ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

CSK vs DC: ಚೆನ್ನೈ ಬೌಲಿಂಗ್‌ ದಾಳಿಗೆ ತತ್ತರಿಸಿದ ಡೆಲ್ಲಿ; ಸೂಪರ್ ಕಿಂಗ್ಸ್ ಪ್ಲೇ ಆಫ್ ಆಸೆ ಇನ್ನೂ ಜೀವಂತ

IPL 2022: Chennai Super Kings beats Delhi Capitals by 91 runs

ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 55ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದು, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 91 ರನ್‌ಗಳ ಬೃಹತ್ ಗೆಲುವನ್ನು ದಾಖಲಿಸಿದೆ. ಹೀಗೆ ಬೃಹತ್ ಗೆಲುವನ್ನು ದಾಖಲಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಪ್ಲೇ ಆಫ್ ಆಸೆಯನ್ನು ಇನ್ನೂ ಜೀವಂತವಾಗಿರಿಸಿಕೊಂಡಿದೆ.

ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಬೌಲಿಂಗ್ ಆಯ್ದುಕೊಂಡು ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 208 ರನ್ ಕಲೆಹಾಕಿ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 209 ರನ್‌ಗಳ ಕಠಿಣ ಗುರಿಯನ್ನು ನೀಡಿತು.

ಆದರೆ ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾಗಿ ನೆಲಕಚ್ಚಿದ ಡೆಲ್ಲಿ ಕ್ಯಾಪಿಟಲ್ಸ್ 17.4 ಓವರ್‌ಗಳಲ್ಲಿ 117 ರನ್‌ಗಳಿಗೆ ಆಲ್ ಔಟ್ ಆಯಿತು.

ವಿರಾಟ್ ಕೊಹ್ಲಿ ಕಳಪೆ ಫಾರ್ಮ್; ಆದರೂ ಭಾರತ ತಂಡದಿಂದ ವಿಶ್ರಾಂತಿ ಬೇಡವೆಂದ ಮಾಜಿ ಕ್ರಿಕಟಿಗವಿರಾಟ್ ಕೊಹ್ಲಿ ಕಳಪೆ ಫಾರ್ಮ್; ಆದರೂ ಭಾರತ ತಂಡದಿಂದ ವಿಶ್ರಾಂತಿ ಬೇಡವೆಂದ ಮಾಜಿ ಕ್ರಿಕಟಿಗ

ಚೆನ್ನೈ ಸೂಪರ್ ಕಿಂಗ್ಸ್ ಇನ್ನಿಂಗ್ಸ್: ಚೆನ್ನೈ ಸೂಪರ್ ಕಿಂಗ್ಸ್ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ರುತುರಾಜ್ ಗಾಯಕ್ವಾಡ್ ಮತ್ತು ಡಿವೋನ್ ಕಾನ್ವೆ ಪವರ್ ಪ್ಲೇನಲ್ಲಿಯೇ 57 ರನ್ ಚಚ್ಚಿ 110 ರನ್‌ಗಳ ಅಮೋಘ ಜೊತೆಯಾಟ ಆಡುವುದರ ಮೂಲಕ ತಂಡಕ್ಕೆ ಉತ್ತಮ ಆರಂಭವನ್ನು ಕಟ್ಟಿಕೊಟ್ಟರು. ರುತುರಾಜ್ ಗಾಯಕ್ವಾಡ್ 33 ರನ್ ಗಳಿಸಿ ಔಟ್ ಆದರೆ, ಡಿವೋನ್ ಕಾನ್ವೆ 49 ಎಸೆತಗಳಲ್ಲಿ 87 ರನ್ ಬಾರಿಸಿ ಮಿಂಚಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಿವಂ ದುಬೆ 19 ಎಸೆತಗಳಲ್ಲಿ 32 ರನ್ ಬಾರಿಸಿ ಅಬ್ಬರಿಸಿದರೆ, ಅಂಬಾಟಿ ರಾಯುಡು 5 ರನ್ ಗಳಿಸಿದರು, ಮೊಯಿನ್ ಅಲಿ 9 ರನ್, ರಾಬಿನ್ ಉತ್ತಪ್ಪ ಗೋಲ್ಡನ್ ಡಕ್ ಔಟ್, ಎಂ ಎಸ್ ಧೋನಿ ಅಜೇಯ 21 ರನ್ ಹಾಗೂ ಡ್ವೇಯ್ನ್ ಬ್ರಾವೋ ಅಜೇಯ 1 ರನ್ ಕಲೆಹಾಕಿದರು.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆನ್ರಿಚ್ ನಾರ್ಕಿಯಾ 3 ವಿಕೆಟ್, ಖಲೀಲ್ ಅಹ್ಮದ್ 2 ವಿಕೆಟ್ ಮತ್ತು ಮಿಚೆಲ್ ಮಾರ್ಷ್ 1 ವಿಕೆಟ್‌ ಪಡೆದರು.

ಮ್ಯಾಡ್ರಿಡ್ ಓಪನ್; 19 ವರ್ಷದ ಕಾರ್ಲೋಸ್ ಅಲ್ಕರಾಜ್ ವಿರುದ್ಧ ಸೋತ ನೊವಾಕ್ ಜೊಕೊವಿಕ್ಮ್ಯಾಡ್ರಿಡ್ ಓಪನ್; 19 ವರ್ಷದ ಕಾರ್ಲೋಸ್ ಅಲ್ಕರಾಜ್ ವಿರುದ್ಧ ಸೋತ ನೊವಾಕ್ ಜೊಕೊವಿಕ್

ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್: ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್ ಮತ್ತು ಶ್ರೀಕರ್ ಭರತ್ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ಶ್ರೀಕರ್ ಭರತ್ 8 ರನ್ ಗಳಿಸಿದರೆ, ಡೇವಿಡ್ ವಾರ್ನರ್ 19 ರನ್ ಗಳಿಸಿದರು. ಇನ್ನುಳಿದಂತೆ ಮಿಚೆಲ್ ಮಾರ್ಷ್ 25 ರನ್, ನಾಯಕ ರಿಷಭ್ ಪಂತ್ 21 ರನ್, ರೋವ್ಮನ್ ಪೊವೆಲ್ 3 ರನ್, ರಿಪಾನ್ ಪಟೇಲ್ 6 ರನ್, ಅಕ್ಷರ್ ಪಟೇಲ್ 1 ರನ್, ಕುಲದೀಪ್ ಯಾದವ್ 5 ರನ್, ಶಾರ್ದೂಲ್ ಠಾಕೂರ್ 24 ರನ್, ಖಲೀಲ್ ಅಹ್ಮದ್ 0 ರನ್ ಮತ್ತು ಅನ್ರಿಚ್ ನಾರ್ಕಿಯಾ ಅಜೇಯ 1 ರನ್ ಕಲೆ ಹಾಕಿದರು.

KL Rahul ಪಂದ್ಯ ಗೆದ್ದರೂ ಬೇಜಾರಾಗಿದ್ದೇಕೆ | Oneindia kannada

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಮೊಯಿನ್ ಅಲಿ 3 ವಿಕೆಟ್ ಗಳಿಸಿದರೆ, ಮುಖೇಶ್ ಚೌಧರಿ, ಸಿಮರ್ ಜೀತ್ ಸಿಂಗ್ ಮತ್ತು ಡ್ವೇನ್ ಬ್ರಾವೊ ತಲಾ 2 ವಿಕೆಟ್ ಪಡೆದರು ಹಾಗೂ ಮಹೀಶ್ ತೀಕ್ಷಣ 1 ವಿಕೆಟ್ ಪಡೆದರು.

Story first published: Monday, May 9, 2022, 9:44 [IST]
Other articles published on May 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X