ಹಾರ್ದಿಕ್ ಪಾಂಡ್ಯ ಚೆನ್ನಾಗಿ ಬೌಲಿಂಗ್ ಮಾಡಿದ್ರೆ, ವಿಶ್ವಕಪ್‌ಗೆ ನೇರವಾಗಿ ಆಯ್ಕೆ: ಸುನಿಲ್ ಗವಾಸ್ಕರ್

ಐಪಿಎಲ್ 15ನೇ ಸೀಸನ್ ಹಲವು ಆಟಗಾರರಿಗೆ ಕೇವಲ ಟಿ20 ಲೀಗ್‌ನ ಸ್ಪರ್ಧೆಯಷ್ಟೇ ಆಗಿರದೆ, ತಮ್ಮ ಭವಿಷ್ಯದ ಟೀಂ ಇಂಡಿಯಾ ಸ್ಥಾನದ ಹೋರಾಟವಾಗಿದೆ. ಅನೇಕ ಆಟಗಾರರು ತಮ್ಮ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಲು ಈ ಸಮಯದಲ್ಲಿ ಮಿಂಚಬೇಕಾಗಿದೆ.
ಈ ಆಟಗಾರರ ಪಟ್ಟಿಯಲ್ಲಿ ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಒಬ್ಬರು. ಅವರು 2021ರ ಟಿ 20 ವಿಶ್ವಕಪ್‌ನಲ್ಲಿ ಭಾರತೀಯ ತಂಡದ ಭಾಗವಾಗಿದ್ದರು. ಆದರೆ ಕಳಪೆ ಫಾರ್ಮ್‌ನಿಂದ ತಂಡದಿಂದ ಕೈಬಿಡಲಾಯಿತು.

ಗಾಯಗೊಂಡು ಫಾರ್ಮ್ ಕಳೆದುಕೊಂಡ ಹಾರ್ದಿಕ್
ಹಾರ್ದಿಕ್‌ಗೆ ಸತತ ಗಾಯಗಳಾಗಿದ್ದು ಫಾರ್ಮ್ ಕಳೆದುಕೊಂಡಿದ್ದರು. ಈ ಬಾರಿಯ ಐಪಿಎಲ್ ನಲ್ಲಿ ಹಾರ್ದಿಕ್ ಮಿಂಚಿದ್ರೆ ಮಾತ್ರ ಭಾರತ ತಂಡಕ್ಕೆ ಮರಳಲಿದ್ದಾರೆ ಎಂದು ಆಯ್ಕೆಗಾರರು ನಿರ್ಧರಿಸಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಹಾರ್ದಿಕ್ ಬೌಲಿಂಗ್ ಮಾಡಿದ್ದರು. ಬಹಳ ಸಮಯದ ವಿರಾಮದ ನಂತರ ಅವರು ಬೌಲಿಂಗ್ ಮಾಡಲು ಪ್ರಾರಂಭಿಸಿದ್ದು, ನಾಲ್ಕು ಓವರ್‌ಗಳನ್ನ ಪೂರ್ಣಗೊಳಿಸಿದರು.

ಅಕ್ಟೋಬರ್‌ನಲ್ಲಿ ಕಾಂಗರೂ ನಾಡಲ್ಲಿ ಟಿ20 ವಿಶ್ವಕಪ್
ಇದೇ ವರ್ಷ ಅಕ್ಟೋಬರ್‌ನಲ್ಲಿ ಕಾಂಗರೂ ನಾಡಿನಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಹಾರ್ದಿಕ್ ಭಾರತ ತಂಡಕ್ಕೆ ಸೇರ್ಪಡೆಯಾಗುತ್ತಾರೆಯೇ ಎಂದು ಎಲ್ಲರೂ ಆಶ್ಚರ್ಯ ಪಡುತ್ತಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಹಾರ್ದಿಕ್ ಸ್ಥಾನದ ಬಗ್ಗೆ ಯಾವುದೇ ಸಂದೇಹವಿಲ್ಲ ಎಂದು ಗವಾಸ್ಕರ್ ಹೇಳಿದ್ದಾರೆ ಅಲ್ಲದೆ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಅವರು ಸ್ವಾಭಾವಿಕ ಸೇರ್ಪಡೆಯಾಗಿದ್ದಾರೆ ಎಂದು ಹೇಳಿದ್ದಾರೆ.

ಹಾರ್ದಿಕ್ ಉತ್ತಮವಾಗಿ ಬೌಲಿಂಗ್ ಮಾಡಬೇಕಿದೆ
ಹಾರ್ದಿಕ್ ಅವರು ಎಷ್ಟು ಓವರ್ ಬೌಲ್ ಮಾಡಬಲ್ಲರು, ಹೇಗೆ ಬ್ಯಾಟ್ ಮಾಡುತ್ತಾರೆ ಎಂಬುದನ್ನು ಆಯ್ಕೆ ಸಮಿತಿ ಗಮನಿಸುತ್ತಿದ್ದು, ಇದನ್ನೇ ಕ್ರಿಕೆಟ್ ಜಗತ್ತು ನೋಡುತ್ತಿದೆ. ಅವರು ಬೌಲಿಂಗ್ ಮಾಡಲು ಪ್ರಾರಂಭಿಸಿದ್ದು, ಉತ್ತಮ ರೀತಿಯಲ್ಲಿ ಬೌಲಿಂಗ್ ಮಾಡಿದ್ದಾರೆ. ಉತ್ತಮವಾಗಿ ಬ್ಯಾಟಿಂಗ್ ಕೂಡ ಮಾಡಿದರು. ಹೀಗಾಗಿ ಟಿ20 ವಿಶ್ವಕಪ್‌ಗೆ ಹಾರ್ದಿಕ್ ಸಹಜವಾಗಿಯೇ ಫಿಟ್ ಆಗಲಿದ್ದಾರೆ ಎಂದು ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.

ಹಾರ್ದಿಕ್‌ಗೆ ಪಂದ್ಯದ ದಿಕ್ಕು ಬದಲಾಯಿಸುವ ಸಾಮರ್ಥ್ಯವಿದೆ
ಹಾರ್ದಿಕ್ ಭಾರತದ ಉತ್ತಮ ಫಿನಿಶರ್ ಆಗಿದ್ದು, ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಪಂದ್ಯದ ಫಲಿತಾಂಶವನ್ನು ತಾವಾಗಿಯೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಇತ್ತೀಚೆಗೆ ಅದು ಕೈ ತಪ್ಪಿ ಭಾರತ ಹೊಸ ಫಿನಿಶರ್‌ಗಾಗಿ ಹುಡುಕಾಟ ಆರಂಭಿಸಿದೆ. ಆದರೆ ಹಾರ್ದಿಕ್ 15 ನೇ ಸೀಸನ್ ಉತ್ತಮ ಆರಂಭವನ್ನು ಪಡೆದಿದ್ದಾರೆ. ನಾಯಕನಾಗಿ ಅವರು ತೆಗೆದುಕೊಂಡ ನಿರ್ಧಾರಗಳೂ ಅತ್ಯುತ್ತಮವಾಗಿದ್ದವು. ಒಂದು ವೇಳೆ ಹಾರ್ದಿಕ್ ಋತುವಿನ ಅಂತ್ಯದಲ್ಲಿ ಅದೇ ಶ್ರೇಷ್ಠತೆಯನ್ನು ಪ್ರದರ್ಶಿಸಿದರೆ, ಅವರು ಖಂಡಿತವಾಗಿಯೂ ವಿಶ್ವಕಪ್‌ನಲ್ಲಿ ಭಾರತದ ಪ್ಲೇಯಿಂಗ್ 11 ರಲ್ಲಿ ಆಡುವರು. ಹಾರ್ದಿಕ್ ಪಾಂಡ್ಯ ಎಕ್ಸ್ ಫ್ಯಾಕ್ಟರ್ ಸ್ಟಾರ್‌ಗಳಲ್ಲಿ ಒಬ್ಬರಾಗಿದ್ದಾರೆ.

ಟಿ20 ವಿಶ್ವಕಪ್‌ಗೆ ರೋಹಿತ್ ಪಡೆ ತಯಾರಿ
ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತವು ಆಸ್ಟ್ರೇಲಿಯಾದ ಟಿ20 ವಿಶ್ವಕಪ್‌ಗೆ ತಯಾರಿ ನಡೆಸುತ್ತಿದೆ. ಹಾರ್ದಿಕ್ ಅನುಪಸ್ಥಿತಿಯಲ್ಲಿ ಭಾರತವು ವೆಂಕಟೇಶ್ ಅಯ್ಯರ್ ಅವರನ್ನು ಫಿನಿಶರ್ ಪಾತ್ರಕ್ಕೆ ಪರಿಗಣಿಸಿತ್ತು. ಎಡಗೈ ಮಧ್ಯಮ ವೇಗಿ ಆಲ್ ರೌಂಡರ್ ವೆಂಕಟೇಶ್ ಕೆಕೆಆರ್ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಅವರು ಭಾರತ ತಂಡದೊಂದಿಗೆ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದ್ರೆ ಹಾರ್ದಿಕ್ ಅನುಪಸ್ಥಿತಿಯನ್ನು ಸರಿದೂಗಿಸಲು ಸಾಧ್ಯವಾಗಲಿಲ್ಲ. ಹಾರ್ದಿಕ್ ಅವರಂತಹ ಆಟಗಾರ ನಿಮ್ಮೊಂದಿಗಿರುವುದು ಯಾವುದೇ ತಂಡಕ್ಕೆ ದೊಡ್ಡ ಶಕ್ತಿ ನೀಡುತ್ತದೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications