Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಲಕ್ಕಿ ವಾರ್ನರ್‌' : ಚೆಂಡು ವಿಕೆಟ್‌ಗೆ ತಾಗಿದ್ರೂ, ಬೆಲ್ಸ್‌ ಬೀಳಲಿಲ್ಲ, ಶಾಕ್ ಆದ ಯುಜವೇಂದ್ರ ಚಹಾಲ್

David warner

ಮುಂಬೈನ ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿಯಾಗಿ ಗೆಲುವು ಸಾಧಿಸಿತು. ಮೊದಲ ಬ್ಯಾಟಿಂಗ್ ಮಾಡಿದ್ದ ರಾಜಸ್ತಾನ್ ರಾಯಲ್ಸ್ ಆರು ವಿಕೆಟ್ ಕಳೆದುಕೊಂಡು 160 ರನ್ ಕಲೆಹಾಕಿತು. ಈ ಇನ್ನಿಂಗ್ಸ್‌ನಲ್ಲಿ ಅಶ್ವಿನ್‌ರ ಚೊಚ್ಚಲ ಐಪಿಎಲ್ ಅರ್ಧಶತಕವೂ ಒಳಗೊಂಡಿತ್ತು.

161 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ಆರಂಭಿಕ ಬ್ಯಾಟರ್ ಶ್ರೀಕರ್ ಭರತ್ ಶೂನ್ಯಕ್ಕೆ ಔಟಾದ್ರೂ ಸಹ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಶ್‌ ಜೋಡಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಭರ್ಜರಿ ಗೆಲುವು ತಂದುಕೊಟ್ಟಿತು. ವಾರ್ನರ್ ಅಜೇಯ 52 ರನ್ ಗಳಿಸಿದ್ರೆ, ಮಿಚೆಲ್ ಮಾರ್ಷ್‌ 62 ಎಸೆತಗಳಲ್ಲಿ 89 ರನ್ ಸಿಡಿಸಿ ಔಟಾಗಿದ್ದಲ್ಲದೆ ತಂಡಕ್ಕೆ ಗೆಲುವು ತಂದುಕೊಟ್ಟರು. ಡೆಲ್ಲಿ 18.1 ಓವರ್‌ನಲ್ಲಿಯೇ ಎರಡು ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಈ ಪಂದ್ಯದಲ್ಲಿ ಚೇಸಿಂಗ್ ವೇಳೆ ಆಶ್ಚರ್ಯಕರ ಘಟನೆಯೊಂದು ನಡೆಯಿತು. ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್‌ ಎರಡನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟವಾಡಿದರು. ಯುಜವೇಂದ್ರ ಚಹಾಲ್ ಮೊದಲ ಓವರ್‌ನ ಬೌಲಿಂಗ್‌ನಲ್ಲಿ ಡೇವಿಡ್ ವಾರ್ನರ್ ಅಬ್ಬರಿಸಲು ಶುರುಮಾಡಿದ್ರು.

ಮೊದಲ ಎಸೆತವನ್ನ ವಾರ್ನರ್ ಸಿಕ್ಸರ್ ಸಿಡಿಸಿದ್ರು. ಇದೇ ಓವರ್‌ನ ಕೊನೆಯ ಎಸೆತದಲ್ಲಿ ವಾರ್ನರ್ ಅದೃಷ್ಟ ಕುಲಾಯಿಸಿತು. ಚಹಾಲ್‌ ಟಾಸ್ ಅಪ್ ಡೆಲಿವರಿ ವಾರ್ನರ್ ಬ್ಯಾಟನ್ನ ತಪ್ಪಿಸಿ ವಿಕೆಟ್‌ನತ್ತ ನುಗ್ಗಿತು. ಚೆಂಡು ಮೇಲ್ನೋಟಕ್ಕೆ ವಿಕೆಟ್ ಸವರಿಕೊಂಡೇ ಸಾಗಿತು. ಇದಕ್ಕೆ ಉದಾಹಣೆಯೆಂಬಂತೆ ವಿಕೆಟ್‌ ಬೆಲ್ಸ್‌ ಲೈಟ್ ಕೂಡ ಬೆಳಗಿತು. ಆದ್ರೆ ಅಚ್ಚರಿ ಅಂದ್ರೆ ವಿಕೆಟ್ ಮಾತ್ರ ಕೆಳಗೆ ಉರುಳುಲಿಲ್ಲ.

ಈ ಸಂದರ್ಭದಲ್ಲಿ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಮತ್ತು ಸ್ಪಿನ್ನರ್ ಯುಜವೇಂದ್ರ ಚಹಾಲ್ ಒಮ್ಮೆಗೆ ಶಾಕ್‌ಗೆ ಒಳಗಾದರು. ಚೆಂಡು ವಿಕೆಟ್‌ಗೆ ತಾಗಿತಾದ್ರೂ ಬೆಲ್ಸ್‌ ಏಕೆ ಬೀಳಲಿಲ್ಲ ಎಂದು ದಂಗಾದರು. ಈ ವಿಷಯ ತಿಳಿದ ಲಕ್ಕಿ ವಾರ್ನರ್ ಮುಖದಲ್ಲಿ ಮಂದಹಾಸ ಬೀರುತ್ತಾ, ಚಹಾಲ್‌ಗೆ ಸಮಾಧಾನ ಪಡಿಸಿದ್ರು.

ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ 8 ವಿಕೆಟ್‌ಗಳ ಭರ್ಜರಿ ಗೆಲುವಿನೊಂದಿಗೆ ಇನ್ನೋ ಪ್ಲೇ ಆಫ್ ಕನಸನ್ನ ಜೀವಂತವಾಗಿರಿಸಿಕೊಂಡಿದೆ. 12 ಪಾಯಿಂಟ್ಸ್ ಪಾಯಿಂಟ್ಸ್‌ಗಳ ನೆಟ್ ರನ್‌ರೇಟ್‌ (+0.210) ಮೂಲಕ ಐದನೇ ಸ್ಥಾನದಲ್ಲಿಯೇ ಉಳಿದಿದೆ. ಡೆಲ್ಲಿ ಆಡಿದ 12 ಪಂದ್ಯಗಳಲ್ಲಿ 6 ಗೆಲುವು ಮತ್ತು 6 ಪಂದ್ಯಗಳ ಸೋಲಿನಿಂದ 12 ಪಾಯಿಂಟ್ಸ್ ಪಡೆದಿದೆ.

Delhi capitals

ಮೊದಲ ಮೂರು ಸ್ಥಾನದಲ್ಲಿ ಗುಜರಾತ್ ಬಳಿಕ ಲಕ್ನೋ (16) ರಾಜಸ್ತಾನ್ ರಾಯಲ್ಸ್ 14 ಪಾಯಿಂಟ್ಸ್‌ನೊಂದಿಗಿದ್ದು, ಆರ್‌ಸಿಬಿ ನಾಲ್ಕು ಹಾಗೂ ನಂತರದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಉತ್ತಮ ರನ್‌ರೇಟ್ ಮೂಲಕ ಐದನೇ ಸ್ಥಾನ ಅಲಂಕರಿಸಿದೆ.

ರಾಜಸ್ತಾನ್ ರಾಯಲ್ಸ್‌ ಪ್ಲೇಯಿಂಗ್ 11:
ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ ಮತ್ತು ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಯುಜವೇಂದ್ರ ಚಾಹಲ್, ಕುಲದೀಪ್ ಸೇನ್

ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ 11:
ಡೇವಿಡ್ ವಾರ್ನರ್, ಶ್ರೀಕರ್ ಭರತ್, ಮಿಚೆಲ್ ಮಾರ್ಷ್, ರಿಷಭ್ ಪಂತ್ (ನಾಯಕ ಮತ್ತು ವಿಕೆಟ್ ಕೀಪರ್), ಲಲಿತ್ ಯಾದವ್, ರೋವಮನ್ ಪೊವೆಲ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಚೇತನ್ ಸಕರಿಯಾ, ಎನ್ರಿಕ್ ನೊರ್ಕಿಯಾ

Story first published: Thursday, May 12, 2022, 18:01 [IST]
Other articles published on May 12, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+