Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

DC vs PBKS: ಕೊನೆಯ ನಿಮಿಷದಲ್ಲಿ ಸ್ಟ್ರೈಕ್‌ ಬದಲಿಸಿ ಗೋಲ್ಡನ್ ಡಕೌಟ್ ಆದ ಡೇವಿಡ್ ವಾರ್ನರ್

David warner out

ಮುಂಬೈನ ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಡೆಲ್ಲಿ ಕ್ಯಾಪಿಲಟ್ಸ್ ಹಾಗೂ ಪಂಜಾಬ್ ಕಿಂಗ್ಸ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 17ರನ್‌ಗಳಿಂದ ಗೆಲ್ಲುವ ಮೂಲಕ ಪ್ಲೇ ಆಫ್ ಕನಸನ್ನ ಜೀವಂತವಾಗಿರಿಸಿಕೊಂಡಿದೆ. 14 ಪಾಯಿಂಟ್ಸ್ ಕಲೆಹಾಕುವ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿಕೆಗೊಂಡಿದ್ದು, ನೆಟ್‌ ರನ್‌ರೇಟ್‌ ಉತ್ತಮವಾಗಿರುವುದರಿಂದ ಆರ್‌ಸಿಬಿಯನ್ನ ಹಿಂದಿಕ್ಕಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಆಘಾತ ಅನುಭವಿಸಿತು. ಪಂದ್ಯದ ಮೊದಲ ಎಸೆತದಲ್ಲೇ ಸ್ಫೋಟಕ ಓಪನರ್ ಡೇವಿಡ್ ವಾರ್ನರ್ ಶೂನ್ಯಕ್ಕೆ ಗೋಲ್ಡರ್ ಡಕೌಟ್‌ ಔಟ್ ಆದರು. ಲಿಯಾಮ್ ಲಿವಿಂಗ್‌ಸ್ಟೋನ್ ಸ್ಪಿನ್ ದಾಳಿಯನ್ನ ಅರಿಯದೇ ರಾಹುಲ್ ಚಹಾರ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು.

ಆದ್ರೆ ವಾರ್ನರ್ ಔಟಾಗಲೂ ಕೊನೆಯ ಕ್ಷಣದಲ್ಲಿ ಆತನೇ ಮಾಡಿದ ನಿರ್ಧಾರವೇ ಮುಳುವಾಗಿರುವುದು ಸಾಕಷ್ಟು ಟ್ರೋಲ್‌ಗೆ ಕಾರಣವಾಗಿದೆ. ಬ್ಯಾಟಿಂಗ್ ಆರಂಭಕ್ಕೂ ಮುನ್ನ ಡೇವಿಡ್‌ ವಾರ್ನರ್ ನಾನ್‌ಸ್ಟ್ರೈಕ್‌ನಲ್ಲಿದ್ದರು. ಸರ್ಫರಾಜ್ ಖಾನ್ ಮೊದಲ ಎಸೆತವನ್ನ ಎದುರಿಸಲು ರೆಡಿಯಾಗಿದ್ದರು. ಆದ್ರೆ ಪಂಜಾಬ್ ನಾಯಕ ಮಯಾಂಕ್ ಅಗರ್ವಾಲ್‌ ಲಿಯಾಮ್ ಲಿವಿಂಗ್‌ಸ್ಟೋನ್‌ ಕೈಗೆ ಚೆಂಡನ್ನು ನೀಡಿದರು.

ನಾನು ಡಕ್ ಔಟ್ ಆಗಿದ್ದು ದೊಡ್ಡ ಶಾಕ್ ! | Oneindia Kannada

ಲಿವಿಂಗ್‌ಸ್ಟೋನ್‌ ಮೊದಲ ಓವರ್ ಬೌಲಿಂಗ್ ಮಾಡುತ್ತಿದ್ದಾರೆ ಎಂದು ತಿಳಿದಿದ್ದೇ ತಡ, ನಾನ್‌ಸ್ಟ್ರೈಕ್‌ನಲ್ಲಿದ್ದ ವಾರ್ನರ್ ತಾನು ಮೊದಲ ಓವರ್ ಎದುರಿಸುತ್ತೇನೆ ಎಂದು ಸ್ಟ್ರೈಕ್ ಬದಲಿಸಿದರು. ಆದ್ರೆ ದುರಂತ ಅಂದ್ರೆ ವಾರ್ನರ್‌ನ ಈ ನಿರ್ಧಾರ ಅವರಿಗೆ ತಿರುಗುಬಾಣವಾಯ್ತು. ಮೊದಲ ಎಸೆತದಲ್ಲೇ ವಾರ್ನರ್‌ ಶೂನ್ಯಕ್ಕೆ ಔಟಾಗಿ ಪೆವಿಲಿಯನ್ ಸೇರಿಕೊಂಡರು.

Story first published: Tuesday, May 17, 2022, 9:25 [IST]
Other articles published on May 17, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+