Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಹರಾಜು: ಒಂದೇ ತಂಡದಲ್ಲಿ ದೀಪಕ್ ಹೂಡಾ, ಕೃನಾಲ್ ಪಾಂಡ್ಯ: ಕಾಲೆಳೆದ ಸೆಹ್ವಾಗ್

IPL 2022: Deepak Hooda and Krunal Pandya in same team Sehwag Funny comment

ದೇಶೀಯ ಕ್ರಿಕೆಟ್‌ನಲ್ಲಿ ಒಂದೇ ತಂಡದಲ್ಲಿದ್ದು ಬಳಿಕ ಕಿತ್ತಾಡಿಕೊಂಡು ಬೇರೆಬೇರೆಯಾಗಿದ್ದ ದೀಪಕ್ ಹೂಡಾ ಹಾಗೂ ಕೃನಾಲ್ ಪಾಂಡ್ಯ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಒಂದೇ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡ ಈ ಇಬ್ಬರು ಆಟಗಾರರನ್ನು ಕೂಡ ತನ್ನ ತಂಡಕ್ಕೆ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ಕ್ರಿಕೆಟ್ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಬೆಳವಣಿಗೆ ಬಗ್ಗೆ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕೂಡ ಕಾಲೆಳೆದು ಟ್ವೀಟ್ ಮಾಡಿದ್ದಾರೆ.

ಈ ಇಬ್ಬರು ಆಟಗಾರರು ಕೂಡ ಆಲ್‌ರೌಂಡರ್‌ಗಳ ವಿಭಾಗದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪಾಲಾಗಿದ್ದಾರೆ. ಮೊದಲಿಗೆ 75 ಲಕ್ಷ ರೂಪಾಯಿ ಮೂಲ ಬೆಲೆ ಹೊಂದಿದ್ದ ದೀಪಕ್ ಹೂಡಾ ಅವರನ್ನು 5.75 ಕೋಟಿ ರೂಪಾಯಿಗೆ ತಂಡಕ್ಕೆ ಸೇರ್ಪಡೆಗೊಳಿಸಿದ ಲಕ್ನೋ ಫ್ರಾಂಚೈಸಿ ನಂತರ ಕೃನಾಲ್ ಪಾಂಡ್ಯ ಅವರನ್ನು ಕೂಡ ತಂಡಕ್ಕೆ ಸೇರಿಸಿಕೊಂಡಿದೆ. ಕೃನಾಲ್ ಪಾಂಡ್ಯ 2 ಕೋಟಿ ರೂಪಾಯಿ ಮೂಲ ಬೆಲೆಯನ್ನು ಹೊಂದಿದ್ದರು. ಅವರನ್ನು ಲಕ್ನೋ ಫ್ರಾಂಚೈಸಿ 8.25 ಕೋಟಿ ನೀಡಿ ಖರೀದಿಸಿದೆ.

ಇನ್ನು ಲಕ್ನೋ ತಂಡಕ್ಕೆ ದೀಪಕ್ ಹೂಡಾ ಹಾಗೂ ಕೃನಾಲ್ ಪಾಂಡ್ಯ ಸೇರ್ಪಡೆಯಾದ ಬಳಿಕ ವಿರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿ ಕಾಲೆಳೆದಿದ್ದಾರೆ. "ಹೂಡಾ ಹಾಗೂ ಕೃನಾಲ್ ಉತ್ತಮ ಜೋಡಿಯಾಗಬಲ್ಲರು. ಡಿವೈಡೆಡ್ ಬೈ ಬರೋಡಾ, ಯುನೈಟೆಡ್ ಬೈ ಲಕ್ನೋ" ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ಇದಕ್ಕೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ತಂಡ ಕ್ವಿಂಟನ್ ಡಿಕಾಕ್ ಅವರನ್ನು 6.75 ಕೊಟಿ ನೀಡಿ ಖರೀದಿಸಿದರೆ ಮನೀಶ್ ಪಾಂಡೆ 4.60 ಕೋಟಿಗೆ ತಂಡಕ್ಕೆ ಸೇರ್ಪಡೆಗೊಂಡರು. ನಂತರ ಆಲ್‌ರೌಂಡರ್ ಜೇಸನ್ ಹೋಲ್ಡರ್ ಅವರನ್ನು ಕೂಡ ತಂಡಕ್ಕೆ ಸೇರ್ಪಡೆಗೊಳಿಸಲು ಯಶಸ್ವಿಯಾದ ಲಕ್ನೋ ತಂಡ ಮಾರ್ಕ್ ವುಡ್ ಅವರನ್ನು ಕೂಡ ಖರೀದಿಸಿದೆ.

ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಭಾಗವಹಿಸಿರುವ ಲಕ್ನೋ ಸೂಪರ್‌ಜೈಂಟ್ಸ್ ತಂಡ ಹರಾಜಿಗೂ ಮುನ್ನ ಕೆಎಲ್ ರಾಹುಲ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿದ್ದರೆ ಮಾರ್ಕಸ್ ಸ್ಟೋಯ್ನಿಸ್ ಹಾಗೂ ರವಿ ಬಿಷ್ಣೋಯ್ ಅವರನ್ನು ಡ್ರಾಫ್ಟ್ ಮಾಡಿಕೊಂಡು ಸೇರ್ಪಡೆಗೊಳಿಸಿತ್ತು.

ಒಂದೇ ಒಂದು ವಿಕೆಟ್ ಪಡೆದ ಈತನನ್ನ RCB 10 ಕೋಟಿ ಕೊಟ್ಟು ಖರೀದಿ ಮಾಡಿದ್ಯಾಕೆ? | Oneindia Kannada

Story first published: Sunday, February 13, 2022, 15:56 [IST]
Other articles published on Feb 13, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+