
ಟೀಂ ಇಂಡಿಯಾದ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಇಂದು 35ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ವಿಶ್ವದಾದ್ಯಂತ ಅವರ ಅಭಿಮಾನಿಗಳು, ಸಹ ಕ್ರಿಕೆಟಿಗರು, ಹಾಗೂ ಮಾಜಿ ಕ್ರಿಕೆಟಿಗರು ರೋಹಿತ್ ಶರ್ಮಾಗೆ ಜನ್ಮ ದಿನದ ಶುಭ ಕೋರಿದ್ದಾರೆ.
Koo AppRohit Sharma is 35 today. There is little doubt that he has been an absolute colossus over fhe last decade, scoring a heap of runs and doing so with class and panache. As India’s captain all formats, here’s hoping he has a spectacular year ahead! #HappyBirthdayRohit #RohitSharma #CricketOnKoo - Gaurav Kalra (@GK75) 30 Apr 2022
ಲಿಮಿಟೆಡ್ ಓವರ್ ಕ್ರಿಕೆಟ್‌ನಲ್ಲಿ ಭಾರತ ಕಂಡಂತಹ ಅಪ್ರತಿಮ ಬ್ಯಾಟರ್‌ಗಳಲ್ಲಿ ಒಬ್ಬರಾದ ರೋಹಿತ್ ಶರ್ಮಾ ಹೆಸರಿನಲ್ಲಿ ಹಲವು ದಾಖಲೆಗಳಿವೆ. ಏಕದಿನ ಕ್ರಿಕೆಟ್‌ನಲ್ಲಿ ಮೂರು ಬಾರಿ ದ್ವಿಶತಕ ಸಿಡಿಸಿರುವ ಏಕೈಕ ಬ್ಯಾಟ್ಸ್‌ಮನ್ ಇವರಾಗಿದ್ದಾರೆ.
ಟೀಂ ಇಂಡಿಯಾದ ಮೂರು ಫಾರ್ಮೆಟ್‌ನಲ್ಲಿ ನಾಯಕತ್ವದ ಚುಕ್ಕಾಣಿ ಹಿಡಿದಿರುವ ರೋಹಿತ್ ಶರ್ಮಾ ಐಪಿಎಲ್ 2022ರಲ್ಲಿ ಮುಂಬೈ ಇಂಡಿಯನ್ಸ್ ಪರ ಹಿನ್ನಡೆ ಅನುಭವಿಸಿದ್ದಾರೆ. ಆದರೂ ಸಹ ಆತ ಐದು ಬಾರಿಯ ತಂಡವನ್ನ ಚಾಂಪಿಯನ್ ಮಟ್ಟಕ್ಕೆ ಕೊಂಡೊಯ್ದಿದ್ದು, ಅವರ ನಾಯಕತ್ವದ ನಿಜವಾದ ಸಾಮರ್ಥ್ಯವನ್ನ ಎತ್ತಿ ತೋರಿಸುತ್ತದೆ.
ರೋಹಿತ್ ಶರ್ಮಾ ಮುಂದಿನ ಬಿಗ್ ಚಾಲೆಂಜ್ ಅಂದ್ರೆ, ಟಿ20 ವಿಶ್ವಕಪ್ ಆಗಿದೆ. ಆಸ್ಟ್ರೇಲಿಯಾದಲ್ಲಿ ಇದೇ ವರ್ಷ ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾವನ್ನ ಯಶಸ್ವಿಯಾಗಿ ಮುನ್ನಡೆಸುವ ಗುರಿ ಇದೆ.
ಸದ್ಯ ರೋಹಿತ್ ಶರ್ಮಾಗೆ ಜನ್ಮದಿನದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದ್ದು, ಟ್ವಿಟ್ಟರ್, ಫೇಸ್‌ಬುಕ್‌ನಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟಿಗನಿಗೆ ಶುಭ ಕೋರಿದ್ದಾರೆ.
ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಕೂಡ ಟ್ವೀಟ್ ಮಾಡಿದ್ದು 'ಹ್ಯಾಪಿ ಬರ್ತ್‌ಡೇ ಮಾಸ್ಟರ್ ಆಫ್ ಫುಲ್ ಶಾಟ್ ರೋಹಿತ್ ಶರ್ಮಾ' ಎಂದು ಟ್ವೀಟ್ ಮಾಡಿದೆ.
ರೋಹಿತ್ 2007 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ ಐಸಿಸಿ ಪುರುಷರ ವಿಶ್ವ ಟಿ20 ನಲ್ಲಿ ತಮ್ಮ ಅಂತರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಮಾಡಿದರು. ಜೊತೆಗೆ ಆರಂಭದಲ್ಲೇ ಚಾಂಪಿಯನ್ ಆಗಿ ಮನೆಗೆ ಮರಳಿದರು. ಅಂದಿನಿಂದ, ಅವರು ವೈಟ್-ಬಾಲ್ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠರಲ್ಲಿ ತಮ್ಮ ಸ್ಥಾನವನ್ನು ಸ್ಥಿರವಾಗಿ ಭದ್ರಪಡಿಸಿಕೊಂಡಿದ್ದಾರೆ. 227 ಏಕದಿನ ಪಂದ್ಯಗಳನ್ನಾಡಿದ್ದು, ಅವರು 29 ಶತಕಗಳು ಮತ್ತು 43 ಅರ್ಧ ಶತಕಗಳನ್ನು ಒಳಗೊಂಡಂತೆ 9205 ರನ್ ಗಳಿಸಿದ್ದಾರೆ. ಅವರು ಮೂರು ದ್ವಿಶತಕಗಳನ್ನು ಸಹ ಹೊಡೆದಿದ್ದಾರೆ.
111 ಟಿ20 ಪಂದ್ಯಗಳಲ್ಲಿ ರೋಹಿತ್ ನಾಲ್ಕು ಶತಕ ಮತ್ತು 22 ಅರ್ಧಶತಕ ಸೇರಿದಂತೆ 2864 ರನ್ ಗಳಿಸಿದ್ದಾರೆ. ಮತ್ತು 38 ಟೆಸ್ಟ್‌ಗಳಲ್ಲಿ, ಆರಂಭಿಕ ಆಟಗಾರ 7 ಶತಕ ಮತ್ತು 12 ಅರ್ಧ ಶತಕ ಸೇರಿದಂತೆ 2615 ರನ್ ಗಳಿಸಿದ್ದಾರೆ.
35ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರೋಹಿತ್ ಶರ್ಮಾಗೆ ಪತ್ನಿ ರಿತಿಕಾ ಸಜ್ದೆ ಸೇರಿದಂತೆ ಅನೇಕ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ.