IPL 2022: ಮೊದಲ ಅಭ್ಯಾಸ ಪಂದ್ಯವನ್ನಾಡಿದ ಸನ್‌ರೈಸರ್ಸ್ ಹೈದ್ರಾಬಾದ್, ಭುವಿ ತಂಡಕ್ಕೆ ಗೆಲುವು

ಐಪಿಎಲ್ 2022ರ ತಯಾರಿಯ ಭಾಗವಾಗಿ ಸನ್ ರೈಸರ್ಸ್ ಹೈದರಾಬಾದ್ ತಂಡ ಇಂದು ಅಭ್ಯಾಸ ಆರಂಭಿಸಿದೆ. ತಂಡದ ಎಲ್ಲಾ ಆಟಗಾರರು ಎರಡು ತಂಡಗಳಾಗಿ ವಿಭಜನೆಗೊಂಡು ಅಭ್ಯಾಸ ಪಂದ್ಯ ಆಡಿದರು. ಎರಡು ತಂಡಗಳನ್ನು ಕೇನ್ ವಿಲಿಯಮ್ಸನ್ ತಂಡ ಮತ್ತು ಭುವನೇಶ್ವರ್ ಕುಮಾರ್ ತಂಡ ಎಂದು ವಿಂಗಡಿಸಲಾಗಿತ್ತು.
ಅಭ್ಯಾಸ ಪಂದ್ಯದ ವಿವರಗಳನ್ನು ಸನ್ ರೈಸರ್ಸ್ ಹೈದರಾಬಾದ್ ತಂಡವು ತಮ್ಮ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಬಹಿರಂಗಪಡಿಸಿದೆ. ಯೂಟ್ಯೂಬ್‌ನಲ್ಲಿ ಲೈವ್ ಕೂಡ ಹಾಕಿ. ಈ ಪಂದ್ಯದಲ್ಲಿ ಕೇನ್ ತಂಡದ ವಿರುದ್ಧ ಭುವನೇಶ್ವರ್ ಕುಮಾರ್ ಬಳಗ ಮೇಲುಗೈ ಸಾಧಿಸಿತು.
ಕೇನ್ ವಿಲಿಯಮ್ಸನ್ ಟೀಂ
ಮೊದಲು ಬ್ಯಾಟಿಂಗ್ ಮಾಡಿದ ಕೇನ್ ವಿಲಿಯಮ್ಸನ್ ಬಳಗ ನಿಗದಿತ 20 ಓವರ್‌ಗಳಲ್ಲಿ 146 ರನ್ ಗಳಿಸಿತು. ಆರಂಭಿಕರಾದ ಕೇನ್ ವಿಲಿಯಮ್ಸನ್ ಮತ್ತು ಪ್ರಿಯಾಂ ಗಾರ್ಗ್ ಅವರು ತಂಡದ ಪರ ಓಪನಿಂಗ್ ಮಾಡಿದ್ರೆ, ಭುವಿ ಮೊದಲಿಗೆ ಬೌಲಿಂಗ್ ಮಾಡಿದ್ರು. 10 ಓವರ್‌ಗಳ ಅಂತ್ಯಕ್ಕೆ ವಿಲಿಯಮ್ಸನ್ ಪಡೆ 2 ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿತು. 16 ಓವರ್‌ಗಳ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 114 ರನ್ ಗಳಿಸಿತು. ಆಗ ತ್ರಿಪಾಠಿ (24) ಮತ್ತು ವಾಷಿಂಗ್ಟನ್ ಸುಂದರ್ (26) ಕ್ರೀಸ್‌ನಲ್ಲಿದ್ದರು. ಎದುರಾಳಿ ಬೌಲರ್‌ಗಳ ಸ್ಥಿರ ಬೌಲಿಂಗ್‌ನಿಂದಾಗಿ ಕೇನ್ ತಂಡ ಕೊನೆಯ 4 ಓವರ್‌ಗಳಲ್ಲಿ ಕೇವಲ 32 ರನ್ ಗಳಿಸಿತು.
ಭುವನೇಶ್ವರ್ ಟೀಮ್‌ಗೆ ಜಯ
147 ರನ್‌ಗಳ ಸಾಧಾರಣ ಗುರಿಯೊಂದಿಗೆ ಕಣಕ್ಕೆ ಇಳಿದ ಭುವನೇಶ್ವರ್ ತಂಡ ಇನ್ನೂ 5 ಓವರ್‌ಗಳು ಬಾಕಿ ಇರುವಂತೆಯೇ ಗುರಿ ಬೆನ್ನತ್ತಿ 6 ವಿಕೆಟ್‌ಗಳ ಜಯ ಸಾಧಿಸಿತು. ನಿಕೋಲಸ್ ಪೂರನ್ 30 ಎಸೆತಗಳಲ್ಲಿ 45 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ಗುರಿ ಬೆನ್ನತ್ತಿದ ಭುವಿ ತಂಡಕ್ಕೆ ಆರಂಭಿಕರಾದ ಅಭಿಷೇಕ್ ಶರ್ಮಾ ಮತ್ತು ಆರ್ ಸಮರ್ಥ್ ಉತ್ತಮ ಆರಂಭ ನೀಡಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 5 ಓವರ್‌ಗಳಲ್ಲಿ 51 ರನ್‌ಗಳ ಅಜೇಯ ಅರ್ಧಶತಕದ ಜೊತೆಯಾಟ ನೀಡಿದರು. ಭುವನೇಶ್ವರ್ ತಂಡ 10 ಓವರ್ ಗಳ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿ ಬಲಿಷ್ಠ ಸ್ಥಿತಿಯಲ್ಲಿತ್ತು. ಅಲ್ಲದೆ 5 ಓವರ್ ಬಾಕಿ ಇರುವಂತೆಯೇ ಗುರಿ ತಲುಪಿತು.
ಎಸ್‌ಆರ್‌ಎಚ್ ಫುಲ್ ಸ್ಕ್ವಾಡ್
ಕೇನ್ ವಿಲಿಯಮ್ಸನ್, ರಾಹುಲ್ ತ್ರಿಪಾಠಿ, ನಿಕೋಲಸ್ ಪೂರನ್, ಏಡನ್ ಮಕ್ರಾಮ್, ವಾಷಿಂಗ್ಟನ್ ಸುಂದರ್, ಅಬ್ದುಲ್ ಸಮದ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಕಾರ್ತಿಕ್ ತ್ಯಾಗಿ, ಟಿ ನಟರಾಜನ್, ಉಮ್ರಾನ್ ಮಲಿಕ್, ಪ್ರಿಯಾಂ ಗಾರ್ಗ್, ಜೆ ಸುಚಿತ್, ಶ್ರೇಯಸ್ ಗೋಪರ್, ಅಭಿಷೇಕ್, ಆರ್ ಸಮರ್ಥ್, ಶಶಾಂಕ್, ಶಶಾಂಕ್, ಸೌರಭ್ ದುಬೆ, ವಿಷ್ಣು ವಿನೋದ್, ಗ್ಲೆನ್ ಫಿಲಿಪ್ಸ್, ಫಜಲ್ಹಾ ಫಾರೂಕಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications