IPL 2022: ಡೆವೊನ್ ಕಾನ್ವೇ ಮದುವೆ, ಐಪಿಎಲ್‌ನಿಂದ ಹೊರನಡೆದ CSK ಪ್ಲೇಯರ್

ನ್ಯೂಜಿಲೆಂಡ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ಡೆವೊನ್ ಕಾನ್ವೇ ಮುಂದಿನ ಒಂದು ವಾರದವರೆಗೆ ಸಿಎಸ್‌ಕೆ ತಂಡದಲ್ಲಿರುವುದಿಲ್ಲ. ಕಾನ್ವೆ ಮದುವೆ ಕಾರಣದಿಂದ ದಕ್ಷಿಣ ಆಫ್ರಿಕಾ ದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಹಾಲಿ ಚಾಂಪಿಯನ್ ಚೆನ್ನೈ ಪರ ಈ ಸೀಸನ್‌ನಲ್ಲಿ ಕೇವಲ ಒಂದು ಪಂದ್ಯವನ್ನಾಡಿರುವ ಕಾನ್ವೆ ಅಲಭ್ಯತೆ ಚೆನ್ನೈ ಮೇಲೆ ಅಷ್ಟಾಗಿ ಮೇಲೆ ಪರಿಣಾಮ ಬಿರುವುದಿಲ್ಲ. ಕಿವೀಸ್ ಆರಂಭಿಕ ಆಟಗಾರ ಏಪ್ರಿಲ್ 24 ರಂದು ಭಾನುವಾರ ಚೆನ್ನೈ ತಂಡವನ್ನು ಮತ್ತೆ ಸೇರಿಕೊಳ್ಳಲಿದ್ದಾರೆ. ಆದಾಗ್ಯೂ, ಕೋವಿಡ್-19 ಪ್ರೋಟೋಕಾಲ್‌ಗಳ ಪ್ರಕಾರ, ಮೂರು ದಿನಗಳವರೆಗೆ ಕ್ವಾರಂಟೈನ್ ಇರಬೇಕಾಗುತ್ತದೆ. ಹೀಗಾಗಿ ಎಡಗೈ ಬ್ಯಾಟರ್ ಕನಿಷ್ಠ ಎರಡು ಪಂದ್ಯಗಳಿಗೆ ಆಯ್ಕೆಗೆ ಲಭ್ಯವಿರುವುದಿಲ್ಲ.
ಏಪ್ರಿಲ್ 21 ರಂದು ಗುರುವಾರ ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಹಾಲಿ ಚಾಂಪಿಯನ್ ಚೆನೈ ತಂಡಗಳು ಸೆಣಸಾಡಲಿವೆ. ಅದರ ನಂತರ, ಸಿಎಸ್‌ಕೆ ಏಪ್ರಿಲ್ 25 ಸೋಮವಾರದಂದು ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದೆ. ಹಳದಿ ಸೈನ್ಯವು ಪಂಜಾಬ್ ಮುಖಾಮುಖಿಯ ನಂತರ ಆರು ದಿನಗಳ ವಿರಾಮವನ್ನು ಪಡೆಯುತ್ತದೆ . ಮೇ 1 ರಂದು ಭಾನುವಾರ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.
CSK ಗಾಗಿ ಡೆವೊನ್ ಕಾನ್ವೇ ವಿವಾಹಪೂರ್ವ ಪಾರ್ಟಿ
ಹಾಲಿ ಚಾಂಪಿಯನ್‌ಗಳು ತಮ್ಮ ಎಡಗೈ ಓಪನರ್‌ಗೆ ದಕ್ಷಿಣ ಆಫ್ರಿಕಾಕ್ಕೆ ವಿಮಾನ ಹತ್ತುವ ಮೊದಲು ವಿವಾಹಪೂರ್ವ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಈ ಸಂಭ್ರಮಾಚರಣೆಯಲ್ಲಿ ಸಿಎಸ್‌ಕೆ ತಂಡದ ಆಟಗಾರ ಕುಟುಂಬಗಳೊಂದಿಗೆ ಆಗಮಿಸಿ ಕುಣಿದು ಸಂಭ್ರಮಿಸಿದ್ದರು.
ಐಪಿಎಲ್ ಮೆಗಾ ಹರಾಜಿನಲ್ಲಿ ಒಂದು ಕೋಟಿಗೆ ಚೆನೈ ಪ್ರಾಂಚೈಸಿ ಕಾನ್ವೇ ಅನ್ನು ಖರೀದಿಸಿತ್ತು. ಎಡಗೈ ಬ್ಯಾಟರ್ ,ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆರಂಭಿಕ ಪಂದ್ಯದಲ್ಲಿ ಸಿಎಸ್‌ಕೆ ತಂಡದ ಮೂಲಕ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಆ ಪಂದ್ಯದಲ್ಲಿ ಮೂರು ರನ್ ಗಳಿಸಿದರು. ನಂತರ ಅವರನ್ನು ಕೈಬಿಡಲಾಯಿತು. ಅಂದಿನಿಂದ, ರಾಬಿನ್ ಉತ್ತಪ್ಪ ಮತ್ತು ರುತುರಾಜ್ ಗಾಯಕ್ವಾಡ್ ಆರಂಭಿಕರಾಗಿ ಮೈದಾನಕ್ಕೆ ಆಗಮಿಸುತ್ತಿದ್ದಾರೆ.
30 ವರ್ಷ ವಯಸ್ಸಿನ ಕಾನ್ವೇ ತಮ್ಮ ದೇಶಕ್ಕಾಗಿ 20 ಪಂದ್ಯಗಳನ್ನು ಆಡಿದ್ದಾರೆ. 50.17 ರ ಬ್ಯಾಟಿಂಗ್ ಸರಾಸರಿಯಲ್ಲಿ 602 ರನ್ ಗಳಿಸಿದ್ದಾರೆ. ಎಡಗೈ ಬ್ಯಾಟರ್ ತಮ್ಮ ಟಿ20 ವೃತ್ತಿಜೀವನದಲ್ಲಿ ನಾಲ್ಕು ಅರ್ಧಶತಕಗಳನ್ನು ಬಾರಿಸಿದ್ದು, ಅವರ ಗರಿಷ್ಠ ಸ್ಕೋರ್ 99 ರನ್ ಆಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications