'ನೋ ಬಾಲ್' ವಿವಾದದ ಮಧ್ಯೆಯೇ ಯುಜಿ ತರಲೆ: ಕುಲ್‌ದೀಪ್‌ಗೆ ಕಾಡಿದ ಚಾಹಲ್: ವಿಡಿಯೋ

ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಮಧ್ಯೆ ಶುಕ್ರವಾರ ರಾತ್ರಿ ನಡೆದ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿತ್ತು. ಕಡೆಯ ಕ್ಷಣದ ವರೆಗೂ ನಡೆದ ಕುತೂಹಕಾರಿ ಸೆಣೆಸಾಟದಲ್ಲಿ ಅಂತಿಮವಾಗಿ ರಾಜಸ್ಥಾನ್ ರಾಯಲ್ಸ್ ತಂಡ ಗೆದ್ದು ಬೀಗಿದೆ. ಈ ಪಂದ್ಯದ ಅಂತಿಮ ಓವರ್‌ನಲ್ಲಿ ನಡೆದ 'ನೋ ಬಾಲ್' ವಿವಾದ ಕೆಲ ಕಾಲ ಗೊಂದಲದ ವಾತಾವರಣಕ್ಕೆ ಕಾರಣವಾಗಿತ್ತು. ಅಂತಿಮ ಓವರ್‌ನಲ್ಲಿ 36 ರನ್‌ಗಳ ಅಗತ್ಯವಿದ್ದಾಗ ಕ್ರೀಸ್‌ನಲ್ಲಿದ್ದ ರೋವ್ಮನ್ ಪೋವಲ್ ಮೊದಲ ಎರಡು ಎಸೆತಗಳನ್ನು ಸಿಕ್ಸರ್‌ಗೆ ಅಟ್ಟಿದ್ದರು. ಫುಲ್‌ಟಾಸ್ ಆಗಿ ಬಂದ ಮುರನೇ ಎಸೆತವನ್ನು ಕೂಡ ಪೋವೆಲ್ ಸಿಕ್ಸರ್‌ಗೆ ಅಟ್ಟಿದ್ದರು.
ಆದರೆ ಈ ಎಸೆತ ನೋಬಾಲ್ ಎಂಬುದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಾದವಾಗಿತ್ತು. ಹೀಗಾಗಿ ಡಗೌಟ್‌ನಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಆಟಗಾರರನ್ನು ವಾಪಾಸಾಗುವಂತೆ ಸನ್ನೆ ಮಾಡಿದ್ದರು. ಅಲ್ಲದೆ ಅಂಗಳಕ್ಕೆ ಕೋಚ್ ಪ್ರವೀಣ್ ಆಮ್ರೆಯವರನ್ನು ಕಳುಹಿಸಿ ಅಂಪಾಯರ್‌ಗಳ ಜೊತೆ ಮಾತಿನ ಚಕಮಕಿ ನಡೆಸಿದ್ದರು. ಆದರೆ ಅಂಪಾಯರ್‌ಗಳು ಆಮ್ರೆಯನ್ನು ನೇರವಾಗಿ ವಾಪಾಸ್ ಕಳುಹಿಸಿದ್ದರು. ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಮ್ಯಾಚ್‌ರೆಫ್ರಿ ದಂಡ ಹಾಗೂ ನಿಷೇಧದ ಶಿಕ್ಷೆ ವಿಧಿಸಿದ್ದಾರೆ.

ಅಭಿಮಾನಿಗಳು ಮಿಸ್ ಮಾಡಿಕೊಂಡ ದೃಶ್ಯ
ಮೈದಾನದಲ್ಲಿ ಈ ನಾಟಕೀಯ ಬೆಳವಣಿಗೆಗಳು ನಡೆಯುತ್ತಿದ್ದರೆ ಇತ್ತ ಬ್ಯಾಟಿಂಗ್ ನಡೆಸುತ್ತಿದ್ದ ಡಿಸಿ ತಂಡದ ಕುಲ್‌ದೀಪ್ ಯಾದವ್ ಅವರನ್ನು ರಾಜಸ್ಥಾನ್ ರಾಯಲ್ಸ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಕಾಡಿದ ಘಟನೆ ನಡೆದಿದೆ. ಮಾತಿನ ಚಕಮಕಿ, ನಾಟಕೀಯ ದೃಶ್ಯಗಳ ಮಧ್ಯೆ ಈ ದೃಶ್ಯವನ್ನು ಅಭಿಮಾನಿಗಳು ಮಿಸ್ ಮಾಡಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್
ಆದರೆ ಸಾಮಾಜಿಕ ಜಾಲತಾಣದಲ್ಲಿ ಈಗ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಟೀಮ್ ಇಂಡಿಯಾದ ಸ್ಪಿನ್ ಜೋಡಿಯಾಗಿರುವ ಕುಲ್‌ದೀಪ್ ಯಾದವ್ ಹಾಗೂ ಯುಜುವೇಂದ್ರ ಚಾಹಲ್ ಅತ್ಯಂತ ಆಪ್ತ ಗೆಳೆಯರು ಎಂಬುದು ಕ್ರಿಕೆಟ್ ಪ್ರೇಮಿಗಳಿಗೆ ಹೊಸತಲ್ಲ. ಆರ್‌ಆರ್ ಹಾಗೂ ಡಿಸಿ ಪಂದ್ಯದ ಮಧ್ಯೆ ನಡೆದಿರುವ ಈ ಘಟನೆ ಈ ಇಬ್ಬರು ಆಟಗಾರರ ಸ್ನೇಹಕ್ಕೆ ಸಾಕ್ಷಿಯಾಗಿದೆ.
ಕುಲ್-ಚಾ ಮಧ್ಯೆ ನಡೆದಿದ್ದೇನು?
ಒಂದೆಡೆ ನೋ ಬಾಲ್ ನೀಡದ ಅಂಪಾಯರ್ ಬಗ್ಗೆ ಅಸಮಾಧಾನಗೊಂಡ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಅಂಪಾಯರ್ ನಿರ್ಧಾರವನ್ನು ಪ್ರತಿಭಟಿಸಲು ಮುಂದಾದರು. ಕ್ರೀಸ್‌ನಲ್ಲಿದ್ದ ಬ್ಯಾಟರ್‌ಗಳಾದ ರೋವ್ಮನ್ ಪೋವಲ್ ಹಾಗೂ ಕುಲ್‌ದೀಪ್ ಯಾದವ್ ಅವರನ್ನು ಫೆವಿಲಿಯನ್‌ಗೆ ವಾಪಾಸಾಗುವಂತೆ ಸೂಚನೆ ನೀಡಿದ್ದರು. ಪಂತ್ ಸೂಚನೆಯನ್ನು ಗಮನಿಸುತ್ತಾ ಅದೇನೋ ಹೇಳಲು ಮುಂದಾಗುತ್ತಿದ್ದ ಕುಲ್‌ದೀಪ್ ಯಾದವ್‌ಗೆ ಅಡ್ಡ ಬಂದ ಯುಜುವೇಂದ್ರ ಚಾಹಲ್ ಕ್ರೀಸ್‌ನತ್ತ ಹೋಗುವಂತೆ ಮೊದಲಿಗೆ ಸೂಚಿಸಿದರು. ನಂತರ ಮತ್ತೇನೋ ನಾಯಕನಿಗೆ ಹೇಳಲು ಮುಂದಾದ ಕುಲ್‌ದೀಪ್ ಯಾದವ್ ಅವರನ್ನು ಕ್ರೀಸ್‌ನತ್ತ ತಳ್ಳಿದ್ದರು.

ಕುಲ್‌ದೀಪ್‌ಗೆ ಕಾಡಿದ ಚಾಹಲ್
ಬಿಸಿ ಬಿಸಿ ವಾತಾವರಣದಲ್ಲಿಯೂ ಯುಜುವೇಂದ್ರ ಚಾಹಲ್ ತಮ್ಮ ಕೀಟಲೆ ವ್ಯಕ್ತಿತ್ವವನ್ನು ಪ್ರದರ್ಶಿಸಿದ್ದರು. ಕ್ರೀಸ್‌ನಲ್ಲಿದ್ದ ತನ್ನ ಆಪ್ತ ಸ್ನೇಹಿತ ಕುಲ್‌ದೀಪ್ ಯಾದವ್ ಅವರನ್ನು ಕಾಡಿದ ಆ ದೃಶ್ಯಗಳು ಅಭಿಮಾನಿಗಳ ಮುಖದಲ್ಲಿ ನಗು ಮೂಡಿಸುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications