ಐಪಿಎಲ್ 2022: ಡೆವೊನ್ ಕಾನ್ವೇ ಪ್ರಿ ವೆಡ್ಡಿಂಗ್ ಪಾರ್ಟಿ, ಸಾಂಪ್ರದಾಯಕ ಉಡುಗೆಯಲ್ಲಿ ಸಿಎಸ್‌ಕೆ ಆಟಗಾರರು

ಚೆನೈ ತಂಡದ ಆರಂಭಿಕ ಆಟಗಾರ ಡೆವೊನ್ ಕಾನ್ವೇ ಅವರ ಮದುವೆ ಪೂರ್ವದ ಪಾರ್ಟಿಯಲ್ಲಿ ಚೆನೈ ತಂಡದ ಆಟಗಾರರು ಭಾರತೀಯ ಸಾಂಪ್ರದಾಯಿಕ ಉಡುಗೆ ಪಂಚೆಯನ್ನು ಹಾಕಿಕೊಂಡು ಹೆಜ್ಜೆ ಹಾಕಿ ಸಂಭ್ರಮಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಸಿಎಸ್‌ಕೆ ಆರಂಭಿಕ ಆಟಗಾರ ಡೆವೊನ್ ಕಾನ್ವೇ ಅವರು ತನ್ನ ಗೆಳತಿ ಕಿಮ್ ವ್ಯಾಟ್ಸನ್ ಅವರನ್ನು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಈ ಹಿನ್ನಲೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರಿಗಾಗಿ ಮುಂಬೈನ ಟ್ರೈಡೆಂಟ್ ಹೋಟೆಲ್‌ನಲ್ಲಿ ಡೆವೊನ್ ಕಾನ್ವೇ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ಸಿಎಸ್‌ಕೆ ಆಟಗಾರರು ಪಂಚೆ ಧರಿಸಿ, ನೃತ್ಯಮಾಡುವ ಮೂಲಕ ಸಂಭ್ರಮಿಸಿದ್ದಾರೆ.

ತಮಿಳುನಾಡು ಸಂಪ್ರದಾಯಕ್ಕೆ ತಕ್ಕಂತೆ ವೇಶಭೂಷಣ:
ನ್ಯೂಜಿಲೆಂಡ್ ದೇಶದ ಡೆವೊನ್ ಕಾನ್ವೇ ಅವರು ಚೆನ್ನೈ ಸಂಪ್ರದಾಯದಂತೆ ರೇಷ್ಮೇ ಬಣ್ಣದ ಶರ್ಟ್ ಮತ್ತು ಪಂಚೆ ಧರಿಸುವ ಮೂಲಕ ಆಕರ್ಷಕವಾಗಿ ಕಾಣುತ್ತಿದ್ದರು. ಅವರ ಪತ್ನಿ ಕಿಂ ವ್ಯಾಟ್ಸನ್ ವರ್ಚುವಲ್ ವೇದಿಕೆ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರೂ ಸಹ ಭಾರತೀಯ ಸಂಪ್ರದಾಯದಂತೆ ಹಳದಿ ಬಣ್ಣದ ಸೀರೆ ಧರಿಸಿದ್ದರು. ತಂಡದ ಮಾಜಿ ನಾಯಕ ಎಂ.ಎಸ್ ಧೋನಿ ಹಳದಿ ಬಣ್ಣದ ಕುರ್ತಾದೊಂದಿಗೆ ಬಿಳಿ ಪಂಚೆ ಧರಿಸಿ ನೆಟ್ಟಿಗರನ್ನು ಸೆಳೆದಿದ್ದರು, ಇನ್ನೂಳಿದಂತೆ ನಾಯಕ ಜಡೇಜಾ, ಮೋಹಿನ್ ಅಲಿ ಮರೂನ್ ಬಣ್ಣದ, ಶಿವಂ ದುಬೆ ಕಂದು ಬಣ್ಣದ ಕುರ್ತಾ ಸೇರಿದಂತೆ ವಿವಿಧ ಆಟಗಾರರು ವಿವಿಧ ಬಣ್ಣದ ಕುರ್ತಾಗಳನ್ನು ಧರಿಸಿದ್ದು ಕಾರ್ಯಕ್ರಮದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದರು.
ಈ ಸಂದರ್ಭದಲ್ಲಿ ತೆಗೆದ ಚಿತ್ರಗಳನ್ನು ಸಿಎಸ್‌ಕೆ ಫ್ರಾಂಚೈಸ್ ತನ್ನ ಅಧಿಕೃತ ಟ್ವಿಟ್ಟರ್ ಅಕೌಟ್ ಮೂಲಕ ಹಂಚಿಕೊಂಡಿದೆ.
ಲುಂಗಿ ಡ್ಯಾನ್ಸ್ ಮಾಡಿದ ಪ್ಲೇಯರ್ಸ್
ಕಾರ್ಯಕ್ರಮದಲ್ಲಿ ಡೆವೊನ್ ಕಾನ್ವೇ, ಬ್ರಾವೋ, ಗಾಯಕ್ವಾಡ್ ಸೇರಿದಂತೆ ಅನೇಕರು ಲುಂಗಿ ಡ್ಯಾನ್ಸ್ ಮಾಡಿದರು. ಬಾಲಿವುಡ್ ಸಿನಿಮಾ ಚೆನ್ನೆ ಎಕ್ಸ್‌ಪ್ರೆಸ್‌ನ ಖ್ಯಾತ ಸಾಂಗ್ ಲುಂಗಿ ಡ್ಯಾನ್ಸ್‌ಗೆ ಸಿಎಸ್‌ಕೆ ಯುವ ಆಟಗಾರರು ಹೆಜ್ಜೆ ಹಾಕಿದ್ರು.
ಇದೇ ವೇಳೆಯಲ್ಲಿ ಆಲ್‌ರೌಂಡರ್ ಡ್ವೇನ್ ಬ್ರಾವೋ ಮೈದಾನದಲ್ಲಿ ತಾನು ವಿಕೆಟ್ ಪಡೆದಾಗ ಸಂಭ್ರಮಿಸುವ ಶೈಲಿಯಲ್ಲಿ ಆಟಗಾರರನ್ನ ಜೊತೆಗೂಡಿಸಿ ಸ್ಟೆಪ್ಸ್ ಹಾಕಿರುವುದು ನೋಡುಗರನ್ನ ಸೆಳೆದಿದೆ. ಜೊತೆಗೆ ಎಲ್ಲಾ ಆಟಗಾರರ ಪಾರ್ಟಿ ಮುಗಿದ ಬಳಿಕ ಕಾನ್ವೆಗೆ ಗ್ರೀಟಿಂಗ್ಸ್ ನೀಡಿ ಶುಭ ಕೋರಿದರು.

1 ಕೋಟಿ ರೂಪಾಯಿಗೆ ಸಿಎಸ್‌ಕೆ ಸೇರಿಕೊಂಡ ಡೆವೋನ್ ಕಾನ್ವೆ
ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ಡೆವೋನ್ ಕಾನ್ವೆರನ್ನ ಚೆನ್ನೈ ಫ್ರಾಂಚೈಸಿ 1 ಕೋಟಿ ರೂ. ಖರೀದಿಸಿತ್ತು. ಆದ್ರೆ ಈ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಡೆವೋನ್ ಕಾನ್ವೆ ಪ್ಲೇಯಿಂಗ್ 11ರಲ್ಲಿರಲು ಹೆಚ್ಚಿನ ಅವಕಾಶಗಳು ಲಭ್ಯವಾಗಿಲ್ಲ. ಮಾರ್ಚ್ 26 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮೊದಲ ಪಂದ್ಯವನ್ನು ಓಪನಿಂಗ್ ಆಡಲು ಅವಕಾಶ ಸಿಕ್ಕಿತು. ಆದರೆ ಆ ಪಂದ್ಯದಲ್ಲಿ 8 ಎಸೆತಗಳಲ್ಲಿ ಕಾನ್ವೆ ಕೇವಲ 3 ರನ್ ಗಳಿಸಿ ಕಳಪೆ ಬ್ಯಾಟಿಂಗ್ ಪ್ರದರ್ಶನದ ಮೂಲಕ ವಿಕೆಟ್ ಕಳೆದುಕೊಂಡರು. ಅಂದಿನಿಂದ ಕಾನ್ವೆಗೆ ಪ್ಲೇಯಿಂಗ್ 11ನಲ್ಲಿ ಸ್ಥಾನ ಸಿಕ್ಕಿಲ್ಲ.
ನ್ಯೂಜಿಲೆಂಡ್ ಪರ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡುತ್ತಿರುವ ಕಾನ್ವೆ ಈಗಾಗಲೇ ಕಿವೀಸ್ ಪರ 7 ಟೆಸ್ಟ್, 3 ಒಡಿಐ ಮತ್ತು 20 ಟಿ20 ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್ 2022ರ ಋತುವಿನಲ್ಲಿ ಈಗಾಗಲೇ ಆರು ಪಂದ್ಯಗಳನ್ನು ಆಡಿರುವ ಚೆನ್ನೈ ಸೂಪರ್ ಕಿಂಗ್ಸ್ ಐದು ವಿಕೆಟ್‌ಗಳಿಂದ ಸೋತು ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.

ಮುಂಬೈ ಇಂಡಿಯನ್ಸ್ ವಿರುದ್ಧ ಕಾದಾಡಲಿರುವ ಸಿಎಸ್‌ಕೆ
ಏ.21 ರಂದು ಮುಂಬೈನ ಡಿ.ವೈ ಪಾಟೀಲ ಸ್ಪೋಟ್ಸ್ ಅಕಾಡೆಮಿಯಲ್ಲಿ ಸಿಎಸ್‌ಕೆ ತಂಡ, ಮುಂಬೈ ತಂಡವನ್ನು ಎದುರಿಸಲಿದೆ. ಒಂದೆಡೆ ಸಿಎಸ್‌ಕೆ ತಂಡದಲ್ಲಿ ಅನುಭವಿ ಆಟಗಾರರು ಗಾಯಗೊಂಡಿದ್ದಾರೆ. ಇನ್ನೊಂದೆಡೆ ಮುಂಬೈ ತಂಡವು ಈವರೆಗೂ ಒಂದು ಗೆಲವು ಸಾಧಿಸಲು ಸಾಧ್ಯವಾಗದೆ, ಮುಖಭಂಗ ಎದುರಿಸಿದೆ. ಹೀಗಿರುವಾಗ ಹಾಲಿ ಹಾಗೂ ಮಾಜಿ ಚಾಂಪಿಯನ್ನರ ಕಾದಾಟವನ್ನ ವೀಕ್ಷಿಸಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications