Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

CSK Jersey for IPL 2022: ನೂತನ ಜರ್ಸಿ ಬಿಡುಗಡೆಗೊಳಿಸಿದ ಚೆನ್ನೈ ಸೂಪರ್ ಕಿಂಗ್ಸ್

IPL 2022: CSK finally Unveil new Jersey ahaed of upcoming season

ಈ ಬಾರಿಯ ಐಪಿಎಲ್ ಟೂರ್ನಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು ಮುಂದಿನ ಶನಿವಾರ ಟೂರ್ನಿ ಭರ್ಜರಿಯಾಗಿ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿದ್ದು ವಾಂಖೆಡೆ ಸ್ಟೇಡಿಯಂ ಈ ಪಂದ್ಯದಕ್ಕೆ ಆತಿಥ್ಯ ವಹಿಸಲಿದೆ. ಈ ಬಾರಿಯ ಟೂರ್ನಿಯ ಆರಂಭದ ಹಿನ್ನೆಲೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತನ್ನ ನೂತನ ಜರ್ಸಿಯನ್ನು ಬಿಡುಗಡೆಗೊಳಿಸಿದೆ.

ನಾಲ್ಕು ಬಾರಿಯ ಚಾಂಪಿಯನ್ ತಂಡವಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ಅಂತಿಮ ಹಂತದಲ್ಲಿ ನೂತನ ಜರ್ಸಿಯನ್ನು ಬಿಡುಗಡೆಗೊಳಿಸಿದೆ. ಇದಕ್ಕೂ ಮಂಗಳವಾರ ಲಕ್ನೋ ಸೂಪರ್ ಜೈಂಟ್ಸ್ ತಂಡ ಜರ್ಸಿಯನ್ನು ಬಿಡುಗಡೆಗೊಳಿಸಿತ್ತು. ಇದೀಗ ಈ ಬಾರಿಯ ಕೊನೇಯ ತಂಡವಾಗಿ ಸಿಎಸ್‌ಕೆ ಜರ್ಸಿ ಬಿಡುಗಡೆಗೊಳಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜರ್ಸಿಯಲ್ಲಿ ಮಹತ್ವದ ಬದಲಾವಣೆಗಳು ಆಗಿಲ್ಲ. ಮುಖ್ಯ ಸ್ಪಾನ್ಸರ್ ಆಗಿ ಟಿವಿಎಸ್ ಯುರೋ ಗ್ರಿಪ್ ಟಯರ್ಸ್ ಮುಂಬಾಗದಲ್ಲಿ ಕಾಣಿಸಿಕೊಂಡಿರುವುದು ಪ್ರಮುಖ ಬದಲಾವಣೆಯಾಗಿದೆ.

ಇನ್ನು ಈ ಬಾರಿಯ ಟೂರ್ನಿಯ ಆರಂಭಕ್ಕೆ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಗೆ ಒಂದರ ನಂತರ ಒಂದು ಆಘಾತಗಳು ಎದುರಾಗಿದೆ. ಪ್ರಮುಖ ಆಟಗಾರ ದೀಪಕ್ ಚಾಹರ್ ಮೊಣಕೂ ಗಾಯಕ್ಕೆ ತುತುತ್ತಾಗಿರುವ ಕಾರಣ ಈ ಬಾರಿಯ ಸಂಪೂರ್ಣ ಟೂರ್ನಿಗೆ ಲಭ್ಯವಾಗುವುದು ಅನುಮಾನ ಎನ್ನಲಾಗಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಾರದಿರುವುದು ಕುತೂಹಲ ಮೂಡಿಸಿದೆ. ಇನ್ನು ಗಾಯಗೊಂಡಿದ್ದ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಚೇತರಿಸಿಕೊಂಡಿದ್ದು ಮೊದಲ ಪಂದ್ಯಕ್ಕೆ ಲಭ್ಯವಾಗಲಿದ್ದಾರೆ ಎಂಬುದು ಸಿಎಸ್‌ಕೆ ತಂಡಕ್ಕೆ ಸಮಾಧಾನ ಮೂಡಿಸಿದೆ.

ಆದರೆ ಇನ್ನೋರ್ವ ಪ್ರಮುಖ ಆಟಗಾರ ಆಲ್‌ರೌಂಡರ್ ಮೊಯೀನ್ ಅಲಿ ವೀಸಾ ಸಮಸ್ಯೆಯಿಂದ ಭಾರತಕ್ಕೆ ಪ್ರಯಾಣ ಆರಂಭಿಸುವುದು ತಡವಾಗಿದೆ. ವೀಸಾ ಸಮಸ್ಯೆ ಇನ್ನೂ ಬಗೆಹರಿಯದಿರುವ ಕಾರಣ ಮೊದಲ ಪಂದ್ಯದಲ್ಲಿ ಮೊಯೀನ್ ಅಲಿ ಕಣಕ್ಕಿಳಿಯುವುದು ಅನುಮಾನವಾಗಿದೆ. ಹೀಗಾಗಿ ಸಿಎಸ್‌ಕೆ ತಂಡದ ಪರವಾಗಿ ಡೆವೋನ್ ಕಾನ್ವೆ ಐಪಿಎಲ್‌ಗೆ ಪದಾರ್ಪನೆ ಮಾಡುವ ಸಾಧ್ಯಯೆಯಿದೆ.

ಸಿಎಸ್‌ಕೆ ತಂಡದ ಸಂಪೂರ್ಣ ಸ್ವ್ಕಾಡ್: ರವೀಂದ್ರ ಜಡೇಜಾ, ಎಂಎಸ್ ಧೋನಿ, ಮೊಯಿನ್ ಅಲಿ, ಋತುರಾಜ್ ಗಾಯಕ್ವಾಡ್, ಡ್ವೇಯ್ನ್ ಬ್ರಾವೋ, ಅಂಬಾಟಿ ರಾಯುಡು, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ಸುಭ್ರಾಂಶು ಸೇನಾಪತಿ, ಆಡಮ್ ಮಿಲ್ನೆ, ಮುಖೇಶ್ ಚೌಧರಿ, ಪ್ರಶಾಂತ್ ಸೋಲಂಕಿ, ಸಿ ಹರಿ ನಿಶಾಂತ್, ಎನ್ ಜಗದೀಶ್, ಕ್ರಿಸ್ ಜೋರ್ಡಾನ್, ಕೆ ಭಗತ್ ವರ್ಮಾ, ರಾಬಿನ್ ಉತ್ತಪ್ಪ, ದೀಪಕ್ ಚಹಾರ್, ಕೆಎಂ ಆಸಿಫ್, ತುಷಾರ್ ದೇಶಪಾಂಡೆ, ಕೆಎಂ ಆಸಿಫ್, ಶಿವಂ ದುಬೆ, ಮಹೇಶ್ ತೀಕ್ಷಣ, ರಾಜವರ್ಧನ್ ಹಂಗರ್ಗೇಕರ್, ಸಮರ್ಜಿತ್ ಸಿಂಗ್, ಡೆವೊನ್ ಕಾನ್ವೇ.

Story first published: Wednesday, March 23, 2022, 14:54 [IST]
Other articles published on Mar 23, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+