಡ ಚರ್ಚೆಗಳ ನಡೆಯುತ್ತಿವೆ. ಇಂತಹ ಬೇಡವಾದ ದಾಖಲೆಗಳಲ್ಲಿ ಅತಿಹೆಚ್ಚು ಬಾರಿ ಡಕ್ಔಟ್ ಆಗಿರುವ ಆಟಗಾರರು ಎಂಬ ಕೆಟ್ಟ ದಾಖಲೆ ಕೂಡ ಒಂದು.
ಯಾವುದೇ ಕ್ರಿಕೆಟ್ ಮಾದರಿಯಲ್ಲಿಯೂ ಸಹ ಬ್ಯಾಟ್ಸ್‌ಮನ್ ಓರ್ವ ಶೂನ್ಯಕ್ಕೆ ಔಟ್ ಆಗುವುದನ್ನು ಸಹಿಸಲಾರರು. ಅದರಲ್ಲಿಯೂ ಹೊಡಿಬಡಿ ಆಟ ಎಂದೇ ಹೆಸರುವಾಸಿಯಾಗಿರುವ ಟಿ ಟ್ವೆಂಟಿ ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಶೂನ್ಯಕ್ಕೆ ಔಟ್ ಆದರೆ ಅದು ಆ ಆಟಗಾರನಿಗೆ ಆಗುವ ದೊಡ್ಡ ಹಿನ್ನಡೆ ಹಾಗೂ ತಂಡಕ್ಕೆ ಆಗುವ ಭಾರೀ ನಷ್ಟ ಎನ್ನಬಹುದು. ಹೀಗೆ ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಬಾರಿ ಶೂನ್ಯಕ್ಕೆ ಔಟ್ ಆಗಿ ಬೇಡವಾದ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಹೊಂದಿರುವ ಆಟಗಾರರು ಯಾರು ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ ಓದಿ..

13 ಬಾರಿ ಡಕ್ಔಟ್ ಆಗಿದ್ದಾರೆ ಈ ಆರು ಆಟಗಾರರು
ಐಪಿಎಲ್ ಇತಿಹಾಸದಲ್ಲಿ ಆಟಗಾರರು 13 ಡಕ್ಔಟ್ ಆಗಿರುವುದು ಗರಿಷ್ಠ ಬಾರಿ ಡಕ್ಔಟ್ ಆದ ಕೆಟ್ಟ ದಾಖಲೆಯಾಗಿದೆ. ಇದುವರೆಗೂ ಈ ಕೆಟ್ಟ ದಾಖಲೆಯನ್ನು ಬರೋಬ್ಬರಿ ಐವರು ಬ್ಯಾಟ್ಸ್‌ಮನ್‌ಗಳು ಮಾಡಿದ್ದು, ಈ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಕೂಡ ಇದ್ದಾರೆ. ಇನ್ನು ಐಪಿಎಲ್ ಇತಿಹಾಸದಲ್ಲಿ 13 ಬಾರಿ ( ಅತಿಹೆಚ್ಚು ) ಶೂನ್ಯ ಸುತ್ತಿರುವ ಎಲ್ಲಾ ಐವರು ಆಟಗಾರರ ಪಟ್ಟಿ ಮಂದೆ ಇದೆ.
1. 82 ಐಪಿಎಲ್ ಇನ್ನಿಂಗ್ಸ್ ಆಡಿರುವ ಪಿಯೂಷ್ ಚಾವ್ಲಾ 12 ಬಾರಿ ಡಕ್ಔಟ್ ಆಗಿದ್ದಾರೆ.
2. ಹರ್ಭಜನ್ ಸಿಂಗ್ - 90 ಐಪಿಎಲ್ ಇನ್ನಿಂಗ್ಸ್‌ನ್ಲಲಿ ಕಣಕ್ಕಿಳಿದಿದ್ದು 13 ಬಾರಿ ಡಕ್ಔಟ್ ಆಗಿದ್ದಾರೆ.
3. ಪಾರ್ಥಿವ್ ಪಟೇಲ್ - ಒಟ್ಟಾರೆ 137 ಐಪಿಎಲ್ ಇನ್ನಿಂಗ್ಸ್ ಆಡಿರುವ ಪಟೇಲ್ 13 ಬಾರಿ ಶೂನ್ಯ ಸುತ್ತಿದ್ದಾರೆ.
4. ಅಜಿಂಕ್ಯಾ ರಹಾನೆ - ಒಟ್ಟು 141 ಐಪಿಎಲ್ ಇನ್ನಿಂಗ್ಸ್ ಆಡಿರುವ ಅಜಿಂಕ್ಯಾ ರಹಾನೆ ಕೂಡ ಈ ಕೆಟ್ಟ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ.
5. ಅಂಬಟಿ ರಾಯಡು - 156 ಐಪಿಎಲ್ ಇನ್ನಿಂಗ್ಸ್‌ನಲ್ಲಿ ಕಣಕ್ಕಿಳಿದಿರುವ ಅಂಬಟಿ ರಾಯುಡು 13 ಬಾರಿ ಯಾವುದೇ ರನ್ ಗಳಿಸದೇ ವಿಫಲರಾಗಿ ಈ ಕೆಟ್ಟ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
6. ರೋಹಿತ್ ಶರ್ಮಾ - 202 ಐಪಿಎಲ್ ಇನ್ನಿಂಗ್ಸ್ ಆಡಿರುವ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಕೂಡ 13 ಬಾರಿ ಶೂನ್ಯ ಸುತ್ತಿ ಪೆವಿಲಿಯನ್ ಸೇರಿಕೊಂಡಿದ್ದಾರೆ.

12 ಬಾರಿ ಡಕ್ಔಟ್ ಆದವರು
1. 91 ಐಪಿಎಲ್ ಇನ್ನಿಂಗ್ಸ್ ಆಡಿರುವ ಮನ್‌ದೀಪ್ ಸಿಂಗ್ ಕೂಡ 12 ಬಾರಿ ಡಕ್ಔಟ್ ಆಗಿದ್ದಾರೆ.
2. 140 ಐಪಿಎಲ್ ಇನ್ನಿಂಗ್ಸ್‌ನಲ್ಲಿ ಕಣಕ್ಕಿಳಿದಿರುವ ಮನೀಶ್ ಪಾಂಡೆ ಕೂಡ 12 ಬಾರಿ ಡಕ್ಔಟ್ ಆಗಿದ್ದಾರೆ.
3. ಒಟ್ಟು 152 ಐಪಿಎಲ್ ಇನ್ನಿಂಗ್ಸ್ ಆಡಿರುವ ಗೌತಮ್ ಗಂಭೀರ್ ಕೂಡ 12 ಬಾರಿ ಡಕ್ಔಟ್ ಆಗಿದ್ದಾರೆ.
4. 192 ಐಪಿಎಲ್ ಇನ್ನಿಂಗ್ಸ್ ಆಡಿರುವ ದಿನೇಶ್ ಕಾರ್ತಿಕ್ ಕೂಡ 12 ಬಾರಿ ಡಕ್ಔಟ್ ಆಗಿದ್ದಾರೆ.

ಈ ಮೇಲಿನ ಪಟ್ಟಿ ಸೇರ್ತಾರಾ ಮ್ಯಾಕ್ಸ್‌ವೆಲ್?
ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಮಿಂಚಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಐಪಿಎಲ್ ಇತಿಹಾಸದಲ್ಲಿ ಇದುವರೆಗೂ ಒಟ್ಟು 93 ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಬೀಸಿದ್ದು, 11 ಬಾರಿ ಡಕ್ಔಟ್ ಆಗಿದ್ದಾರೆ. ಹೀಗೆ 11 ಬಾರಿ ಡಕ್ಔಟ್ ಆಗಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಒಮ್ಮೆ ಅಥವಾ ಎರಡು ಬಾರಿ ಶೂನ್ಯ ಸುತ್ತಿದರೆ ಮೇಲ್ಕಂಡ ಪಟ್ಟಿ ಸೇರುವುದು ಖಚಿತ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications