IPL 2022: ನಾನು ಯಾವುದೇ ತಂಡಕ್ಕೆ ಹೋಗಲು ಸಿದ್ದನಿದ್ದೇನೆ ಎಂದ ಯುಜವೇಂದ್ರ ಚಹಾಲ್

ಭಾರತದ ಲೆಗ್ ಸ್ಪಿನ್ನರ್ ಯುಜವೇಂದ್ರ ಚಹಾಲ್ ಐಪಿಎಲ್ 2022ರ ಹರಾಜಿನಲ್ಲಿ ಯಾವುದೇ ಫ್ರಾಂಚೈಸಿ ಕೊಂಡುಕೊಂಡರೂ ಸಹ ಆಡಲು ಸಿದ್ದನಿದ್ದೇನೆ ಎಂದು ಹೇಳಿದ್ದಾರೆ. ಆದಾಗ್ಯೂ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಹಿಂದಿರುಗುವುದನ್ನ ಸಹ ಎದುರು ನೋಡುತ್ತಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿರುವ ಯುಜವೇಂದ್ರ ಚಹಾಲ್ 139 ವಿಕೆಟ್‌ಗಳನ್ನ ಕಬಳಿಸಿದ್ದಾರೆ. ಆದ್ರೆ ಈ ಬಾರಿ ಆರ್‌ಸಿಬಿ ಚಹಾಲ್‌ರನ್ನ ರೀಟೈನ್ ಮಾಡಿಕೊಳ್ಳದೆ ಹರಾಜಿಗೆ ಬಿಟ್ಟಿದೆ.
ಆರ್‌ಸಿಬಿ ಐಪಿಎಲ್ 15ನೇ ಸೀಸನ್‌ನ ರೀಟೈನ್ ಪ್ರಕ್ರಿಯೆಯಲ್ಲಿ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ವೇಗಿ ಮೊಹಮ್ಮದ್ ಸಿರಾಜ್‌ರನ್ನ ತಂಡದಲ್ಲಿ ಉಳಿಸಿಕೊಂಡಿದೆ.
ಐಪಿಎಲ್ 2016 ರಲ್ಲಿ ಬೆಂಗಳೂರಿನಲ್ಲಿ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಚಹಾಲ್ 25 ರನ್ ನೀಡಿ 4 ವಿಕೆಟ್ ಪಡೆದಿದ್ದು ಬೆಸ್ಟ್ ಬೌಲಿಂಗ್ ಫಿಗರ್ ಆಗಿದೆ. ಭಾರತದ ಟಿ20 ವಿಶ್ವಕಪ್ ತಂಡದಿಂದ ಕೈಬಿಡಲ್ಪಟ್ಟ ನಂತರ ಐಪಿಎಲ್ 2021 ರ ಎರಡನೇ ಹಂತದಲ್ಲಿ ತಮ್ಮ ಫಾರ್ಮ್ ಅನ್ನು ಮರಳಿ ಕಂಡುಕೊಂಡ ಈತ 18 ವಿಕೆಟ್‌ಗಳನ್ನು ಉರುಳಿಸಿದರು.
2018 ರಲ್ಲಿ ನಡೆದ ಮೆಗಾ ಹರಾಜಿನಲ್ಲಿ RCB ತನ್ನನ್ನು ಉಳಿಸಿಕೊಳ್ಳಲು RTM ಕಾರ್ಡ್ ಅನ್ನು ಬಳಸಿದ ಕ್ಷಣವನ್ನ ಚಹಾಲ್ ನೆನಪಿಸಿಕೊಂಡಿದ್ದಾರೆ.
"ರೈಟ್ ಟು ಮ್ಯಾಚ್ (ಆರ್‌ಟಿಎಂ) ಕಾರ್ಡ್ ಇಲ್ಲದ ಕಾರಣ ನಾನು ಎಲ್ಲಿ ಬೇಕಾದರೂ ಹೋಗಬಹುದೆಂದು ನನಗೆ ಅನಿಸಿದ್ದು ಇದು ಮೊದಲ ಬಾರಿಗೆ. ಏಕೆಂದರೆ ಆರ್‌ಸಿಬಿ 2018 ರ ಹರಾಜಿನಲ್ಲಿ ಚಾಹಲ್‌ಗೆ RTM ಅನ್ನು ಬಳಸಿತ್ತು, "ಎಂದು ಚಹಾಲ್ ರವಿಚಂದ್ರನ್ ಅಶ್ವಿನ್‌ರ ಯೂಟ್ಯೂಬ್ ಚಾನೆಲ್‌ನಲ್ಲಿ ತಿಳಿಸಿದ್ದಾರೆ.
"ಕಳೆದ ಬಾರಿ (2018), RTM ಲಭ್ಯವಿತ್ತು ಮತ್ತು ಅವರು (RCB) ನನಗೆ ಸ್ಪಷ್ಟವಾಗಿ ಹೇಳಿದ್ದು, ಹರಾಜಿನಲ್ಲಿ RTM ಬಳಸಿ ನನ್ನನ್ನು ಖರೀದಿಸುತ್ತೇನೆ ಎಂದಿದ್ದರು. ಆದರೆ ಈ ಬಾರಿ, ಆ ರೀತಿ ಸಾಧ್ಯವಿಲ್ಲ, ಹೀಗಾಗಿ ವೃತ್ತಿಪರ ಆಟಗಾರನಾಗಿ ನಾನು ಯಾವುದೇ ತಂಡಕ್ಕೆ ಹೋಗಲು ಸಿದ್ಧನಿದ್ದೇನೆ'' ಎಂದು ಚಹಾಲ್ ಹೇಳಿದ್ದಾರೆ.
ಚಾಹಲ್ ಎಂಟು ಸೀಸನ್‌ಗಳಲ್ಲಿ ಆರ್‌ಸಿಬಿ ಪರ 113 ಪಂದ್ಯಗಳನ್ನು ಆಡಿದ್ದಾರೆ, ಎಬಿ ಡಿವಿಲಿಯರ್ಸ್ (157) ಮತ್ತು ವಿರಾಟ್ ಕೊಹ್ಲಿ (222) ನಂತರ ಆರ್‌ಸಿಬಿ ಪರ ಅತಿ ಹೆಚ್ಚು ಪಂದ್ಯವನ್ನಾಡಿದ ಮೂರನೇ ಆಟಗಾರನಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications