Harsha Bhogle : ಲೈವ್‌ನಲ್ಲಿ ಕಿಡ್ನಾಪ್ ಆದಂತೆ ನಾಟಕವಾಡಿದ್ದ ಖ್ಯಾತ ಕ್ರಿಕೆಟ್ ವಿಶ್ಲೇಷಕ ಹರ್ಷ ಬೋಗ್ಲೆ ಕ್ಷಮೆಯಾಚನೆ

ಖ್ಯಾತ ವೀಕ್ಷಕ ವಿವರಣೆಗಾರ ಹರ್ಷ ಬೋಗ್ಲೆ ಏನೋ ಮಾಡಲು ಹೋಗಿ, ಮತ್ತೇನೊ ಆಗಿ ಕ್ಷಮೆಯಾಚಿಸುವ ಪ್ರಸಂಗ ನಡೆದಿದೆ. ಐಪಿಎಲ್ ಕುರಿತಾಗಿ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ನೀಡುತ್ತಿದ್ದ ಹರ್ಷ ಬೋಗ್ಲೆ ಕಿಡ್ನಾಪ್ ಆದಂತೆ ನಾಟಕವಾಡಿ ಟೀಕೆಗೆ ಗುರಿಯಾಗಿದ್ದಾರೆ.
'ವಾಯ್ಸ್ ಆಫ್ ಕ್ರಿಕೆಟ್' ಖ್ಯಾತಿಯ ಹರ್ಷ ಬೋಗ್ಲೆ ಇನ್‌ಸ್ಟಾಗ್ರಾಮ್‌ನಲ್ಲಿ ಕಿಡ್ನಾಪ್ ಆದಂತೆ ಮಾಡಿದ ನಾಟಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಆದ್ರೆ ಈ ಕುರಿತು ವಿವರಣೆ ನೀಡಿರುವ ಬೋಗ್ಲೆ ಇದು ಇಷ್ಟರ ಮಟ್ಟಿಗೆ ವೈರಲ್ ಆಗುತ್ತದೆ ಎಂದು ತಿಳಿದಿರಲಿಲ್ಲ ಎಂದಿದ್ದಾರೆ.

ಕ್ರಿಕೆಟ್ ಸ್ಪೋರ್ಟ್ಸ್‌ವಾಕ್‌ನಲ್ಲಿ ಲೈವ್
ಮಾರ್ಚ್ 24ರಂದು ಗುರುವಾರ ಹರ್ಷ ಬೋಗ್ಲೆ ಇನ್‌ಸ್ಟಾಗ್ರಾಮ್ ಅಕೌಂಟ್ ಕ್ರಿಕೆಟ್ ಸ್ಪೋರ್ಟ್ಸ್‌ವಾಕ್‌ನಲ್ಲಿ ಐಪಿಎಲ್ 2022ರ ಕುರಿತು ಮಾತನಾಡುತ್ತಿದ್ದರು. ಇದೇ ವೇಳೆಯಲ್ಲಿ ಹರ್ಷ ಬೋಗ್ಲೆ ಮೊಬೈಲ್ ಕೆಳಗೆ ಬಿದ್ದಿತು. ನಂತರದಲ್ಲೇ ಹರ್ಷ ಬೋಗ್ಲೆ ಧ್ವನಿ ಅಷ್ಟೇ ಕೇಳಿಬಂದಿತು. ಏನಾಯಿತು? ಯಾರು ನೀನು? ಎಲ್ಲಿಂದ ಬಂದೆ? ಎಂದು ಗಾಬರಿಯಲ್ಲಿ ಹರ್ಷ ಬೋಗ್ಲೆ ಮಾತನಾಡಿದ್ರು.
ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್
ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಹರ್ಷ ಬೋಗ್ಲೆ ಕಿಡ್ನಾಪ್ ಸ್ಟಂಟ್, ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಸಾಕಷ್ಟು ವೈರಲ್ ಆಗಿದೆ. ಹರ್ಷ ಬೋಗ್ಲೆಗೆ ಏನಾಗಿದೆ? ನಿಜಕ್ಕೂ ಅವರದ್ದು ಕಿಡ್ನಾಪ್ ಆಗಿದ್ಯಾ? ಹರ್ಷ ಬೋಗ್ಲೆ ಡ್ರಾಮಾ ಮಾಡ್ತಿದ್ದಾರ? ಎಂಬೆಲ್ಲಾ ಪ್ರಶ್ನೆಗಳ ಮೂಲಕ ವೀಡಿಯೋವನ್ನ ಅಭಿಮಾನಿಗಳು ಶೇರ್ ಮಾಡಿದ್ದಾರೆ.
ಅದು ಕೇವಲ ಪ್ರೊಮೊ ಅಷ್ಟೇ ಎಂದ ಹರ್ಷ ಬೋಗ್ಲೆ ಪತ್ನಿ
ಫೋಕ್ಸ್, ಹರ್ಷ ಬೋಗ್ಲೆಗೆ ಏನು ಆಗಿಲ್ಲ, ಅದು ಕೇವಲ ಪ್ರೊಮೊ ಆಗಿದ್ದು, ತುಂಬಾ ವೈರಲ್ ಆಗಿದೆ. ದುರದೃಷ್ಟವಶಾತ್ ಎಲ್ಲರೂ ಗಾಬರಿಯಾಗಿದ್ದಾರೆ. ನಿಮ್ಮ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದಗಳು'' ಎಂದು ಹರ್ಷ ಬೋಗ್ಲೆ ಪತ್ನಿ ಅನಿತಾ ಬೋಗ್ಲೆ ಟ್ವೀಟ್ ಮಾಡಿದ್ದಾರೆ.

ಮಾಡಿದ ತಪ್ಪಿಗೆ ಕ್ಷಮೆ ಕೇಳಿದ ಹರ್ಷ ಬೋಗ್ಲೆ
ಈ ಘಟನೆ ನಡೆದ ಬಳಿಕ ವೀಡಿಯೋ ಆಗುವ ಪರಿ ಕಂಡು ಹರ್ಷ ಬೋಗ್ಲೆ ಸಾರ್ವಜನಿಕವಾಗಿ ಟ್ವಿಟ್ಟರ್‌ನಲ್ಲಿ ಕ್ಷಮೆಯಾಚಿಸಿದ್ದಾರೆ.
"ನಾನು ಚೆನ್ನಾಗಿದ್ದೇನೆ. ನಿಮ್ಮಲ್ಲಿ ಬಹಳಷ್ಟು ಮಂದಿ ಚಿಂತೆಗೀಡಾಗಿದ್ದಕ್ಕೆ ಕ್ಷಮಿಸಿ. ನಿಮ್ಮ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದಗಳು. ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ವೈರಲ್ ಆಯಿತು. ಅದೂ ಒಂದು ಕಲಿಕೆಯೇ. ಇದು ಬೇರೆ ಯಾವುದೋ ದಾರಿಗೆ ಕಾರಣವಾಗಿತ್ತು. ಕ್ಷಮಿಸಿ. ಮತ್ತು ಚೀರ್ಸ್" ಎಂದು ಅವರು ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ.
ಹೀಗೆ ಹರ್ಷ ಬೋಗ್ಲೆ ಏನೋ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications