For Quick Alerts
ALLOW NOTIFICATIONS  
For Daily Alerts
 

GT vs SRH : ಅಗ್ರಸ್ಥಾನಕ್ಕಾಗಿ ನಡೆಯಲಿದೆ ಮಹಾ ಕದನ: GT ಗೆಲುವಿನ ಓಟಕ್ಕೆ ಮತ್ತೆ ಅಡ್ಡಿಯಾಗುತ್ತಾ SRH!

IPL 2022: Gujarat Titans face Sunrisers Hyderabad in a battle to reclaim the top spot

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲಸ್‌ ನಡುವಿನ ಪಂದ್ಉದ ಬಳಿಕ ಮತ್ತೆ ಅಂಕಪಟ್ಟಿಯಲ್ಲಿ ಬದಲಾವಣೆಯಾಗಿದೆ. ರಾಜಸ್ಥಾನ್ ರಾಯಲ್ಸ್ ತಂಡ 12 ಅಂಕಗಳೊಂದಿಗೆ ಅಗ್ರಸ್ಥಾನವನ್ನು ಅಲಂಕರಿಸಿದ್ದು ನೆಟ್‌ರನ್‌ರೇಟ್ ಆಧಾರದಲ್ಲಿ ಗುಜರಾತ್ ಟೈಟನ್ಸ್ ತಂಡ ಎರಡನೇ ಸ್ಥಾನಕ್ಕೆ ಕುಸಿದಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡ ಮೂರನೇ ಸ್ಥಾನದಲ್ಲಿದೆ. ಆದರೆ ಇಂದು ಮತ್ತೊಂದು ಮಹಾ ಕದನ ನಡೆಯಲಿದ್ದು ಈ ಪಂದ್ಯದಲ್ಲಿ ಗೆದ್ದ ತಂಡ ಅಗ್ರಸ್ಥಾನವನ್ನು ಪಡೆಯುವ ಸಾಧ್ಯತೆ ದಟ್ಟವಾಗಿದೆ.

ಗುಜರಾತ್ ಟೈಟನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಈ ಆವೃತ್ತಿಯ ಅತ್ಯಂತ ಯಶಸ್ವೀ ತಂಡಗಳಾಗಿದೆ. ಗುಜರಾತ್ ಟೈಟನ್ಸ್ ತಂಡ ಆರಂಭಿಕ ಹಂತದಿಂದಲೂ ಗೆಲುವಿನ ಮೇಲೆ ಗೆಲುವು ಸಾಧಿಸಿಕೊಂಡು ಬಂದಿದ್ದು ಏಕೈಕ ಸೋಲನ್ನು ಮಾತ್ರವೇ ಅನುಭವಿಸಿದೆ. ಇತ್ತ ಸನ್‌ರೈಸರ್ಸ್ ಹೈದರಾಬಾದ್ ತಂಡ ಆರಂಭಿಕ ಎರಡು ಪಂದ್ಯಗಳಲ್ಲಿ ಹೀನಾಯವಾಗಿ ಸೋಲು ಅನುಭವಿಸಿದ ಬಳಿಕ ಅದ್ಭುತ ರೀತಿಯಲ್ಲಿ ಕಮ್‌ಬ್ಯಾಕ್ ಮಾಡಿದೆ. ನಂತರ ಆಡಿದ 5 ಪಂದ್ಯಗಳಲ್ಲಿಯೂ ಭರ್ಜರಿ ಗೆಲುವು ಸಾಧಿಇಸಕೊಂಡು ಬಂದಿದ್ದು ತಂಡದ ಆತ್ಮವಿಶ್ವಾಸ ಹೆಚ್ಚಿದೆ.

ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ ಈ ಬಾರಿಯ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ತಂಡ ಏಕೈಕ ಸೋಲು ಅನುಭವಿಸಿರುವುದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧವೇ ಆಗಿದೆ. ಆ ಸೋಲಿನ ಬಳಿಕ ಮತ್ತೆ ಗೆಲುವಿನ ಹಾದಿ ಹಿಡಿದಿರುವ ಜಿಟಿ ಪಡೆಗೆ ಸನ್‌ರೈಸರ್ಸ್ ಹೈದರಾಬಾದ್ ಬಳಗ ಮತ್ತೆ ಅಡ್ಡಿಯಾಗಲಿದೆಯಾ ಎಂಬುದು ಕುತೂಹಲ ಮೂಡಿಸಿದೆ. ಜೊತೆಗೆ ಮೊದಲ ಮುಖಾಮುಖಿಯಲ್ಲಿ ಅನುಭವಿಸಿದ ಸೋಲಿಗೆ ಗುಜರಾತ್ ಟೈಟನ್ಸ್ ಬಳಗ ಸೇಡು ತೀರಿಸಿಕೊಳ್ಳಲಿದೆಯಾ ಎಂಬುದು ಕೂಡ ಈ ಸೆಣೆಸಾಟದ ಕುತೂಹಲ ಹೆಚ್ಚುವಂತೆ ಮಾಡಿದೆ.

ಸನ್‌ರೈಸರ್ಸ್ ಹೈದರಾಬಾದ್ ತಂಡದ ಬೌಲಿಂಗ್ ವಿಭಾಗದ ಪ್ರದರ್ಶನ ಅದ್ಭುತವಾಗಿದೆ. ಪ್ರತಿಭಾನ್ವಿತ ವೇಗದ ಪಡೆಯನ್ನು ಹೊಂದಿರುವ ಕಾರಣ ಎದುರಾಳಿ ತಂಡಗಳು ರನ್‌ಗಳಿಸಲು ಅಕ್ಷರಶಃ ಪರದಾಟವನ್ನು ನಡೆಸುತ್ತಿದೆ. ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಟಿ ನಟರಾಜನ್, ಮಾರ್ಕೋ ಜಾನ್ಸನ್ ಅವರಂತಾ ಬೌಲರ್‌ಗಳು ಎದುರಾಳಿ ದಾಂಡಿಗರನ್ನು ಸಂಪೂರ್ಣವಾಗಿ ಕಟ್ಟಿಹಾಕಲು ಯಶಸ್ವಿಯಾಗುತ್ತಿದೆ. ಆರ್‌ಸಿಬಿ ತಂಡದ ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು 68 ರನ್‌ಗಳಿಗೆ ಕಟ್ಟಿಹಾಕಿದ್ದು ಈ ಬೌಲಿಂಗ್ ವಿಭಾಗದ ಸಾಮರ್ಥ್ಯವನ್ನು ಸಾರಿ ಹೇಳುತ್ತಿದೆ. ಸನ್‌ರೈಸರ್ಸ್ ಹೈದರಾನಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ ತನ್ನ ಬೌಲರ್‌ಗಳನ್ನು ಅದ್ಭುತ ರೀತಿಯಲ್ಲಿ ಬಳಸಿಕೊಳ್ಳಲು ಯಶಸ್ವಿಯಾಗುತ್ತಿದ್ದಾರೆ.

IPL 2022: Gujarat Titans face Sunrisers Hyderabad in a battle to reclaim the top spot

ಇನ್ನು ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ತಂಡ ಈ ಟೂರ್ನಿಯಲ್ಲಿ ಗೆಲುವಿನ ಮೇಲೆ ಗೆಲುವು ಸಾಧಿಸಿಕೊಂಡು ಆತ್ಮವಿಸ್ವಾಸದಿಂದ ಬೀಗುತ್ತಿದೆ. ಆಡಿರುವ 7 ಪಂದ್ಯಗಳ ಪೈಕಿ 6 ಪಂದ್ಯಗಳಲ್ಲಿ ಗೆದ್ದಿದೆ ಗುಜರಾತ್ ಟೈಟನ್ಸ್. ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಗೆದ್ದರೆ ಪ್ಲೇಆಫ್ ಹಂತಕ್ಕೆ ಮತ್ತಷ್ಟು ಹತ್ತಿರವಾಗಲಿದೆ ಹಾರ್ದಿಕ್ ಪಡೆ.

ಗುಜರಾಥ್ ಟೈಟನ್ಸ್: ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ರಶೀದ್ ಖಾನ್, ಮೊಹಮ್ಮದ್ ಶಮಿ, ಲಾಕಿ ಫರ್ಗುಸನ್, ಅಭಿನವ್ ಸದಾರಂಗನಿ, ರಾಹುಲ್ ತೆವಾಟಿಯಾ, ನೂರ್ ಅಹ್ಮದ್, ಆರ್ ಸಾಯಿ ಕಿಶೋರ್, ಡೊಮಿನಿಕ್ ಡ್ರೇಕ್ಸ್, ಜಯಂತ್ ಯಾದವ್, ವಿಜಯ್ ಶಂಕರ್, ದರ್ಶನ್ ನಲ್ಕಂಡೆ, ಯಶ್ ದಯಾಳ್, ಅಲ್ಜಾರಿ ಜೋಸೆಫ್, ಪ್ರದೀಪ್ ಸಾಂಗ್ವಾನ್, ಡೇವಿಡ್ ಮಿಲ್ಲರ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಗುರುಕೀರತ್ ಸಿಂಗ್, ವರುಣ್ ಆರೋನ್, ಬಿ ಸಾಯಿ ಸುದರ್ಶನ್, ರಹಮಾನುಲ್ಲಾ ಗುರ್ಬಾಜ್

ಸನ್‌ರೈಸರ್ಸ್ ಹೈದರಾಬಾದ್: ಕೇನ್ ವಿಲಿಯಮ್ಸನ್ (ನಾಯಕ), ಅಬ್ದುಲ್ ಸಮದ್, ಉಮ್ರಾನ್ ಮಲಿಕ್, ವಾಷಿಂಗ್ಟನ್ ಸುಂದರ್, ನಿಕೋಲಸ್ ಪೂರನ್, ಟಿ ನಟರಾಜನ್, ಭುವನೇಶ್ವರ್ ಕುಮಾರ್, ಪ್ರಿಯಮ್ ಗಾರ್ಗ್, ರಾಹುಲ್ ತ್ರಿಪಾಠಿ, ಅಭಿಷೇಕ್ ಶರ್ಮಾ, ಕರಿಕ್ ತ್ಯಾಗಿ, ಶ್ರೇಯಸ್ ಗೋಪಾಲ್, ಜಗದೀಶ ಸುಚಿತ್, ಐಡೆನ್ ಮಾರ್ಕ್ರಾಮ್, ಮಾರ್ಕೊ ಜಾನ್ಸೆನ್, ರೊಮಾರಿಯೊ ಶೆಫರ್ಡ್, ಸೀನ್ ಅಬಾಟ್, ಆರ್ ಸಮರ್ಥ್, ಸೌರಭ್ ದುಬೆ, ಶಶಾಂಕ್ ಸಿಂಗ್, ವಿಷ್ಣು ವಿನೋದ್, ಗ್ಲೆನ್ ಫಿಲಿಪ್ಸ್, ಫಜಲ್ಹಕ್ ಫಾರೂಕಿ.

Story first published: Wednesday, April 27, 2022, 11:29 [IST]
Other articles published on Apr 27, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+