IPL 2022: ಚೆಂಡನ್ನ ಹೊಡಿಬೇಕು ಅನ್ನಿಸಿದ್ದಲ್ಲಿ ಮಾತ್ರ ನಾನು ಹೊಡೆಯುತ್ತೇನೆ: ಶಿವಂ ದುಬೆ

ಐಪಿಎಲ್ 15ನೇ ಸೀಸನ್‌ನಲ್ಲಿ ಸತತವಾಗಿ ನಾಲ್ಕು ಸೋಲಿನ ಬಳಿಕ ಮೊದಲ ಜಯ ಗಳಿಸುವಲ್ಲಿ ಚೆನೈ ಸೂಪರ್ ಕಿಂಗ್ಸ್ ಯಶಸ್ವಿಯಾಗಿದೆ. ಆರ್‌ಸಿಬಿ ವಿರುದ್ಧ 216 ರನ್ ಗಳಿಸುವ ಮೂಲಕ ಈ ಆವೃತ್ತಿಯಲ್ಲಿ ಅತ್ಯಧಿಕ ರನ್ ಕಲೆ ಹಾಕಿದ ತಂಡವಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ಇಷ್ಟು ದೊಡ್ಡ ಮೊತ್ತದ ರನ್ ಕಲೆಹಾಕಲು ಕಾರಣ ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ ಹಾಗೂ ಶಿವಂ ದುಬೆ. ಈ ಜೋಡಿಯ 165 ರನ್ ಗಳ ಜೊತೆಯಾಟ ಸಿಎಸ್‌ಕೆ ಬೃಹತ್ ಮೊತ್ತಕ್ಕೆ ಕಾರಣವಾಯಿತು.
ಮಂಗಳವಾರ ರಾತ್ರಿ( ಏ.12) ರಂದು ಮುಂಬೈನ ಡಾ. ಡಿ. ವೈ. ಪಾಟೀಲ್ ಸ್ಪೋಟ್ಸ್ ಅಕಾಡೆಮಿಯಲ್ಲಿ ಜರುಗಿದ ಚೆನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದಲ್ಲಿ ಮೊದಲ ಜಯಬೇರಿ ಭಾರಿಸಿದ ಸಿಎಎಸ್‌ಕೆ ತಂಡಕ್ಕೆ ಬ್ಯಾಂಟಿಗ್ ಬಲ ನೀಡಿದ್ದು ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ ಮತ್ತು ಅಲ್‌ರೌಂಡರ್ ಶಿವಂ ದುಬೆ. ಮೂರನೇ ವಿಕೆಟ್‌ಗೆ 165 ರನ್‌ಗಳ ಬೃಹತ್ ಜೊತೆಯಾಟದಲ್ಲಿ ಆರ್‌ಸಿಬಿ ಬೌಲರ್‌ಗಳನ್ನು ಬೆಂಡೆತ್ತಿದರು.
ದುಬೆ, ಐದು ಬೌಂಡರಿಗಳು ಮತ್ತು ಎಂಟು ಸಿಕ್ಸರ್‌ಗಳೊಂದಿಗೆ 46 ಎಸೆತಗಳಲ್ಲಿ ಅಜೇಯ 95 ರನ್ ಗಳಿಸಿ ತನ್ನ ಅತ್ಯಧಿಕ ಐಪಿಎಲ್ ಸ್ಕೋರ್ ಅನ್ನು ನೋಂದಾಯಿಸಿದರು. ಮತ್ತು ರಾಬಿನ್ ಉತ್ತಪ್ಪ ಅವರು 50 ಎಸೆತಗಳಲ್ಲಿ 88ರನ್ ಗಳಿಸಿ ಹಸರಂಗ ಅವರ ಬೌಲಿಂಗ್‌ನಲ್ಲಿ ಸಿಕ್ಸ್ ಹೊಡೆಯುವ ಯತ್ನದಲ್ಲಿ ವಿರಾಟ್ ಕೊಹ್ಲಿ ಅವರಿಗೆ ಕ್ಯಾಚ್ ನೀಡಿದರು.
ಈ ಕುರಿತು ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದುಬೆ, ನಾನು ಯಾವಾಗಲೂ ನನ್ನ ಆಟವನ್ನು ಮುಂದುವರೆಸಲು ಇಚ್ಚಿಸುತ್ತೇನೆ. ನಾನು ಹೊಡೆಯಬಲ್ಲೆನೆಂದು ಭಾವಿಸಿದ ಚೆಂಡನ್ನ ಮಾತ್ರ ಹೊಡೆಯುತ್ತಿದ್ದೇನೆ. ಮೊದಲಿಗಿಂತ ಉತ್ತಮ ಕನೆಕ್ಟ್ ಮಾಡುತ್ತಿರುವುದರಿಂದ ನನ್ನ ಆತ್ಮವಿಶ್ವಾಸ ಹೆಚ್ಚಿದೆ. ನಾನು ನನ್ನ ಸ್ವಾಭಾವಿಕ ಆಟವನ್ನು ಆಡಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ನಾನು ಬಹಳ ಸಮಯದಿಂದ ಏನು ಮಾಡಲು ಪ್ರಯತ್ನಿಸುತ್ತಿದ್ದೇನೋ, ಈಗ ಅದನ್ನು ಕಾರ್ಯಗತಗೊಳಿಸಲು ನನಗೆ ಸಾಧ್ಯವಾಗುತ್ತದೆ. ನಾನು ರಣಜಿ ಟ್ರೋಫಿ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ಯಾವುದೇ ಪಂದ್ಯವನ್ನು ಆಡುತ್ತಿದ್ದರೂ, ಅದೇ ಮಟ್ಟಕ್ಕೆ ಉತ್ತಮ ಪ್ರದರ್ಶನ ನೀಡುತ್ತೇನೆ. ನಾನು ಸಮತೋಲಿತವಾಗಿರಲು ಪ್ರಯತ್ನಿಸಿದೆ, ಹೆಚ್ಚು ಯೋಚಿಸದೆ ಮತ್ತು ಆಟವಾಡುತ್ತಿದ್ದೇನೆ. ನಾನು ಹೆಚ್ಚುವರಿಯಾಗಿ ಏನನ್ನೂ ಮಾಡುವುದಿಲ್ಲ, ನನ್ನ ಬೇಸಿಕ್ ಆಟವನ್ನಷ್ಟೇ ಅನುಸರಿಸಿದ್ದೇನೆ ಎಂದ ಶಿವಂ ದುಬೆ, ಐಪಿಎಲ್‌ನಲ್ಲಿ ತನ್ನ ಮೊದಲ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನ ಅವರ ತಂದೆಗೆ ಅರ್ಪಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications