IPL 2022: ಪ್ರೇಕ್ಷಕರಿಗೆ ಪ್ಲಾಸ್ಟಿಕ್ ಚೇರ್ ನೀಡಿ ಕೆಂಗಣ್ಣಿಗೆ ಗುರಿಯಾದ ಬ್ರಬೋರ್ನ್ ಸ್ಟೇಡಿಯಂ ಆಡಳಿತ ಮಂಡಳಿ

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್‌ನಲ್ಲಿ ಭಾನುವಾರ ನಡೆದ ಡಬಲ್ ಹೆಡರ್‌ನ ಮೊದಲ ಪಂದ್ಯದಲ್ಲಿ ಬ್ರಬೋರ್ನ್ ಸ್ಟೇಡಿಯಂ ಆಡಳಿತ ಮಂಡಳಿ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಇದಕ್ಕೆ ಕಾರಣ ಪ್ರೇಕ್ಷಕರಿಗೆ ಆಯೋಜಿಸಿದ್ದ ಪ್ಲಾಸ್ಟಿಕ್ ಚೇರ್‌ಗಳು
ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಮೊದಲ ಪಂದ್ಯದಲ್ಲಿ ಶೇಕಡಾ 25ರಷ್ಟು ಪ್ರೇಕ್ಷಕರಿಗೆ ಪಂದ್ಯ ನೋಡಲು ಅವಕಾಶ ನೀಡಲಾಗಿತ್ತು. ಆದ್ರೆ ಈ ಸ್ಟೇಡಿಯಂನಲ್ಲಿ ಅಭಿಮಾನಿಗಳಿಗೆ ಪಂದ್ಯ ವೀಕ್ಷಿಸಲು ಪ್ಲಾಸ್ಟಿಕ್ ಚೇರ್‌ಗಳನ್ನು ಇಡಲಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್‌ಗೆ ಕಾರಣವಾಗಿದೆ.
ಸ್ಟೇಡಿಯಂ ಸುಮಾರು 20,000 ಪ್ರೇಕ್ಷಕರ ಸಾಮರ್ಥ್ಯ ಹೊಂದಿದ್ದು, ಚರ್ಚ್ ಗೇಟ್ ಎಂಡ್ ಮತ್ತು ಪೆವಿಲಿಯನ್ ಎಂಡ್ ಕಡೆಗಿನ ಜಾಗದಲ್ಲಿ ಪ್ಲಾಸ್ಟಿಕ್ ಚೇರ್‌ಗಳನ್ನ ಇಡಲಾಗಿತ್ತು. ಇದು ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದು, ಅಷ್ಟು ಹಣ ನೀಡಿ ಟಿಕೆಟ್ ಪಡೆದು ಪ್ಲಾಸ್ಟಿಕ್ ಚೇರ್‌ಗಳಲ್ಲಿ ಬಂದು ಕೂರಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
1937ರಲ್ಲಿ ಪ್ರಾರಂಭಗೊಂಡಿರುವ ಈ ಸ್ಟೇಡಿಯಂನಲ್ಲಿ ಅಂತರಾಷ್ಟ್ರೀಯ ಪಂದ್ಯಗಳ ಆಯೋಜನೆ ತುಂಬಾ ಕಡಿಮೆ ಆಯೋಜಿಸಲಾಗಿದ್ದು, ಅಭಿವೃದ್ದಿಯಲ್ಲಿ ಹಿಂದುಳಿದಿದೆ. ಐತಿಹಾಸಿಕ ವಾಂಖೆಡೆ ಸ್ಟೇಡಿಯಂನಿಂದ ಕೇವಲ 700 ಮೀಟರ್ ದೂರದಲ್ಲಿರುವ ಈ ಸ್ಟೇಡಿಯಂ ಸುಧಾರಣೆಗೊಳ್ಳಬೇಕಿದೆ.
ವಾಂಖೆಡೆ ಸ್ಟೇಡಿಯಂನ ನಿರ್ಮಾಣದ ನಂತರ, ಬ್ರಬೋರ್ನ್ ಸ್ಟೇಡಿಯಂ ಅನ್ನು ಪ್ರಥಮ ದರ್ಜೆ ಪಂದ್ಯಗಳಿಗೆ ಮಾತ್ರ ಬಳಸಲಾಗಿದ್ದು, ವಾಂಖೆಡೆಯಲ್ಲಿ ಪ್ರಮುಖ ಭಾರತೀಯ ತಂಡದ ಪಂದ್ಯಗಳನ್ನು ಆಡಲಾಯಿತು.
ಆದಾಗ್ಯೂ, ಕೋವಿಡ್-19 ಕಾರಣದಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಕ್ರೀಡಾಂಗಣವನ್ನು ಮೂರನೇ ಸ್ಥಳವೆಂದು ಘೋಷಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications