For Quick Alerts
ALLOW NOTIFICATIONS  
For Daily Alerts
 

IPL 2022ಕ್ಕೆ ಆರಂಭಿಕ ಹಿನ್ನಡೆ: ಈ ಪ್ರಮುಖ ಆಟಗಾರರು ಟೂರ್ನಿಯಲ್ಲಿ ಆಡುವುದಿಲ್ಲ!

IPL 2022 Auction

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಸೀಸನ್‌ ಆರಂಭಕ್ಕೆ ಈಗಾಗಲೇ ದಿನಗಣನೆ ಶುರುವಾಗಿದ್ದು, ಯಾವಾಗ ಪಂದ್ಯಗಳ ವೇಳಾಪಟ್ಟಿ ಘೋಷಣೆಯಾಗುತ್ತದೆ ಎಂಬುದನ್ನ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಈಗಾಗಲೇ ಆಟಗಾರರ ರೀಟೈನ್ ಪ್ರಕ್ರಿಯೆ ಮುಗಿದಿದ್ದು, ಫೆಬ್ರವರಿ 12, 13ಕ್ಕೆ ಮೆಗಾ ಹರಾಜು ಪ್ರಕ್ರಿಯೆಗೆ ಮುಹೂರ್ತ ನಿಗದಿಯಾಗಿದೆ.

ಆದ್ರೆ ಇದರ ನಡುವೆ ಪ್ರಮುಖ ಸ್ಟಾರ್ ಆಟಗಾರರೇ ಈ ಬಾರಿಯ ಐಪಿಎಲ್ ಸೀಸನ್‌ನಲ್ಲಿ ಆಡುತ್ತಿಲ್ಲ ಅನ್ನೋದು ಅಭಿಮಾನಿಗಳಿಗೆ ಬೇಸರ ತರಿಸಲಿದೆ. ಇಂಗ್ಲೆಂಡ್ ತಂಡದ ಬೆನ್ ಸ್ಟೋಕ್ಸ್, ಜೊಫ್ರಾ ಆರ್ಚರ್, ಜೋ ರೂಟ್ ಮತ್ತು ಆಸ್ಟ್ರೇಲಿಯಾ ಮಿಚೆಲ್ ಸ್ಟಾರ್ಕ್‌, ವಿಂಡೀಸ್‌ ಟಿ20 ದೈತ್ಯ ಕ್ರಿಸ್‌ಗೇಲ್ ಈ ಬಾರಿಯ ಐಪಿಎಲ್‌ನಲ್ಲಿ ಭಾಗಿಯಾಗದಿರಲು ನಿರ್ಧರಿಸಿದ್ದಾರೆ.

ಹರಾಜು ಪ್ರಕ್ರಿಯೆಗೂ ಮುನ್ನ ಟೂರ್ನಿಯಲ್ಲಿ ಭಾಗವಹಿಸಲಿಚ್ಚಿಸುವ ಆಟಗಾರರು ತಮ್ಮ ಹೆಸರನ್ನು ನಮೂದಿಸಬೇಕಾಗಿದ್ದು, ಈ ಮೇಲ್ಕಂಡ ಆಟಗಾರರು ಹರಾಜಿನಲ್ಲಿ ಭಾಗಿಯಾಗದಿರಲು ನಿರ್ಧರಿಸಿದ್ದಾರೆ.

ಇಂಗ್ಲೆಂಡ್‌ನ ಪ್ರಮುಖ ಆಟಗಾರರೇ ಭಾಗಿಯಾಗುತ್ತಿಲ್ಲ

ಇಂಗ್ಲೆಂಡ್‌ನ ಪ್ರಮುಖ ಆಟಗಾರರೇ ಭಾಗಿಯಾಗುತ್ತಿಲ್ಲ

ಇಂಗ್ಲೆಂಡ್ ನಾಯಕ ಜೋ ರೂಟ್ ಈ ಮೊದಲೇ ತಿಳಿಸಿದಂತೆ ಇಂಗ್ಲೆಂಡ್ ಮತ್ತು ಟೆಸ್ಟ್ ಕ್ರಿಕೆಟ್‌ಗಾಗಿ ಐಪಿಎಲ್‌ ತ್ಯಾಗ ಮಾಡುವುದಾಗಿ ಹೇಳಿದ್ದಾರೆ. ಆದ್ರೆ ಬೆನ್‌ ಸ್ಟೋಕ್ಸ್‌, ಜೊಫ್ರಾ ಆರ್ಚರ್ , ಸ್ಯಾಮ್ ಕರನ್ ಮತ್ತು ಆಸೀಸ್‌ನ ಮಿಚೆಲ್ ಸ್ಟಾರ್ಕ್ ಭಾಗಿಯಾಗದೇ ಇರುವುದು ಆಶ್ಚರ್ಯ ಮೂಡಿಸಿದೆ.

ಮಿಚೆಲ್ ಸ್ಟಾರ್ಕ್‌ ಈ ಬಾರಿಯೂ ಗೈರು

ಮಿಚೆಲ್ ಸ್ಟಾರ್ಕ್‌ ಈ ಬಾರಿಯೂ ಗೈರು

ಈ ಮೊದಲು ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ವೇಗಿ ಮಿಚೆಲ್ ಸ್ಟಾರ್ಕ್‌ ಮತ್ತೆ ಐಪಿಎಲ್‌ನಲ್ಲಿ ಆಡುವ ಇಂಗಿತ ವ್ಯಕ್ತಪಡಿಸಿದ್ದರು, ಆದ್ರೀಗ ಸ್ಟಾರ್ಕ್‌ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. 2014 ರ ಐಪಿಎಲ್ ಹರಾಜಿನಲ್ಲಿದ್ದ ಸ್ಟಾರ್ಕ್​ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿತ್ತು. ಆರ್​ಸಿಬಿ ಪರ 2 ಸೀಸನ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಸ್ಟಾರ್ 27 ಪಂದ್ಯಗಳಿಂದ 34 ವಿಕೆಟ್ ಕಬಳಿಸಿದ್ದರು. ಇದಾದ ಬಳಿಕ ಸ್ಟಾರ್ ಐಪಿಎಲ್​ನಲ್ಲಿ ಭಾಗವಹಿಸಿರಲಿಲ್ಲ. ಈ ಸೀಸನ್‌ ಕೂಡ ಭಾಗಿಯಾಗದಿರಲು ಸ್ಟಾರ್ಕ್ ನಿರ್ಧರಿಸಿದ್ದಾರೆ.

1,214 ಆಟಗಾರರ ಹೆಸರು ರಿಜಿಸ್ಟರ್ ಪಟ್ಟಿಯಲ್ಲಿ ಸೇರ್ಪಡೆ

1,214 ಆಟಗಾರರ ಹೆಸರು ರಿಜಿಸ್ಟರ್ ಪಟ್ಟಿಯಲ್ಲಿ ಸೇರ್ಪಡೆ

ಶುಕ್ರವಾರ ರಾತ್ರಿ (ಜನವರಿ 22) ಐಪಿಎಲ್ ಫ್ರಾಂಚೈಸಿಗಳೊಂದಿಗೆ ಹಂಚಿಕೊಂಡ ಹರಾಜು ರಿಜಿಸ್ಟರ್‌ನ ಆರಂಭಿಕ ಪಟ್ಟಿಗೆ 1200 ಕ್ಕೂ ಹೆಚ್ಚು ಆಟಗಾರರು ಸ್ಥಾನ ಪಡೆದಿದ್ದಾರೆ. ಇವರಲ್ಲಿ ಪ್ಯಾಟ್ ಕಮ್ಮಿನ್ಸ್ (ಆಸ್ಟ್ರೇಲಿಯಾ, ಮೂಲ ಬೆಲೆ ರೂ 2 ಕೋಟಿ), ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ, 2 ಕೋಟಿ), ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ, 2 ಕೋಟಿ), ಕ್ವಿಂಟನ್ ಡಿ ಕಾಕ್ (ದಕ್ಷಿಣ ಆಫ್ರಿಕಾ, 2 ಕೋಟಿ ರೂ.), ಫಾಫ್ ಡು ಪ್ಲೆಸಿಸ್ (ದಕ್ಷಿಣ ಆಫ್ರಿಕಾ, 2 ಕೋಟಿ ರೂ.) ಮತ್ತು ಮಾರ್ಕ್ ವುಡ್ (ಇಂಗ್ಲೆಂಡ್, 2 ಕೋಟಿ ರೂ). ವೇಗದ ಬೌಲರ್‌ಗಳಲ್ಲಿ ಒಬ್ಬರಾದ ಮಾರ್ಕ್ ವುಡ್ ಕಳೆದ ವರ್ಷದ ಹರಾಜಿನಲ್ಲಿ ಭಾಗಿಯಾಗಿರಲಿಲ್ಲ.

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಟೆಸ್ಟ್ ಸರಣಿಯಲ್ಲಿ ಭಾರತಕ್ಕೆ ಕಾಡಿದ ದಕ್ಷಿಣ ಆಫ್ರಿಕಾದ ವೇಗಿಗಳಾದ ಕಗಿಸೊ ರಬಾಡ (2 ಕೋಟಿ ರೂ.) ಮತ್ತು ಲುಂಗಿ ಎನ್‌ಗಿಡಿ (50 ಲಕ್ಷ) ಮತ್ತು ಮಾರ್ಕೊ ಜಾನ್ಸೆನ್ (50 ಲಕ್ಷ) ಅವರು ಹರಾಜಿಗೆ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ.

KL ರಾಹುಲ್‌ಗೆ 17 ಕೋಟಿ ನೀಡಿ ಖರೀದಿಸಿದ ಲಕ್ನೋ ಫ್ರಾಂಚೈಸಿ: ಐಪಿಎಲ್‌ನಲ್ಲೇ ಗರಿಷ್ಠ ಮೊತ್ತ

ದೇಶೀಯ ಆಟಗಾರರು/ವಿದೇಶಿ ಆಟಗಾರರು

ದೇಶೀಯ ಆಟಗಾರರು/ವಿದೇಶಿ ಆಟಗಾರರು

ಹರಾಜು ರಿಜಿಸ್ಟರ್‌ನಲ್ಲಿರುವ 1,214 ಹೆಸರುಗಳಲ್ಲಿ 896 ಭಾರತೀಯ ಆಟಗಾರರು ಮತ್ತು 318 ವಿದೇಶಿ ಆಟಗಾರರಿದ್ದಾರೆ. ಈ ಪಟ್ಟಿಯಲ್ಲಿ ನೇಪಾಳ, ಯುಎಇ, ಓಮನ್, ಸ್ಕಾಟ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್‌ನಂತಹ 270 ಕ್ಯಾಪ್ಡ್, 903 ಅನ್‌ಕ್ಯಾಪ್ಡ್ ಮತ್ತು 41 ಆಟಗಾರರನ್ನು ಒಳಗೊಂಡಿದೆ. ಅಮೆರಿಕದ 14 ಆಟಗಾರರು ಕೂಡ ಇದ್ದಾರೆ.

ನಿರ್ಗತಿಕ ವೃದ್ಧನಿಗೆ ನೆರವಾದ ಟ್ರಾಫಿಕ್ ಪೊಲೀಸ್ ವೀಡಿಯೋ ಫುಲ್ ವೈರಲ್ | Oneindia Kannada
ಫ್ರಾಂಚೈಸಿಗಳ ಪರ್ಸ್‌ ಮೌಲ್ಯ ಎಷ್ಟು ಬಾಕಿ ಉಳಿದಿದೆ?

ಫ್ರಾಂಚೈಸಿಗಳ ಪರ್ಸ್‌ ಮೌಲ್ಯ ಎಷ್ಟು ಬಾಕಿ ಉಳಿದಿದೆ?

ಯಾವ ಫ್ರಾಂಚೈಸಿ ಎಷ್ಟು ಆಟಗಾರರನ್ನ ರೀಟೈನ್/ಖರೀದಿ ಮಾಡಿಕೊಂಡಿದೆ ಮತ್ತು ಪರ್ಸ್‌ ಮೌಲ್ಯ ಎಷ್ಟು ಉಳಿದಿದೆ ಎಂಬುದನ್ನ ಈ ಕೆಳಗೆ ನೋಡಬಹುದು


ಸಿಎಸ್‌ಕೆ : 4 ಆಟಗಾರರು (48 ಕೋಟಿ ರೂಪಾಯಿ)
ಮುಂಬೈ ಇಂಡಿಯನ್ಸ್ : 4 ಆಟಗಾರರು (48 ಕೋಟಿ ರೂಪಾಯಿ)
ಡೆಲ್ಲಿ ಕ್ಯಾಪಿಟಲ್ಸ್ : 4 ಆಟಗಾರರು (47.5 ಕೋಟಿ ರೂಪಾಯಿ)
ಕೆಕೆಆರ್ : 4 ಆಟಗಾರರು (48 ಕೋಟಿ ರೂಪಾಯಿ)
ಆರ್‌ಸಿಬಿ : 3 ಆಟಗಾರರು (57 ಕೋಟಿ ರೂಪಾಯಿ)
ಆರ್‌ಆರ್‌ : 3 ಆಟಗಾರರು (62 ಕೋಟಿ ರೂಪಾಯಿ)
ಎಸ್‌ಆರ್‌ಎಚ್‌ : 3 ಆಟಗಾರರು (68 ಕೋಟಿ ರೂಪಾಯಿ)
ಪಿಬಿಕೆಎಸ್‌ : 3 ಆಟಗಾರರು (72 ಕೋಟಿ ರೂಪಾಯಿ)
ಲಕ್ನೋ : 3 ಆಟಗಾರರು (59.8 ಕೋಟಿ ರೂಪಾಯಿ)
ಅಹಮದಾಬಾದ್ : 3 ಆಟಗಾರರು (52 ಕೋಟಿ ರೂಪಾಯಿ)

Story first published: Saturday, January 22, 2022, 17:19 [IST]
Other articles published on Jan 22, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+