ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022: ಪ್ಲೇಆಫ್ ಪ್ರವೇಶಿಸಿದ ಮೊದಲ ತಂಡವಾಗಿ ಹೊರಹೊಮ್ಮಿದ ಗುಜರಾತ್ ಟೈಟನ್ಸ್

IPL 2022: Gujarat Titans enter playoff as 1st team of IPL 2022 season

ಐಪಿಎಲ್ 2022ರ ಆವೃತ್ತಿಯ ಪಂದ್ಯಗಳು ರೋಚಕ ಘಟ್ಟವನ್ನು ತಲುಪುತ್ತಿದೆ. ಪ್ರತಿ ಪಂದ್ಯಗಳು ಕೂಡ ನಿರ್ಣಾಯಕವಾಗುತ್ತಿದೆ. ಮುಂದಿನ ಹಂತಕ್ಕೆ ಅರ್ಹತೆ ಗಿಟ್ಟಿಸಿಕೊಳ್ಳಲು ಎಲ್ಲಾ ತಂಡಗಳು ಕೂಡ ತಮ್ಮ ಸರ್ವ ಪ್ರಯತ್ನಗಳನ್ನು ನಡೆಸುತ್ತಿದೆ. ಈ ಸಂದರ್ಭದಲ್ಲಿ ಈ ಬಾರಿಯ ಆವೃತ್ತಿಯಲ್ಲಿ ಮೊದಲ ಬಾರಿ ಕಣಕ್ಕಿಳಿದಿರುವ ಎರಡು ತಂಡಗಳ ಪೈಕಿ ಒಂದಾಗಿರುವ ಗುಜರಾತ್ ಟೈಟನ್ಸ್ ಚೊಚ್ಚಲ ಆವೃತ್ತಿಯಲ್ಲಿಯೇ ಅದ್ಭುತ ಪ್ರದರ್ಶನ ನೀಡಿ ಮಿಂಚಿದೆ. ಈ ಮೂಲಕ ಪ್ಲೇಆಫ್ ಹಂತದಲ್ಲಿ ಸ್ಥಾನವನ್ನು ಭದ್ರಪಡಿಸಿಕೊಂಡ ಮೊದಲ ತಂಡವಾಗಿದೆ ಜಿಟಿ.

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡ ಭರ್ಜರಿ ಪ್ರದರ್ಶನ ನೀಡಿ ಗೆಲುವು ಸಾಧಿಸಿತು. ಬ್ಯಾಟಿಂಗ್‌ನಲ್ಲಿ ದೊಡ್ಡ ಮೊತ್ತದ ಗುರಿಯನ್ನು ನಿಗದಿಪಡಿಸಲು ಜಿಟಿ ದಾಂಡಿಗರು ವಿಫಲವಾದರು ಕೂಡ ಬೌಲಿಂಗ್‌ನಲ್ಲಿ ಹಾರ್ದಿಕ್ ಪಾಂಡ್ಯ ಬಳಗ ಅಮೋಘ ಪ್ರದರ್ಶನ ನೀಡಿದೆ. ಈ ಮೂಲಕ ಮತ್ತೊಂದು ಗೆಲುವು ಸಾಧಿಸಿದೆ. ಹೀಗಾಗಿ ಪ್ಲೇಆಫ್‌ಗೆ ಪ್ರವೇಶ ಪಡೆದುಕೊಂಡಿದೆ.

ಸಾಧನೆಯ ಸಂಕಲ್ಪ: 9 ವರ್ಷಗಳ ನಂತರ ತವರಿಗೆ ಮರಳುತ್ತಿರುವ MI ಆಟಗಾರನ ರೋಚಕ ಕಥೆಸಾಧನೆಯ ಸಂಕಲ್ಪ: 9 ವರ್ಷಗಳ ನಂತರ ತವರಿಗೆ ಮರಳುತ್ತಿರುವ MI ಆಟಗಾರನ ರೋಚಕ ಕಥೆ

ಐಪಿಎಲ್‌ನಲ್ಲಿ ಚೊಚ್ಚಲ ಬಾರಿಗೆ ಕಣಕ್ಕಿಳಿದಿರುವ ಗುಜರಾತ್ ಟೈಟನ್ಸ್ ತಂಡ ಟೂರ್ನಿಗೆ ಆಗಮಿಸುವ ಸಂದರ್ಭದಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿದ್ದ ತಂಡವಾಗಿರಲಿಲ್ಲ. ದೊಡ್ಡ ಸ್ಟಾರ್ ಆಟಗಾರರು ಇಲ್ಲದ ಈ ತಂಡಕ್ಕೆ ನಾಯಕತ್ವದ ಅನುಭವವಿಲ್ಲದ ಹಾರ್ದಿಕ್ ಪಾಂಡ್ಯಗೆ ತಂಡವನ್ನು ಮುನ್ನಡೆಸುವ ಹೊಣೆ ಬಿದ್ದಿತ್ತು. ಈ ಜವಾಬ್ಧಾರಿಯನ್ನು ಅದ್ಭುತವಾಗಿ ನಿರ್ವಹಿಸಿರುವ ಹಾರ್ದಿಕ್ ಪಾಂಡ್ಯ ತನ್ನ ವೈಯಕ್ತಿಕ ಪ್ರದರ್ಶನದ ಜೊತೆಗೆ ನಾಯಕತ್ವದಲ್ಲಿಯೂ ಮಿಂಚುಹರಿಸಿದ್ದಾರೆ.

ಸತತ ಗೆಲುವಿನ ಓಟ: ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ತಂಡ ಉತ್ತಮ ಆರಂಭವನ್ನು ಪಡೆಯಿತು. ಚೊಚ್ಚಲ ಬಾರಿಗೆ ಕಣಕ್ಕಿಳಿದ ಮೊತ್ತೊಂದು ತಂಡವಾಗಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮೊದಲ ಪಂದ್ಯದಲ್ಲಿ ಎದುರಿಸುವ ಮೂಲಕ ಐಪಿಎಲ್ ಟೂರ್ನಿಯನ್ನು ಆರಂಭಿಸಿದ ಗುಜರಾತ್ ಟೈಟನ್ಸ್ ತಂಡ ಮೊದಲ ಪಂದ್ಯದಲ್ಲಿಯೇ ಅದ್ಭುತ ಪ್ರದರ್ಶನ ನೀಡಿ ಗೆಲುವಿನ ಆರಂಭವನ್ನು ಪಡೆದುಕೊಳ್ಳಲು ಯಶಸ್ವಿಯಾಯಿತು. ಈ ಗೆಲುವಿನ ಓಟವನ್ನು ಮುಂದುವರಿಸುವಲ್ಲಿಯೂ ತಂಡ ಯಶಸ್ವಿಯಾಯಿತು. ಟೂರ್ನಿಯ ಬಹುತೇಕ ಎಲ್ಲಾ ತಂಡಗಳನ್ನು ಮಣಿಸುವ ಮೂಲಕ ಎದುರಾಳಿಗಳಿಗೆ ಎಚ್ಚರಿಕೆಯನ್ನು ನೀಡುತ್ತಾ ಸಾಗಿತ್ತು. ಆದರೆ ಸತತ ಎರಡು ಪಂದ್ಯಗಳನ್ನು ಸೋಲುವ ಮೂಲಕ ಒಂದು ಹಂತದಲ್ಲಿ ಹಿನ್ನಡೆ ಅನುಭವಿಸಿದರೂ ಮತ್ತೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮಂಗಳವಾರ ಗೆಲ್ಲುವ ಮೂಲಕ ಗೆಲುವಿನ ಲಯಕ್ಕೆ ಮರಳುವಲ್ಲಿ ತಂಡ ಯಶಸ್ವಿಯಾಗಿದೆ.

ಅಂಕಪಟ್ಟಿಯಲ್ಲಿಯೂ ಸ್ಥಿರ: ಗುಜರಾತ್ ಟೈಟನ್ಸ್ ತಂಡ ಅಂಕಪಟ್ಟಿಯಲ್ಲಿಯೂ ಆರಂಭದಿಂದಲೇ ಸ್ಥಿರವಾಗಿ ಮೊದಲ ಎರಡು ಸ್ಥಾನಗಳಿಗಿಂತ ಕೆಳಕ್ಕಿಳಿದಿಲ್ಲ. ಈವರೆಗೆ ಒಟ್ಟು 12 ಪಂದ್ಯಗಳನ್ನು ಆಡಿರುವ ಗುಜರಾತ್ ಟೈಟನ್ಸ್ ತಂಡ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು 3 ಸೋಲು ಅನುಭವಿಸಿದೆ. ಈ ಮೂಲಕ 18 ಅಂಕಗಳನ್ನು ತನ್ನ ಖಾತೆಯಲ್ಲಿ ಹೊಂದಿದೆ.

IPL ಮುಗಿದ ಬಳಿಕ ಟೀಂ ಇಂಡಿಯಾ ಆಟಗಾರರಿಗೆ ವಿಶ್ರಾಂತಿಯೇ ಇಲ್ಲ: ಒಂದರ ಹಿಂದೆ ಮತ್ತೊಂದು ಸರಣಿIPL ಮುಗಿದ ಬಳಿಕ ಟೀಂ ಇಂಡಿಯಾ ಆಟಗಾರರಿಗೆ ವಿಶ್ರಾಂತಿಯೇ ಇಲ್ಲ: ಒಂದರ ಹಿಂದೆ ಮತ್ತೊಂದು ಸರಣಿ

ಗುಜರಾತ್ ಟೈಟನ್ಸ್ ಸ್ಕ್ವಾಟ್ ಹೀಗಿದೆ: ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ರಶೀದ್ ಖಾನ್, ಮೊಹಮ್ಮದ್ ಶಮಿ, ಲಾಕಿ ಫರ್ಗುಸನ್, ಅಭಿನವ್ ಸದಾರಂಗನಿ, ರಾಹುಲ್ ತೆವಾಟಿಯಾ, ನೂರ್ ಅಹ್ಮದ್, ಆರ್ ಸಾಯಿ ಕಿಶೋರ್, ಡೊಮಿನಿಕ್ ಡ್ರೇಕ್ಸ್, ಜಯಂತ್ ಯಾದವ್, ವಿಜಯ್ ಶಂಕರ್, ದರ್ಶನ್ ನಲ್ಕಂಡೆ, ಯಶ್ ದಯಾಳ್, ಅಲ್ಜಾರಿ ಜೋಸೆಫ್, ಪ್ರದೀಪ್ ಸಾಂಗ್ವಾನ್, ಡೇವಿಡ್ ಮಿಲ್ಲರ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಗುರುಕೀರತ್ ಸಿಂಗ್, ವರುಣ್ ಆರೋನ್, ಬಿ ಸಾಯಿ ಸುದರ್ಶನ್, ರಹಮಾನುಲ್ಲಾ ಗುರ್ಬಾಜ್

Story first published: Wednesday, May 11, 2022, 9:17 [IST]
Other articles published on May 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X