
ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 62ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇತ್ತಂಡಗಳ ನಡುವಿನ ಈ ಪಂದ್ಯ ನಾಳೆ ( ಮೇ 15 ) ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇನ್ನು ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲುಂಡ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್ ಪ್ರವೇಶಿಸುವ ಅವಕಾಶವನ್ನು ಕಳೆದುಕೊಂಡಿದ್ದು, ಈ ಪಂದ್ಯದ ಫಲಿತಾಂಶ ತಂಡದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನಬಹುದು.
ಅತ್ತ ಗುಜರಾತ್ ಟೈಟನ್ಸ್ 18 ಅಂಕಗಳನ್ನು ಪಡೆದುಕೊಂಡು ಈಗಾಗಲೇ ಪ್ಲೇ ಆಫ್ ಸುತ್ತಿಗೆ ಅಧಿಕೃತವಾಗಿ ಲಗ್ಗೆ ಇಟ್ಟಿದ್ದು, ಈ ಪಂದ್ಯದಲ್ಲಿ ಗೆದ್ದರೆ ತನ್ನ ಅಗ್ರಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳಲಿದೆ. ಹೀಗೆ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಈಗಾಗಲೇ ಪ್ಲೇ ಆಫ್ ಪ್ರವೇಶಿಸಿರುವ ತಂಡ ಹಾಗೂ ಪ್ಲೇ ಆಫ್ ಸುತ್ತಿಗೆ ಅರ್ಹತೆ ಪಡೆದುಕೊಳ್ಳುವಲ್ಲಿ ವಿಫಲವಾಗಿರುವ ತಂಡದ ನಡುವೆ ನಡೆಯಲಿರುವ ಈ ಪಂದ್ಯ ಕುತೂಹಲ ಹುಟ್ಟಿಸುವಲ್ಲಿ ವಿಫಲವಾಗಿದ್ದು, ಪಂದ್ಯಕ್ಕಾಗಿ ಡ್ರೀಮ್ ಟೀಮ್ ರಚಿಸುವ ಕ್ರಿಕೆಟ್ ಅಭಿಮಾನಿಗಳು ಮಾತ್ರ ಯಾವ ಆಟಗಾರ ಉತ್ತಮ ಪ್ರದರ್ಶನ ನೀಡಬಹುದು ಎಂಬುದನ್ನು ಊಹಿಸುವಲ್ಲಿ ನಿರತರಾಗಿದ್ದಾರೆ.
ಹೀಗೆ ಈ ಪಂದ್ಯಕ್ಕಾಗಿ ಡ್ರೀಮ್ ಟೀಮ್ ರಚಿಸುತ್ತಿರುವ ಅಭಿಮಾನಿಗಳು ಈ ಕೆಳಕಂಡಂತೆ ಆಟಗಾರರನ್ನು ಆಯ್ಕೆ ಮಾಡಿ ತಂಡವನ್ನು ರಚಿಸುವುದು ಉತ್ತಮ ಎನ್ನಬಹುದು.
ಡ್ರೀಮ್ ಟೀಮ್ 1: 1 ವೃದ್ಧಿಮಾನ್ ಸಹಾ, 2 ರುತುರಾಜ್ ಗಾಯಕ್ವಾಡ್, 3 ಡೆವೊನ್ ಕಾನ್ವೇ, 4 ಅಂಬಟಿ ರಾಯುಡು, 5 ಡೇವಿಡ್ ಮಿಲ್ಲರ್, 6 MS ಧೋನಿ, 7 ರಶೀದ್ ಖಾನ್, 8 ಅಲ್ಜಾರಿ ಜೋಸೆಫ್, 9 ಮುಖೇಶ್ ಚೌಧರಿ, 10 ಮೊಹಮ್ಮದ್ ಶಮಿ ಡೇ, 111.
ನಾಯಕ: ಎಂಎಸ್ ಧೋನಿ, ಉಪನಾಯಕ: ಡೇವಿಡ್ ಮಿಲ್ಲರ್, ವಿಕೆಟ್ ಕೀಪರ್: ವೃದ್ಧಿಮಾನ್ ಸಹಾ.
ಡ್ರೀಮ್ ಟೀಮ್ 2: 1 ಶುಭಮನ್ ಗಿಲ್, 2 ಡೆವೊನ್ ಕಾನ್ವೆ, 3 ಅಂಬಟಿ ರಾಯುಡು, 4 ಹಾರ್ದಿಕ್ ಪಾಂಡ್ಯ, 5 ರಾಹುಲ್ ತೆವಾಟಿಯಾ, 6 MS ಧೋನಿ, 7 ರಶೀದ್ ಖಾನ್, 8 ಅಲ್ಜಾರಿ ಜೋಸೆಫ್, 9 ಮಹೀಶ್ ತೀಕ್ಷಣ, 10 ಸಿಮರ್ಜೀತ್, ಮೊಹಮ್ಮದ್ ಸಿಂಗ್.
ನಾಯಕ: ಹಾರ್ದಿಕ್ ಪಾಂಡ್ಯ, ಉಪನಾಯಕ: ರಶೀದ್ ಖಾನ್, ವಿಕೆಟ್ ಕೀಪರ್: ಎಂಎಸ್ ಧೋನಿ.
ಸಂಭಾವ್ಯ ಆಡುವ ಬಳಗ:
ಗುಜರಾತ್ ಟೈಟಾನ್ಸ್: 1 ವೃದ್ಧಿಮಾನ್ ಸಹಾ, 2 ಶುಭಮನ್ ಗಿಲ್, 3 ಹಾರ್ದಿಕ್ ಪಾಂಡ್ಯ, 4 ಮ್ಯಾಥ್ಯೂ ವೇಡ್ / ಲಾಕಿ ಫರ್ಗುಸನ್, 5 ಡೇವಿಡ್ ಮಿಲ್ಲರ್, 6 ರಾಹುಲ್ ತೆವಾಟಿಯಾ, 7 ರಶೀದ್ ಖಾನ್, 8 ಯಶ್ ದಯಾಲ್, 9 ಆರ್ ಸಾಯಿ ಕಿಶೋರ್, 10 ಅಲ್ಜಾರಿ ಜೋಸೆಫ್, 11 ಮೊಹಮ್ಮದ್ ಶಮಿ
ಚೆನ್ನೈ ಸೂಪರ್ ಕಿಂಗ್ಸ್: 1. ರುತುರಾಜ್ ಗಾಯಕ್ವಾಡ್, 2 ಡೆವೊನ್ ಕಾನ್ವೇ, 3 ಮೊಯಿನ್ ಅಲಿ, 4 ರಾಬಿನ್ ಉತ್ತಪ್ಪ, 5 ಅಂಬಟಿ ರಾಯುಡು, 6 ಎಂಎಸ್ ಧೋನಿ (ನಾಯಕ, ವಿಕೆ), 7 ಶಿವಂ ದುಬೆ, 8 ಡ್ವೇನ್ ಬ್ರಾವೋ, 9 ಸಿಮರ್ಜೀತ್ ಸಿಂಗ್, 10 ಮುಖೇಶ್ ಚೌಧರಿ, 11. ಮಹೀಶ್ ತೀಕ್ಷಣ.