Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2022: ಸಾರ್ವಕಾಲಿಕ ಶ್ರೇಷ್ಠ ಐಪಿಎಲ್‌ 11 ಆಟಗಾರರನ್ನ ಹೆಸರಿಸಿದ ಹರ್ಭಜನ್ ಸಿಂಗ್

Harbhajan singh

ಭಾರತದ ಮಾಜಿ ಕ್ರಿಕೆಟಿಗ, ಟರ್ಬನೇಟರ್ ಖ್ಯಾತಿಯ ಹರ್ಭಜನ್ ಸಿಂಗ್ ಐಪಿಎಲ್‌ನ ಸಾರ್ವಕಾಲಿಕ ಪ್ಲೇಯಿಂಗ್ ಇಲೆವೆನ್ ತಂಡವನ್ನ ಹೆಸರಿಸಿದ್ದು, ಎಂ.ಎಸ್‌ ಧೋನಿಗೆ ನಾಯಕತ್ವ ಪಟ್ಟ ನೀಡಿದ್ದಾರೆ.

ಐಪಿಎಲ್‌ನ ಲೆಜೆಂಡ್‌ಗಳಲ್ಲಿ ಒಬ್ಬರಾದ ಹರ್ಭಜನ್ ಹಲವು ಸೀಸನ್‌ಗಳಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದರು. 2008ರಿಂದ 2017ರವರೆಗೆ ಮುಂಬೈ ಜೆರ್ಸಿ ತೊಟ್ಟರು, ನಂತರದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಪರ ಆಡಿದ್ದಾರೆ.

ಐಪಿಎಲ್‌ನಲ್ಲಿ 163 ಪಂದ್ಯಗಳಲ್ಲಿ 150 ವಿಕೆಟ್ ಬೇಟೆಯಾಡಿರುವ ಹರ್ಭಜನ್ ಸಿಂಗ್ 7.07 ಎಕಾನಮಿ ರೇಟ್ ಹೊಂದಿದ್ದಾರೆ. ಐಪಿಎಲ್‌ನ ಟಾಪ್ ವಿಕೆಟ್ ಪಡೆದವರಲ್ಲಿ ಒಬ್ಬರಾದ ಭಜ್ಜಿ ಸ್ಪೋರ್ಟ್ಸ್‌ಕ್ರೀಡಾಗೆ ನೀಡಿದ ಸಂದರ್ಶನದಲ್ಲಿ ಸಾರ್ವಕಾಲಿಕ ಶ್ರೇಷ್ಠ ಪ್ಲೇಯಿಂಗ್‌ ಇಲೆವೆನ್ ಹೆಸರಿಸಿದ್ದಾರೆ.

ಹರ್ಭಜನ್ ಸಿಂಗ್ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ಪ್ಲೇಯಿಂಗ್ 11
ಹರ್ಭಜನ್ ಸಿಂಗ್ ತಂಡದಲ್ಲಿ ಧೋನಿ ನಾಯಕರಾಗಿದ್ದು, ಕ್ರಿಸ್‌ಗೇಲ್, ರೋಹಿತ್ ಶರ್ಮಾ ಓಪನಿಂಗ್ ಬ್ಯಾಟರ್ ಆಗಿ ಕಣಕ್ಕಿಳಿಯುತ್ತಾರೆ. ಮುಂಬೈ ಇಂಡಿಯನ್ಸ್‌ನ ನಾಲ್ಕರು ಆಟಗಾರರಿಗೆ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಸ್ಥಾನ ನೀಡಿದ್ದಾರೆ. ಆರ್‌ಸಿಬಿಯ ಇಬ್ಬರು ಆಟಗಾರರು ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ನ ಇಬ್ಬರು ಆಟಗಾರರು ಪ್ಲೇಯಿಂಗ್‌ ಇಲೆವೆನ್‌ನಲ್ಲಿದ್ದಾರೆ.

Playing 11: ಕ್ರಿಸ್ ಗೇಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶೇನ್ ವ್ಯಾಟ್ಸನ್, ಎಬಿ ಡಿವಿಲಿಯರ್ಸ್, ಎಂಎಸ್ ಧೋನಿ (ನಾಯಕ ಮತ್ತು ವಿಕೆಟ್ ಕೀಪರ್‌) ರವೀಂದ್ರ ಜಡೇಜಾ, ಕಿರಾನ್ ಪೊಲಾರ್ಡ್, ಸುನಿಲ್ ನರೈನ್, ಲಸಿತ್ ಮಾಲಿಂಗ, ಜಸ್ಪ್ರೀತ್ ಬುಮ್ರಾ

Story first published: Wednesday, April 27, 2022, 9:41 [IST]
Other articles published on Apr 27, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+