GT vs RR ಕ್ವಾಲಿಫೈಯರ್ 1: ಈ ದಾಖಲೆಗಳ ಮೇಲೆ ಕಣ್ಣಿಟ್ಟಿದ್ದಾರೆ ಬಟ್ಲರ್, ಚಹಲ್, ಸ್ಯಾಮ್ಸನ್

ಕಳೆದ ಮಾರ್ಚ್ ತಿಂಗಳಿನಲ್ಲಿ ಆರಂಭವಾಗಿದ್ದ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತ ಕಳೆದ ಭಾನುವಾರದಂದು ನಡೆದ ಸನ್ ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದ ಮೂಲಕ ಮುಕ್ತಾಯಗೊಂಡಿದ್ದು, ಇಂದಿನಿಂದ ( ಮೇ 24 ) ಪ್ಲೇಆಫ್ ಸುತ್ತು ಆರಂಭಗೊಂಡಿದೆ. ಪ್ಲೇಆಫ್ ಸುತ್ತಿಗೆ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್, ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್, ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಯಶಸ್ವಿಯಾಗಿ ಲಗ್ಗೆ ಇಟ್ಟಿದ್ದು, ಅಂಕಪಟ್ಟಿಯಲ್ಲಿ ಟಾಪ್ 2 ಸ್ಥಾನಗಳನ್ನು ಪಡೆದುಕೊಂಡಿರುವ ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಇಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸೆಣಸಾಟ ನಡೆಸುತ್ತಿದ್ದು, ಈ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಪಂದ್ಯಕ್ಕೆ ಪ್ರವೇಶ ಪಡೆದುಕೊಳ್ಳಲಿದೆ ಹಾಗೂ ಸೋಲುವ ತಂಡ ಕ್ವಾಲಿಫೈಯರ್ 2 ಪಂದ್ಯಕ್ಕೆ ಪ್ರವೇಶಿಸಲಿದೆ.
ಇಂದಿನ ಪಂದ್ಯದಲ್ಲಿ ಸೋತ ತಂಡಕ್ಕೆ ಇನ್ನೊಂದು ಅವಕಾಶವಿದ್ದರೂ ಸಹ ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಎರಡೂ ತಂಡಗಳೂ ಸಹ ಜಯ ಸಾಧಿಸಿ ಫೈನಲ್ ಪ್ರವೇಶಿಸುವ ಗುರಿಯೊಂದಿಗೆ ಕಣಕ್ಕಿಳಿಯಲಿವೆ. ಇನ್ನು ಎರಡೂ ತಂಡಗಳು ಸಹ ಬಲಿಷ್ಠ ಆಟಗಾರರಿಂದ ಕೂಡಿದ್ದು, ಪಂದ್ಯ ಜಿದ್ದಾಜಿದ್ದಿಯಿಂದ ಕೂಡಿರುವುದಂತೂ ಖಚಿತ. ಅತ್ತ ಕೋಲ್ಕತ್ತಾದಲ್ಲಿ ಈಗಾಗಲೇ ಮಳೆ ಆರಂಭವಾಗಿದ್ದು, ಪಂದ್ಯದ ಮೇಲೆ ಮಳೆಯ ಪ್ರಭಾವವುಂಟಾಗುವ ಸಾಧ್ಯತೆ ಹೆಚ್ಚಿವೆ. ಒಂದುವೇಳೆ ಪಂದ್ಯಕ್ಕೆ ಮಳೆ ಅಡ್ಡಿ ಉಂಟಾಗಿ ಪಂದ್ಯವನ್ನು ಶುರು ಮಾಡಲು ಆಗದಿದ್ದರೆ ಸೂಪರ್ ಓವರ್ ನಡೆಸಲಾಗುವುದು. ಇನ್ನು ಮಳೆ ಸೂಪರ್ ಓವರ್ ನಡೆಸುವುದಕ್ಕೂ ಕೂಡ ಅವಕಾಶ ನೀಡದಿದ್ದರೆ ಅಂಕಪಟ್ಟಿಯಲ್ಲಿ ಲೀಗ್ ಹಂತದಲ್ಲಿ ಅತ್ಯಧಿಕ ಅಂಕ ಗಳಿಸಿರುವ ತಂಡವಾದ ಗುಜರಾತ್ ಟೈಟನ್ಸ್ ವಿಜೇತ ತಂಡ ಎಂದು ಪರಿಗಣಿಸಲಾಗುವುದು.
ಹೀಗೆ ಹಲವು ಆಯಾಮದಿಂದ ಕುತೂಹಲ ಹಾಗೂ ನಿರೀಕ್ಷೆಯನ್ನು ಹುಟ್ಟುಹಾಕಿರುವ ಈ ಪಂದ್ಯ ಯಾವುದೇ ಮಳೆಯ ಅಡ್ಡಿ ಇಲ್ಲದೇ ನಡೆದರೆ ಅಟಗಾರರು ವಿವಿಧ ಮೈಲಿಗಲ್ಲನ್ನು ನೆಡಲು ಸಜ್ಜಾಗಿದ್ದಾರೆ. ಹೀಗೆ ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರರು ನಿರ್ಮಿಸಬಹುದಾದ ವಿವಿಧ ಮೈಲಿಗಲ್ಲುಗಳ ವಿವರ ಈ ಕೆಳಕಂಡಂತಿದೆ..

ಈ ಮೈಲಿಗಲ್ಲುಗಳ ಮೇಲೆ ಸ್ಯಾಮ್ಸನ್ ಕಣ್ಣು
* ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ರಾಯಲ್ಸ್ ಪರ 3000 ರನ್ ಪೂರೈಸಲು 43 ರನ್‌ಗಳ ಅಂತರದಲ್ಲಿದ್ದಾರೆ. ಸ್ಯಾಮ್ಸನ್ ಈ ಮೈಲಿಗಲ್ಲನ್ನು ಮುಟ್ಟಿದ್ದರೆ ಅಜಿಂಕ್ಯ ರಹಾನೆ ನಂತರ ರಾಜಸ್ಥಾನ್ ರಾಯಲ್ಸ್ ಪರ 3000 ರನ್ ಬಾರಿಸಿದ ಎರಡನೇ ಬ್ಯಾಟ್ಸ್‌ಮನ್ ಆಗಲಿದ್ದಾರೆ.
* ಸಂಜು ಸ್ಯಾಮ್ಸನ್ ರಾಯಲ್ಸ್ ಪರ 250 ಬೌಂಡರಿಗಳನ್ನು ಪೂರೈಸಲು ಇನ್ನೂ 9 ಬೌಂಡರಿಗಳನ್ನು ಬಾರಿಸಬೇಕಾದ ಅಗತ್ಯವಿದೆ.
* ಐಪಿಎಲ್‌ನಲ್ಲಿ 3500 ರನ್‌ಗಳನ್ನು ತಲುಪಲು ಸಂಜು ಸ್ಯಾಮ್ಸನ್‌ಗೆ 58 ರನ್‌ಗಳ ಅಗತ್ಯವಿದೆ.

ಈ ಮೈಲಿಗಲ್ಲುಗಳ ಮೇಲೆ ಚಹಲ್ ಕಣ್ಣು
* ಆರ್‌ಆರ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ವಿಕೆಟ್ ಟೇಕರ್‌ಗಳ ಪಟ್ಟಿಯಲ್ಲಿ ಕ್ರಿಸ್ ಮೋರಿಸ್ ಮತ್ತು ಅಮಿತ್ ಸಿಂಗ್ ಅವರನ್ನು ಹಿಂದಿಕ್ಕಲು ಇನ್ನೂ 2 ವಿಕೆಟ್‌ಗಳ ಅಗತ್ಯವಿದೆ. ಚಹಲ್ 24 ಪಂದ್ಯಗಳಿಂದ 26 ವಿಕೆಟ್ ಪಡೆದರೆ, ಅಮಿತ್ ಮತ್ತು ಮೋರಿಸ್ ತಲಾ 28 ವಿಕೆಟ್ ಪಡೆದಿದ್ದಾರೆ.
* ಯುಜ್ವೇಂದ್ರ ಚಹಾಲ್‌ಗೆ ಐಪಿಎಲ್‌ನಲ್ಲಿ 3ನೇ ಅತಿ ಹೆಚ್ಚು ವಿಕೆಟ್ ಪಡೆದಿರುವ ಅಮಿತ್ ಮಿಶ್ರಾ ಅವರನ್ನು ಹಿಂದಿಕ್ಕಲು ಇನ್ನೂ 2 ವಿಕೆಟ್‌ಗಳ ಅಗತ್ಯವಿದೆ. ಚಹಾಲ್ ಈಗ 165 ವಿಕೆಟ್‌ಗಳನ್ನು ಹೊಂದಿದ್ದಾರೆ ಮತ್ತು ಮಿಶ್ರಾ 166 ವಿಕೆಟ್‌ಗಳನ್ನು ಹೊಂದಿದ್ದಾರೆ.

ಈ ಮೈಲಿಗಲ್ಲುಗಳನ್ನು ಮುಟ್ಟುತ್ತಾರಾ ಬಟ್ಲರ್?
* ಆರ್ ಆರ್ ಓಪನರ್ ಜೋಸ್ ಬಟ್ಲರ್ ಟಿ20ಯಲ್ಲಿ 8000 ರನ್ ತಲುಪಲು 36 ರನ್ ಅಗತ್ಯವಿದೆ.
* ಜೋಸ್ ಬಟ್ಲರ್‌ಗೆ ಟಿ ಟ್ವೆಂಟಿ ಪಂದ್ಯಗಳಲ್ಲಿ 350 ಸಿಕ್ಸರ್‌ಗಳ ಗಡಿ ತಲುಪಲು ಇನ್ನೂ 4 ಸಿಕ್ಸರ್‌ಗಳ ಅಗತ್ಯವಿದೆ.
* ಜೋಸ್ ಬಟ್ಲರ್‌ಗೆ ಟಿ ಟ್ವೆಂಟಿ ಪಂದ್ಯಗಳಲ್ಲಿ 700 ಬೌಂಡರಿಗಳ ಗಡಿಯನ್ನು ತಲುಪಲು ಇನ್ನೂ 5 ಬೌಂಡರಿಗಳ ಅಗತ್ಯವಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications