IPL 2022: 8 ವರ್ಷಗಳ ಬಳಿಕ ಧೋನಿ, ಕೊಹ್ಲಿ, ರೋಹಿತ್ ಇಲ್ಲದ ಫೈನಲ್ ಪಂದ್ಯ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022ರ ಫೈನಲ್ ಭಾನುವಾರ (ಮೇ 29) ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟನ್ಸ್ ಮತ್ತು 2008ರ ಚಾಂಪಿಯನ್ ರಾಜಸ್ಥಾನ್ ರಾಯಲ್ಸ್ ನಡುವೆ ಪೈಪೋಟಿ ನಡೆಯಲಿದೆ. ಬಾಲಿವುಡ್ ನಟ ರಣವೀರ್ ಸಿಂಗ್ ಮತ್ತು ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಅವರಿಂದ ಭವ್ಯವಾದ ಸಮಾರೋಪ ಸಮಾರಂಭದ ನಂತರ ರಾತ್ರಿ 8 ಗಂಟೆಗೆ ಫೈನಲ್ ಪಂದ್ಯ ಪ್ರಾರಂಭವಾಗಲಿದೆ.
ಐಪಿಎಲ್ 2022ರ ಫೈನಲ್ ಪಂದ್ಯದಲ್ಲಿ 2014ರ ಬಳಿಕ ಅಂದರೆ 8 ವರ್ಷಗಳ ಬಳಿಕ ಮೊಟ್ಟ ಮೊದಲ ಬಾರಿಗೆ ಭಾರತೀಯ ಕ್ರಿಕೆಟ್‌ನ ಸ್ಟಾರ್ ಕ್ರಿಕೆಟ್ ಆಟಗಾರರಾದ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಇಲ್ಲದ ತಂಡಗಳು ಐಪಿಎಲ್‍ನ ಫೈನಲ್ ಪಂದ್ಯವಾಡುತ್ತಿವೆ.

ಐಪಿಎಲ್‍ನ ಫೈನಲ್‌ನಲ್ಲಿ ಪಾರಮ್ಯ ಮೆರೆದಿರುವ ಚೆನ್ನೈ, ಮುಂಬೈ
ಐಪಿಎಲ್‍ನ ಫೈನಲ್ ಪಂದ್ಯದಲ್ಲಿ ಈವರೆಗೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಪಾರಮ್ಯ ಮೆರೆದಿದೆ. ಆದರೆ ಈ ಬಾರಿ ಹೊಸ ತಂಡ ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಈ ಬಾರಿ ಲೀಗ್‍ನಲ್ಲೇ ತಮ್ಮ ಅಭಿಯಾನ ಮುಗಿಸಿವೆ.
2008ರಲ್ಲಿ ಐಪಿಎಲ್ ಟೂರ್ನಿ ಆರಂಭವಾದಗಿನಿಂದಲೂ ಎಂಎಸ್ ಧೋನಿ, ವಿರಾಟ್ ಕೊಹ್ಲಿ ಅಥವಾ ರೋಹಿತ್ ಶರ್ಮ ಒಂದಲ್ಲ ಒಂದು ತಂಡದಲ್ಲಿ ಆಡಿ ಫೈನಲ್ ಪಂದ್ಯಕ್ಕೆ ಪ್ರವೇಶ ಪಡೆದಿರುವ ಇತಿಹಾಸವಿದೆ. ಆದರೆ ಈ ಬಾರಿ ಈ ಮೂರು ಜನ ಆಟಗಾರರಿದ್ದ ತಂಡಗಳು ಫೈನಲ್‌ಗೆ ತಲುಪಲು ವಿಫಲಗೊಂಡಿವೆ.

ಚೆನ್ನೈ ಸೂಪರ್ ಕಿಂಗ್ಸ್ 4 ಬಾರಿ ಚಾಂಪಿಯನ್
ಇಂಡಿಯನ್ ಪ್ರೀಮಿಯರ್ ಲೀಗ್‌ನ ಇತಿಹಾಸ ನೋಡಿದಾಗ ಮುಂಬೈ ಇಂಡಿಯನ್ಸ್ ತಂಡ 5 ಬಾರಿ ಚಾಂಪಿಯನ್ ಆಗಿದೆ. ಚೆನ್ನೈ ಸೂಪರ್ ಕಿಂಗ್ಸ್ 4 ಬಾರಿ ಪ್ರಶಸ್ತಿ ಗೆದ್ದಿದೆ.
2008, 2010, 2011, 2012, 2013, 2015, 2018, 2019, 2021ರಲ್ಲಿ ಚೆನ್ನೈ ತಂಡ ಫೈನಲ್‌ಗೆ ಪ್ರವೇಶ್ ಪಡೆದು, 2010, 2011, 2018 ಮತ್ತು 2021ರಲ್ಲಿ ಎಂಎಸ್ ಧೋನಿ ನಾಯಕತ್ವದ ಸಿಎಸ್‌ಕೆ ತಂಡ ಚಾಂಪಿಯನ್ ಆಗಿತ್ತು.

ಮೂರು ಬಾರಿ ಫೈನಲ್‌ಗೇರಿರುವ ಆರ್‌ಸಿಬಿ
2010, 2013, 2015, 2017, 2019, 2020 ಫೈನಲ್‌ಗೆ ಪ್ರವೇಶ ಪಡೆದಿದ್ದ ರೋಹಿತ್ ಶರ್ಮ ನಾಯಕತ್ವದ ಮುಂಬೈ ಇಂಡಿಯನ್ಸ್ 2010ರಲ್ಲಿ ಸೋತು ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದನ್ನು ಹೊರತುಪಡಿಸಿ ಉಳಿದ ಎಲ್ಲಾ ಫೈನಲ್‌ಗಳನ್ನು ಗೆದ್ದಿತ್ತು.
2009, 2011, 2016 ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್‌ಗೆ ಬಂದಿತ್ತು. ಆದರೆ ಫೈನಲ್‌ನಲ್ಲಿ ಸೋತು, ಮೂರು ಬಾರಿಯೂ ಪ್ರಶಸ್ತಿಗೆ ಗೆಲ್ಲುವಲ್ಲಿ ವಿಫಲಗೊಂಡಿದೆ. ಈ ಎಲ್ಲಾ ಫೈನಲ್ ಪಂದ್ಯಗಳಲ್ಲಿ ಸ್ಟಾರ್ ಕ್ರಿಕೆಟಿಗರಾದ ಎಂಎಸ್ ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಒಬ್ಬರಲ್ಲ ಒಬ್ಬರು ಆಡಿದ್ದರು.

2014ರಲ್ಲಿ ಕೆಕೆಆರ್, ಕಿಂಗ್ಸ್ ಇಲೆವೆನ್ ಪಂಜಾಬ್ ಫೈನಲ್ ಆಡಿತ್ತು
2014ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಫೈನಲ್ ತಲುಪಿತ್ತು. ಈ ವೇಳೆ ಈ ಮೂರು ಜನ ಆಟಗಾರರಿಲ್ಲದ ತಂಡವೊಂದು ಮೊದಲ ಬಾರಿಗೆ ಐಪಿಎಲ್ ಫೈನಲ್ ಆಡಿತ್ತು. ಆ ಬಳಿಕ ಇದೀಗ 2022ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಈ ಮೂರು ಜನ ಆಟಗಾರರಿಲ್ಲದ ತಂಡವೊಂದು ಆಡುತ್ತಿದೆ.
ಭಾನುವಾರ ಐಪಿಎಲ್ 2022 ಫೈನಲ್ ಪಂದ್ಯವಾಡುತ್ತಿರುವ ಗುಜರಾತ್ ಟೈಟನ್ಸ್ ಚೊಚ್ಚಲ ಆವೃತ್ತಿ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದರೆ, ರಾಜಸ್ಥಾನ ರಾಯಲ್ಸ್ ತಂಡ 14 ವರ್ಷಗಳ ಬಳಿಕ ಎರಡನೇ ಬಾರಿ ಪ್ರಶಸ್ತಿ ಗೆಲ್ಲುವುದಕ್ಕಾಗಿ ಕಾತರದಿಂದ ಕಾಯುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications