Covid in IPL 2022: ಕೊರೊನಾ ಭಯ: ಅಭ್ಯಾಸಕ್ಕೆ ಬ್ರೇಕ್, ಕ್ವಾರಂಟೈನ್ ಆದ ಡೆಲ್ಲಿ ಕ್ಯಾಪಿಟಲ್ಸ್

ಐಪಿಎಲ್ 2021ನೇ ಆವೃತ್ತಿಯಲ್ಲಿ ಆಕ್ರಮಿಸಿ ಐಪಿಎಲ್ ಸ್ಥಗಿತಕ್ಕೆ ಕಾರಣವಾಗಿದ್ದ ಕೊರೊನಾ ಕಾಟ ಮತ್ತೆ ಶುರುವಾಗುವ ಲಕ್ಷಣ ತೋರಿದಂತಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೊರೊನಾ ಭೀತಿಗೆ ಒಳಗಾಗಿದ್ದು, ಅಭ್ಯಾಸ ಪಂದ್ಯವನ್ನ ತ್ಯಜಿಸಿ ಸಂಪೂರ್ಣ ತಂಡದ ಆಟಗಾರರು ಕ್ವಾರಂಟೈನ್ ಆಗಿದ್ದಾರೆ.
ಪುಣೆಗೆ ಇಂದು ತೆರಳಬೇಕಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ದಿನದ ಪ್ರಯಾಣವನ್ನ ರದ್ದುಗೊಳಿಸಿದ್ದು, ಹೋಟೆಲ್ ರೂಂಗಳಲ್ಲಿ ಕ್ವಾರಂಟೈನ್ ಆಗಿದ್ದಾರೆ. ಪ್ರತಿ ರೂಂಗಳಿಗೆ ತೆರಳಿ ಎಲ್ಲಾ ಆಟಗಾರರ ಕೋವಿಡ್-19 ಟೆಸ್ಟ್ ಮಾಡಲಾಗುವುದು.
ತಂಡದ ಫಿಸಿಯೋ ಪ್ಯಾಟ್ರಿಕ್ ಪರ್ಹಾರ್ಟ್ ಕೋವಿಡ್-19 ಪಾಸಿಟಿವ್ ಆಗಿದ್ದರ ಪರಿಣಾಮ ಐಸೋಲೆಟ್ ಆಗಿದ್ದರು. ಹೀಗಾಗಿ ಪ್ರತಿಯೊಬ್ಬ ಆಟಗಾರರು ಕೋವಿಡ್-19 ಪಾಸಿಟಿವ್ ಪರೀಕ್ಷೆಗೆ ಒಳಪಡುವ ಮುನ್ನ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್‌ನಲ್ಲಿ ಓರ್ವ ಆಟಗಾರ ಪಾಸಿಟಿವ್ ಆಗಿದ್ದಾನೆ. ಹೀಗಾಗಿ ಆರ್‌ಟಿಪಿಸಿಆರ್ ಟೆಸ್ಟ್ ಫಲಿತಾಂಶ ಬರುವವರೆಗೂ ಡೆಲ್ಲಿ ಕ್ಯಾಪಿಟಿಲ್ಸ್ ಚಿಂತೆಗೊಳಗಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ಬುಧವಾರ (ಏಪ್ರಿಲ್ 20) ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಪುಣೆಯಲ್ಲಿ ಪಂದ್ಯವನ್ನಾಡಲಿದೆ. ಆದ್ರೆ ಈಗ ಕೋವಿಡ್-19 ಕೇಸ್‌ಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಬಿಸಿಸಿಐ ಬುಧವಾರ ನಡೆಯಲಿರುವ ಪಂದ್ಯದ ಕುರಿತು ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನ ಕಾದು ನೋಡಬೇಕಿದೆ.
ಭಾರತದಲ್ಲಿ ಕಳೆದ ಕೆಲ ದಿನಗಳಿಂದ ಕೋವಿಡ್-19 ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು 2,183 ಹೊಸ ಕೇಸ್‌ಗಳು ವರದಿಯಾಗಿವೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications