ಐಪಿಎಲ್: ಕ್ಷುಲ್ಲಕ ಕಾರಣಕ್ಕೆ ಟೂರ್ನಿಯಿಂದ ಹೊರಗುಳಿಯುವ ಆಟಗಾರಿಗೆ ಶಾಕ್ ನೀಡಲಿದೆಯಾ ಬಿಸಿಸಿಐ?

ಐಪಿಎಲ್ 15ನೇ ಆವೃತ್ತಿ ಈಗಾಗಲೇ ಆರಂಭವಾಗಿದ್ದು ಪಂದ್ಯಗಳು ರೋಚಕವಾಗಿ ಸಾಗುತ್ತಿದೆ. ತೀವ್ರ ಪೈಪೋಟಿಯಿಂದ ಪಂದ್ಯಗಳು ನಡೆಯುತ್ತಿದ್ದು ಅಂತಿಮ ಹಂತದವರೆಗೂ ಅಭಿಮಾನಿಗಳಿಗೆ ರೋಚಕ ಅನುಭವವನ್ನು ನೀಡುತ್ತಿದೆ. ಕೆಲ ದೇಶಗಳ ಆಟಗಾರರು ರಾಷ್ಟ್ರೀಯ ತಂಡದ ಕರ್ತವ್ಯದ ಹಿನ್ನಲೆಯಲ್ಲಿ ಇನ್ನಷ್ಟೇ ತಮ್ಮ ಫ್ರಾಂಚೈಸಿಗಳನ್ನು ಸೇರಿಕೊಳ್ಳಬೇಕಾಗಿರುವ ಕಾರಣ ಮುಂದಿನ ದಿನಗಳಲ್ಲಿ ಈ ಪೈಪೋಟಿ ಮತ್ತಷ್ಟು ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ. ಈ ಮಧ್ಯೆ ಫ್ರಾಂಚೈಸಿಗಳು ಬಿಸಿಸಿಐ ಮುಂದೆ ಗಂಭೀರ ವಿಚಾರವೊಂದನ್ನು ಮುಂದಿಟ್ಟಿದ್ದು ಅಸಮಾಧಾನ ವ್ಯಕ್ತಪಡಿಸಿದೆ.
ಐಪಿಎಲ್ ಟೂರ್ನಿಯ ಆರಂಭವಾಗಲು ಕೆಲವೇ ದಿನಗಳಿರುವಾಗ ಕೆಲ ವಿದೇಶಿ ಆಟಗಾರರು ಬೇರೆ ಬೇರೆ ಕಾರಣಗಳನ್ನು ನೀಡಿ ಟೂರ್ನಿಯಿಂದ ಹಿಂದಕ್ಕೆ ಸರಿಯುತ್ತಿದ್ದಾರೆ.ಕಳೆದ ಹಲವು ವರ್ಷಗಳಿಂದ ಈ ರೀತಿ ಪ್ರತಿ ಆವೃತ್ತಿಯಲ್ಲಿಯೂ ನಡೆಯುತ್ತಿದೆ. ಇದು ಫ್ರಾಂಚೈಸಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಬಿಸಿಸಿಐ ಈ ವಿಚಾರವಾಗಿ ಗಂಭೀರವಾಗಿದೆ.

ಕಠಿಣ ಕ್ರಮ ತೆಗೆದುಕೊಳ್ಳಲು ಚಿಂತನೆ
ಐಪಿಎಲ್ ಟೂರ್ನಿಯಿಂದ ಕೊನೆಯ ಕ್ಷಣದಲ್ಲಿ ಹಿಂದಕ್ಕೆ ಸರಿಯುತ್ತಿರುವ ಆಟಗಾರರ ವಿರುದ್ಧ ಬಿಸಿಸಿಐ ಹಾಗೂ ಐಪಿಎಲ್ ಆಡಳಿತ ಮಂಡಳಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಚಿಂತಿಸುತ್ತಿದೆ. ಈ ಬಾರಿಯ ಟೂರ್ನಿಯ ಆರಂಭಕ್ಕೂ ಮುನ್ನ ಇಂಗ್ಲೆಂಡ್ ತಂಡದ ಆಟಗಾರರಾದ ಜೇಸನ್ ರಾಯ್ ಹಾಗೂ ಅಲೆಕ್ಸ್ ಹೇಲ್ಸ್ ಹಿಂದಕ್ಕೆ ಸರಿದಿದ್ದರು. ಈ ತಂಡಗಳು ಅಂತಿಮ ಹಂತದಲ್ಲಿ ಬದಲಿ ಆಟಗಾರರನ್ನು ಸೇರ್ಪಡೆಗೊಳಿಸಿದೆ.
RR vs SRH: ಈ ಮೈಲಿಗಲ್ಲುಗಳ ಮೇಲೆ ಪಡಿಕ್ಕಲ್, ಜೋಸ್ ಬಟ್ಲರ್ ಕಣ್ಣು

ಆಡಳಿತ ಮಂಡಳಿಯಲ್ಲಿ ನಡೆದ ಚರ್ಚೆ
ಇತ್ತೀಚೆಗೆ ನಡೆದ ಐಪಿಎಲ್ ಆಡಳಿತ ಮಂಡಳಿಯ ಸಭೆಯಲ್ಲಿ ಈ ವಿಚಾರವಾಗಿ ಚರ್ಚೆ ನಡೆದಿದೆ. ಈ ಸಬೆಯಲ್ಲಿ ಸೂಕ್ತವಾದ ಕಾರಣವಿಲ್ಲದೆ ಐಪಿಎಲ್ ಟೂರ್ನಿಯಿಂದ ವಿದೇಶಿ ಆಟಗಾರರ ವಿರುದ್ಧ ಕ್ರಮ ಕೈಗೊಳ್ಳಲು ಬಿಸಿಸಿಐ ಚಿಂತನೆ ನಡೆಸಿದೆ. ಹೀಗಾದಲ್ಲಿ ಮುಂದಿನ ಆವೃತ್ತಿಗಳಲ್ಲಿ ಸೂಕ್ತ ಕಾರಣವಿಲ್ಲದೆ ಟೂರ್ನಿಯಿಂದ ಹಿಂದಕ್ಕೆ ಸರಿಯುವ ಆಟಗಾರರು ಮತ್ತೊಮ್ಮೆ ಯೋಚಿಸಬೇಕಾಗುತ್ತದೆ.

ಕಳವಳ ವ್ಯಕ್ತಪಡಿಸಿದ ಫ್ರಾಂಚೈಸಿಗಳು
ಈ ಬಗ್ಗೆ ಕ್ರಿಕ್‌ಬಝ್‌ನ ವರದಿ ಮಾಡಿದ್ದು ಹರಾಜಿನಲ್ಲಿ ಸಣ್ಣ ಮೊತ್ತವನ್ನು ಪಡೆದುಕೊಂಡಿರುವ ಆಟಗಾರರು ಟೂರ್ನಿಯಿಂದ ಹಿಂದೆ ಸರಿಯುವ ಪ್ರವೃತ್ತಿಯ ಬಗ್ಗೆ ಕೆಲ ಫ್ರಾಂಚೈಸಿಗಳು ಕಳವಳ ವ್ಯಕ್ತಪಡಿಸಿದೆ ಎಂದಿದೆ. ಈ ಬಾರಿ ಜೇಸನ್ ರಾಯ್ ಹಾಗೂ ಅಲೆಕ್ಸ್ ಹೇಲ್ಸ್ ಇಬ್ಬರು ಕೂಡ ಮೂಲ ಬೆಲೆಗೆ ಹರಾಜಾಗಿದ್ದರು. ವೈಯಕ್ತಿಕ ಕಾರಣಗಳನ್ನು ನೀಡಿ ಟೂರ್ನಿಯಿಂದ ಹಿಂದಕ್ಕೆ ಸರಿದಿದ್ದರು. ಜೇಸನ್ ರಾಯ್ ಗುಜರಾತ್ ಟೈಟನ್ಸ್ ತಂಡಕ್ಕೆ ಹರಾಜಾಗಿದ್ದರೆ ಅಲೆಕ್ಸ್ ಹೇಲ್ಸ್ ಗುಜರಾತ್ ಟೈಟನ್ಸ್ ತಂಡದ ಪಾಲಾಗಿದ್ದರು.


ಆಟಗಾರರ ಅಂತಿಮ ಕ್ಷಣದ ನಿರ್ಧಾರದಿಂದ ಪ್ರಾಂಚೈಸಿಗಳಿಗೆ ತೊಂದರೆ
ಐಪಿಎಲ್ ಆಡಳಿತ ಮಂಡಳಿಯ ಸದಸ್ಯರೊಬ್ಬರು ಈ ಬೆಳವಣಿಗೆ ಬಗ್ಗೆ ಕ್ರಿಕೆಟ್ ಬಜ್‌ಗೆ ಪ್ರತಿಕ್ರಿಯಿಸಿದ್ದಾರೆ. "ಲೀಗ್‌ನ ಪ್ರಮುಖ ಸ್ಟೇಕ್‌ಹೋಲ್ಡರ್‌ಗಳಾಗಿರುವ ಫ್ರಾಂಚೈಸಿಗಳ ಹಿತಾಸಕ್ತಿಯನ್ನು ಕಾಪಾಡಲು ಐಪಿಎಲ್ ಆಡಳಿತ ಮಂಡಳಿ ಬದ್ಧವಾಗಿದೆ. ಫ್ರಾಂಚೈಸಿಗಳು ಓರ್ವ ಆಟಗಾರನ ಮೇಲೆ ಸಾಕಷ್ಟು ರೀತಿಯ ಯೋಜನೆ ಮಾಡಿ ಬಿಡ್ ಮಾಡುತ್ತದೆ. ಆಟಗಾರರು ಟೂರ್ನಿಯಿಂದ ಹಿಂದಕ್ಕೆ ಸರಿದರೆ ಆಗ ಅವರ ಯೋಜನೆಗಳು ತಲೆಕೆಳಗಾಗುತ್ತದೆ. ಅದು ಕೂಡ ಕ್ಷುಲ್ಲಕ ಕಾರಣಗಳಿಗೆ ಹಿಂದೆ ಸರಿಯುವುದು ಕಳವಳಕ್ಕೆ ಕಾರಣವಾಗಿದೆ" ಎಂದಿದ್ದಾರೆ ಐಪಿಎಲ್ ಆಡಳಿತ ಮಂಡಳಿಯ ಸದಸ್ಯರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications