
ದಕ್ಷಿಣ ಆಫ್ರಿಕಾದ ಮಾಜಿ ಬೌಲರ್ ಡೇಲ್ ಸ್ಟೇಯ್ನ್ ಅವರು ಮುಂಬರುವ ಐಪಿಎಲ್ 2022 ಸೀಸನ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ನ ಮುಂದಿನ ಬೌಲಿಂಗ್ ಕೋಚ್ ಆಗಲಿದ್ದಾರೆ ಎಂದು ಕ್ರಿಕ್‌ಬಝ್ ವರದಿ ಮಾಡಿದೆ.
ಸ್ಟೇಯ್ನ್ ತಮ್ಮ ವೃತ್ತಿಜೀವನದಲ್ಲಿ ಎಸ್‌ಆರ್‌ಎಚ್ ಪರ ಒಂದೆರಡು ಸೀಸನ್ ಆಡಿದ್ದಾರೆ. ಒಟ್ಟಾರೆಯಾಗಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 95 ಪಂದ್ಯಗಳನ್ನು ಆಡಿದ್ದಾರೆ. ಒಟ್ಟು 93 ಟೆಸ್ಟ್ ಪಂದ್ಯಗಳಲ್ಲಿ 22.95 ಬೌಲಿಂಗ್ ಸರಾಸರಿಯಲ್ಲಿ 439 ವಿಕೆಟ್‌ಗಳೊಂದಿಗೆ ಸಾರ್ವಕಾಲಿಕ ಶ್ರೇಷ್ಠ ವೇಗದ ಬೌಲರ್‌ಗಳಲ್ಲಿ ಒಬ್ಬರಾದ ಈತ ಎಸ್‌ಆರ್ಎಚ್ ತಂಡದ ಬೌಲಿಂಗ್ ಕೋಚ್ ಆಗಲು ಒಪ್ಪಿದ್ದಾರೆ ಎನ್ನಲಾಗಿದೆ.
ಡೇಲ್ ಸ್ಟೇನ್ 125 ಏಕದಿನ (196 ವಿಕೆಟ್) ಮತ್ತು 47 ಟಿ20 ಪಂದ್ಯ (64 ವಿಕೆಟ್) ಆಡಿರುವ ಸ್ಟೇನ್, ಐಪಿಎಲ್‌ನಲ್ಲಿ ಡೆಕ್ಕನ್ ಚಾರ್ಜರ್ಸ್, ಗುಜರಾತ್ ಲಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದಾರೆ ಮತ್ತು ಲೀಗ್‌ನಲ್ಲಿ 97 ವಿಕೆಟ್‌ಗಳನ್ನು ಪಡೆದಿದ್ದಾರೆ.
ಪ್ರಮುಖ ಸ್ಟಾರ್ ಆಟಗಾರರನ್ನ ಈಗಾಗಲೇ ಕಳೆದುಕೊಂಡ ಎಸ್‌ಆರ್‌ಎಚ್‌ನ ಮುಖ್ಯ ಕೋಚ್ ಟ್ರೆವರ್ ಬೇಲಿಸ್ ರಾಜೀನಾಮೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ ಅವರು ಹೊಸ ಫ್ರಾಂಚೈಸಿಯ ಕೋಚ್ ಸ್ಥಾನವನ್ನು ಎದುರು ನೋಡುತ್ತಿದ್ದಾರೆ ಎಂದು ವರದಿಯಾಗಿದೆ.
ಅತ್ಯಂತ ಯಶಸ್ವಿ ತರಬೇತುದಾರರಲ್ಲಿ ಒಬ್ಬರಾದ ಟ್ರೆವರ್ ಬೇಲಿಸ್ ಅವರು 2019 ರಲ್ಲಿ ಏಕದಿನ ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡದ ಕೋಚ್ ಆಗಿದ್ದರು. ಅಲ್ಲದೆ 2012 ಮತ್ತು 2014ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ನ ಎರಡು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇನ್ನು 2020ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಕೋಚ್ ಆಗಿದ್ದ ಬೇಲಿಸ್ ನೇತೃತ್ವದಲ್ಲಿ ಎಸ್‌ಆರ್‌ಹೆಚ್ ಮೂರನೇ ಸ್ಥಾನ ಅಲಂಕರಿಸಿತ್ತು. ಆದರೆ ಕಳೆದ ಸೀಸನ್‌ನಲ್ಲಿ ತಂಡವು ಅತ್ಯಂತ ಹೀನಾಯ ಪ್ರದರ್ಶನ ತೋರಿದ್ದು, ಫ್ರಾಂಚೈಸಿ ಕೆಂಗಣ್ಣಿಗೆ ಗುರಿಯಾಗಿತ್ತು. ಆದ್ರೀಗ ಸನ್‌ರೈಸರ್ಸ್ ಹೈದರಾಬಾದ್ ತಂಡದಿಂದ ಟ್ರೇವರ್ ಬೇಲಿಸ್ ಹೊರನಡೆದಿದ್ದಾರೆ. ಹೀಗಾಗಿ ಎಸ್‌ಆರ್‌ಎಚ್ ಹೊಸ ಮುಖ್ಯ ಕೋಚ್ ಹುಡುಕಾಟದಲ್ಲಿದೆ.
ಇನ್ನು ಬೌಲಿಂಗ್ ತರಬೇತುದಾರರಾಗಲು ಡೇಲ್ ಸ್ಟೇನ್ ಒಂದೆಡೆ ನೇಮಕಗೊಂಡರೆ, ತಮಿಳುನಾಡಿನ ಬ್ಯಾಟರ್ ಹೇಮಂಗ್ ಬದಾನಿ ಅವರು ಬ್ಯಾಟಿಂಗ್ ಕೋಚ್ ಆಗಿ ಫ್ರಾಂಚೈಸ್ ಸೇರಿಕೊಳ್ಳಲಿದ್ದಾರೆ. ಕಳೆದ ವರ್ಷ ಎಸ್‌ಆರ್‌ಎಚ್‌ನ ಕ್ರಿಕೆಟ್ ನಿರ್ದೇಶಕರಾಗಿದ್ದ ಟಾಮ್ ಮೂಡಿ ಅವರನ್ನು ಐಪಿಎಲ್ 2021 ರಲ್ಲಿ ಎಸ್‌ಆರ್‌ಹೆಚ್ ಕಳಪೆ ಪ್ರದರ್ಶನಕ್ಕೆ ಬಿಟ್ಟು ಬಿಡಲಾಯಿತು, ಆದ್ರೆ ಟ್ರೆವರ್ ಬೇಲಿಸ್ ಮುಂದಾಳತ್ವದಲ್ಲಿ ಎಸ್‌ಆರ್‌ಎಚ್ ಕೇವಲ 3 ಗೆಲುವುಗಳೊಂದಿಗೆ ಪಾಯಿಂಟ್‌ಗಳ ಪಟ್ಟಿಯ ಕೆಳಭಾಗದಲ್ಲಿ ಕೊನೆಗೊಂಡರು.