ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

CSK vs DC: ಕಾನ್ವೆ ಅಬ್ವರ; ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಬೃಹತ್ ರನ್‌ಗಳ ಗುರಿ ನೀಡಿದ ಸೂಪರ್ ಕಿಂಗ್ಸ್

IPL 2022: Delhi Capitals need 209 runs against Chennai Super Kings

ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 55ನೇ ಪಂದ್ಯದಲ್ಲಿ ಇಂದು ( ಮೇ 8 ) ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಾಟ ನಡೆಸುತ್ತಿವೆ.

ಮುಂಬೈನ ಡಾ ಡಿ ವೈ ಸ್ಪೋರ್ಟ್ಸ್ ಅಕಾಡೆಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಬೌಲಿಂಗ್ ಆಯ್ದುಕೊಂಡಿದ್ದು ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 208 ರನ್ ಕಲೆಹಾಕಿದ್ದು ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 209 ರನ್‌ಗಳ ಬೃಹತ್ ಗುರಿಯನ್ನು ನೀಡಿದೆ.

IPL 2022: ಟೂರ್ನಿಯಲ್ಲಿ 3ನೇ ಬಾರಿ ಡಕ್ಔಟ್ ಆದ ಕೊಹ್ಲಿ; ಹೆಚ್ಚು ಬಾರಿ ಡಕ್ಔಟ್ ಆದ ನಾಲ್ವರು ಇವರೇ!IPL 2022: ಟೂರ್ನಿಯಲ್ಲಿ 3ನೇ ಬಾರಿ ಡಕ್ಔಟ್ ಆದ ಕೊಹ್ಲಿ; ಹೆಚ್ಚು ಬಾರಿ ಡಕ್ಔಟ್ ಆದ ನಾಲ್ವರು ಇವರೇ!

ಚೆನ್ನೈ ಸೂಪರ್ ಕಿಂಗ್ಸ್ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ರುತುರಾಜ್ ಗಾಯಕ್ವಾಡ್ ಮತ್ತು ಡಿವೋನ್ ಕಾನ್ವೆ ಪವರ್ ಪ್ಲೇನಲ್ಲಿಯೇ 57 ರನ್ ಚಚ್ಚಿ 110 ರನ್‌ಗಳ ಅಮೋಘ ಜೊತೆಯಾಟ ಆಡುವುದರ ಮೂಲಕ ತಂಡಕ್ಕೆ ಉತ್ತಮ ಆರಂಭವನ್ನು ಕಟ್ಟಿಕೊಟ್ಟರು. ರುತುರಾಜ್ ಗಾಯಕ್ವಾಡ್ 33 ರನ್ ಗಳಿಸಿ ಔಟ್ ಆದರೆ, ಡಿವೋನ್ ಕಾನ್ವೆ 49 ಎಸೆತಗಳಲ್ಲಿ 87 ರನ್ ಬಾರಿಸಿ ಮಿಂಚಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಿವಂ ದುಬೆ 19 ಎಸೆತಗಳಲ್ಲಿ 32 ರನ್ ಬಾರಿಸಿ ಅಬ್ಬರಿಸಿದರೆ, ಅಂಬಾಟಿ ರಾಯುಡು 5 ರನ್ ಗಳಿಸಿದರು, ಮೊಯಿನ್ ಅಲಿ 9 ರನ್, ರಾಬಿನ್ ಉತ್ತಪ್ಪ ಗೋಲ್ಡನ್ ಡಕ್ ಔಟ್, ಎಂ ಎಸ್ ಧೋನಿ ಅಜೇಯ 21 ರನ್ ಹಾಗೂ ಡ್ವೇಯ್ನ್ ಬ್ರಾವೋ ಅಜೇಯ 1 ರನ್ ಕಲೆಹಾಕಿದರು.

ವಿರಾಟ್ ಕೊಹ್ಲಿ ಕಳಪೆ ಫಾರ್ಮ್; ಆದರೂ ಭಾರತ ತಂಡದಿಂದ ವಿಶ್ರಾಂತಿ ಬೇಡವೆಂದ ಮಾಜಿ ಕ್ರಿಕಟಿಗವಿರಾಟ್ ಕೊಹ್ಲಿ ಕಳಪೆ ಫಾರ್ಮ್; ಆದರೂ ಭಾರತ ತಂಡದಿಂದ ವಿಶ್ರಾಂತಿ ಬೇಡವೆಂದ ಮಾಜಿ ಕ್ರಿಕಟಿಗ

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆನ್ರಿಚ್ ನಾರ್ಕಿಯಾ 3 ವಿಕೆಟ್, ಖಲೀಲ್ ಅಹ್ಮದ್ 2 ವಿಕೆಟ್ ಮತ್ತು ಮಿಚೆಲ್ ಮಾರ್ಷ್ 1 ವಿಕೆಟ್‌ ಪಡೆದರು.

ಚೆನ್ನೈ ಸೂಪರ್ ಕಿಂಗ್ಸ್ ಆಡುವ ಬಳಗ: ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಮೊಯಿನ್ ಅಲಿ, ಎಂಎಸ್ ಧೋನಿ (ನಾಯಕ ಮತ್ತು ವಿಕೆಟ್ ಕೀಪರ್), ಶಿವಂ ದುಬೆ, ಡ್ವೇನ್ ಬ್ರಾವೋ, ಮಹೇಶ್ ತೀಕ್ಷಣ, ಸಿಮರ್ಜೀತ್ ಸಿಂಗ್, ಮುಖೇಶ್ ಚೌಧರಿ

Dinesh Karthik ಆಟ ನೋಡಿ RCB ಆಟಗಾರರು ಮಾಡಿದ್ದೇನು | Virat Kohli bows down to DK | Oneindia Kannada

ಡೆಲ್ಲಿ ಕ್ಯಾಪಿಟಲ್ಸ್ ಆಡುವ ಬಳಗ: ಡೇವಿಡ್ ವಾರ್ನರ್, ಶ್ರೀಕರ್ ಭರತ್, ಮಿಚೆಲ್ ಮಾರ್ಷ್, ರಿಷಭ್ ಪಂತ್ ( ನಾಯಕ ಮತ್ತು ವಿಕೆಟ್ ಕೀಪರ್ ), ರೋವ್‌ಮನ್ ಪೊವೆಲ್, ಅಕ್ಸರ್ ಪಟೇಲ್, ರಿಪಾಲ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಖಲೀಲ್ ಅಹ್ಮದ್, ಅನ್ರಿಚ್ ನಾರ್ಟ್ಜೆ

Story first published: Sunday, May 8, 2022, 21:38 [IST]
Other articles published on May 8, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X