

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್‌ಗೆ ನಿಧಾನಗತಿಯ ಓವರ್ ಬೌಲಿಂಗ್ ಮಾಡಿದ್ದಕ್ಕಾಗಿ 12 ಲಕ್ಷ ರೂಪಾಯಿ ದಂದ ವಿಧಿಸಲಾಗಿದೆ. ಮುಂಬೈನ ಡಾ. ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆರು ವಿಕೆಟ್‌ಗಳ ಸೋಲನ್ನ ಕಂಡಿತು.
ಕೆ.ಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್‌ಜೈಂಟ್ಸ್ ತಂಡದ ವಿರುದ್ಧ ಪಂದ್ಯ ಸೋಲಿನ ಕಹಿ ಬೆನ್ನಲ್ಲೇ ರಿಷಭ್ ಪಂತ್‌ಗೆ ದಂಡದ ಬರೆ ಬಿದ್ದಿದೆ. ಡೆಲ್ಲಿ ನೀಡಿದ್ದ 150ರನ್‌ಗಳ ಗುರಿ ಬೆನ್ನತ್ತಿದ ಲಕ್ನೋ ಇನ್ನೆರಡು ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ಗೆರೆ ದಾಟಿತು.
ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ 2022 ರಲ್ಲಿ ಸತತ ಎರಡನೇ ಸೋಲನ್ನು ಅನುಭವಿಸಿದೆ .ಇದರ ಜೊತೆಗೆ ನಿಧಾನಗತಿಯ ಓವರ್-ರೇಟ್ ಅನ್ನು ನಿರ್ವಹಿಸುವಲ್ಲಿ ತಂಡದ ನಾಯಕ ಎಡವಿದ್ದ ಹಿನ್ನಲೆಯಲ್ಲಿ ದಂಡಕ್ಕೆ ಗುರಿಯಾಗಿದ್ದಾರೆ.
ಈ ಸೋಲಿನ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಪಾಯಿಂಟ್ಸ್ ಟೇಬಲ್‌ನಲ್ಲಿ 7ನೇ ಸ್ಥಾನದಲ್ಲಿ ಉಳಿದುಕೊಂಡಿದ್ದು, 2 ಪಾಯಿಂಟ್ಸ್ ಮೂಲಕ ಸ್ಥಿರವಾಗಿದೆ. ತಳಭಾಗದಿಂದ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಸನ್‌ರೈಸರ್ಸ್ ಹೈದ್ರಾಬಾದ್ ನಂತರದ ಸ್ಥಾನದಲ್ಲಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ಪೃಥ್ವಿ ಶಾ ಸ್ಫೊಟಕ 61 ರನ್‌ಗಳು, ಡೇವಿಡ್ ವಾರ್ನರ್ 4, ರೋವ್ಮನ್ ಪೊವೆಲ್ 3, ರಿಷಭ್ ಪಂತ್ ಅಜೇಯ 39, ಸರ್ಫರಾಜ್ ಖಾನ್ ಅಜೇಯ 36 ರನ್‌ಗಳ ನೆರವಿನಿಂದ 3 ವಿಕೆಟ್ ನಷ್ಟಕ್ಕೆ 149 ರನ್ ಕಲೆಹಾಕಿತು.
ಈ ಗುರಿ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ಪರ ಕೆ.ಎಲ್ ರಾಹುಲ್ 24, ಕ್ವಿಂಟನ್ ಡಿಕಾಕ್ 80, ಎವಿನ್ ಲೂಯಿಸ್ 5, ದೀಪಕ್ ಹೂಡ 11, ಕೃನಾಲ್ ಪಾಂಡ್ಯ ಅಜೇಯ 19, ಆಯುಷ್ ಬದೋನಿ ಅಜೇಯ 10 ರನ್ ಕಲೆಹಾಕುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ಆರು ವಿಕೆಟ್‌ಗಳ ಗೆಲುವು ಸಾಧಿಸಿತು.
ಈ ಗೆಲುವಿನ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೇರಿದ್ದು, 6 ಪಾಯಿಂಟ್ಸ್ ಮೂಲಕ ಕೆಕೆಆರ್ ನಂತರದ ಸ್ಥಾನ ಪಡೆದಿದೆ.