IPL 2022 ಎಲಿಮಿನೇಟರ್: RCB vs LSG ; ಭಾರೀ ಗಾಳಿ, ಮಳೆ ಕಾರಣ ಟಾಸ್ ವಿಳಂಬ, ಮುಂದೇನು?

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ 2022ರ ಪ್ಲೇಆಫ್ ಹಂತಗಳ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು (ಬುಧವಾರ, ಮೇ 25) ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೆಣಸಲಿದೆ. ಆದರೆ ಭಾರೀ ಗಾಳಿ ಮತ್ತು ಮಳೆಯ ಕಾರಣ ಟಾಸ್ ವಿಳಂಬವಾಗಿದೆ.
ಮಳೆ, ಗಾಳಿ ಕಡಿಮೆಯಾಗಿದ್ದು, ಪಿಚ್ ಮೇಲೆ ಹಾಕಿದ್ದ ಕವರ್ ಅನ್ನು ತೆಗೆಯಲಾಗಿದೆ. ಟಾಸ್ ಸಮಯವನ್ನು ನಿಗದಿಪಡಿಸಿದ್ದು, 7.54ಕ್ಕೆ ಟಾಸ್ ಆಗಲಿದೆ. 8.10ಕ್ಕೆ ಇನ್ನಿಂಗ್ಸ್ ಆರಂಭವಾಗಲಿದೆ.
ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್‌ಸಿಬಿ ತಂಡವು ಈ ಋತುವಿನ ಪಂದ್ಯಾವಳಿಯ ಅತ್ಯುತ್ತಮ ತಂಡಗಳಲ್ಲಿ ಒಂದಾದ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸುತ್ತಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮಹತ್ವದ ಪಂದ್ಯವನ್ನು ಆಡಲು ಸಜ್ಜಾಗಿದ್ದು, ಈ ಎಲಿಮಿನೇಟರ್ ಪಂದ್ಯದ ವಿಜೇತರು ಕ್ವಾಲಿಫೈಯರ್ 2ರಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ಈಗಾಗಲೇ ಗುಜರಾತ್ ಟೈಟನ್ಸ್ ಐಪಿಎಲ್ 2022ರ ಫೈನಲ್ ಪ್ರವೇಶಿಸಿದ ಮೊದಲ ತಂಡವಾಗಿದೆ.
ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ಪಂದ್ಯಗಳು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದ್ದರೆ, ಕ್ವಾಲಿಫೈಯರ್ 2 ಮತ್ತು ಫೈನಲ್ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.
ಸದ್ಯದ ಎಲಿಮಿನೇಟರ್ ಪಂದ್ಯದ ಪರಿಸ್ಥಿತಿ
* ಎಲಿಮಿನೇಟರ್ ಪಂದ್ಯ ಆರಂಭವಾಗಲು ಓವರ್‌ಗಳಲ್ಲಿ ಯಾವುದೇ ಕಡಿತವಿಲ್ಲದೇ 9.40pm ವರೆಗೆ ಅವಕಾಶ.
* ಪಂದ್ಯ ಆರಂಭಿಸಲು ರಾತ್ರಿ 11.56ರವೆರೆಗೆ ಅವಕಾಶ, ಪ್ರತಿ ತಂಡಕ್ಕೆ ತಲಾ 5 ಓವರ್ ನೀಡಲಾಗುತ್ತದೆ.
* ಪ್ರತಿ ತಂಡಕ್ಕೆ ತಲಾ 5 ಓವರ್ ಆಡಲು ಸಮಯಾವಕಾಶ ಇಲ್ಲದಿದ್ದಲ್ಲಿ ಸೂಪರ್ ಓವರ್. ಅದು 12.50ರ ಒಳಗೆ ಶುರುವಾಗಬೇಕು.
* ಕೊನೆಗೆ ಆಟ ನಡೆಯದಿದ್ದರೆ, ಲೀಗ್ ಹಂತದ ರನ್‌ರೇಟ್ ಆಧಾರದ ಮೇಲೆ ಜಯಶಾಲಿ ಎಂದು ಘೋಷಿಸಲಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications