ಐಪಿಎಲ್ 2022: ಮೆಗಾ ಹರಾಜಿಗೂ ಮುನ್ನ ನೀವು ತಿಳಿದಿರಲೇಬೇಕಾದ ಪ್ರಮುಖ ಮಾಹಿತಿಗಳು ಇಲ್ಲಿದೆ!

ಐಪಿಎಲ್ 15ನೇ ಆವೃತ್ತಿಗೆ ಮುನ್ನ ನಡೆಯಲಿರುವ ಮಹಾ ಹರಾಜು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಐಪಿಎಲ್ ಅಭಿಮಾನಿಗಳು ಈಗ ಯಾವ ಆಟಗಾರರನ್ನು ಯಾವ ತಂಡ ಖರೀದಿಸಬಹುದು ಎಂಬ ಕಾತುರತೆಯಲ್ಲಿದ್ದರೆ ಫ್ರಾಂಚೈಸಿಗಳು ಯಾವ ಆಟಗಾರರನ್ನು ಎಷ್ಟು ಮೊತ್ತಕ್ಕೆ ಕೊಂಡರೆ ಉತ್ತಮ ಎಂಬ ಲಾಭ ನಷ್ಟದ ಲೆಕ್ಕಾಚಾರದಲ್ಲಿವೆ. ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ಈ ಹರಾಜು ಪ್ರಕ್ರಿಯೆ ನಡೆಯಲಿದ್ದು ಎರಡು ಹೊಸ ತಂಡಗಳ ಸಹಿತ ಒಟ್ಟು 10 ಫ್ರಾಂಚೈಸಿಗಳು ಈ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲಿದೆ.
ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಎನಿಸಿರುವ ಐಪಿಎಲ್ ಜಗತ್ತಿನಾದ್ಯಂತ ಇರುವ ಕ್ರಿಕೆಟ್ ಅಭಿಮಾನಿಗಳಿಗೆ ಸಾಕಷ್ಟು ಮನರಂಜನೆಯನ್ನು ನೀಡುತ್ತಿದೆ. ಈ ಮನರಂಜನೆಯ ತೀವ್ರತೆಯನ್ನು ಹೆಚ್ಚಿಸಲು ಬಿಸಿಸಿಐ ಈ ಬಾರಿ ನಿರ್ಧರಿಸಿದ್ದು ಆ ಕಾರಣದಿಂದಾಗಿ 2011ರ ಐಪಿಎಲ್ ಆವೃತ್ತಿಯ ಬಳಿಕ ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ 10 ತಮಡಗಳು ಸೆಣೆಸಾಟವನ್ನು ನಡೆಸುತ್ತಿದೆ.
ಈ ರೋಮಾಂಚನಕಾರಿ ಟೂರ್ನಿಯ ಹರಾಜು ಪ್ರಕ್ರಿಯೆಯ ಕೆಲ ಮಹತ್ವದ ಮಾಹಿತಿಗಳು ಇಲ್ಲಿದೆ.

ಐಪಿಎಲ್ ಹರಾಜು ಎಲ್ಲಿ ಮತ್ತು ಯಾವಾಗ?
ಐಪಿಎಲ್ ಮೆಗಾ ಹರಾಜು ಎರಡು ದಿನಗಳ ಕಾರ್ಯಕ್ರಮವಾಗಿದ್ದು ಇದು ಫೆಬ್ರವರಿ 12 ಹಾಗೂ 13ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಕ್ರಿಕ್ ಇನ್ಫೋ ಮಾಹಿತಿಯ ಪ್ರಕಾರ ಈ ಹರಾಜು ಎರಡು ದಿನವು ಕೂಡ ಮಧ್ಯಾಹ್ನ 12 ಗಂಟೆಗೆ ಆರಂಭವಾಗಲಿದೆ.

ಮೆಗಾ ಹರಾಜಿನ ನೆರಪ್ರಸಾರದ ಮಾಹಿತಿ?
ಐಪಿಎಲ್ 2022ರ ನೇರ ಪ್ರಸಾರದ ಹಕ್ಕು ಕೂಡ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿಯೇ ಇದೆ. ಹಾಗಾಗಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಭಾರತದಲ್ಲಿ ಐಪಿಎಲ್ ಬಿಡ್ಡಿಂಗ್‌ನ ನೇರಪ್ರಸಾರವನ್ನು ಕೂಡ ಪ್ರಸಾರಚ ಮಾಡಲಿದೆ. ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿಯೂ ಅಭಿಮಾನಿಗಳು ಈ ಹರಾಜು ಪ್ರಕ್ರಿಯೆಯನ್ನು ವೀಕ್ಷಿಸಲು ಅವಕಾಶವಿದೆ.

ಹರಾಜಿನಲ್ಲಿ ಭಾಗಿಯಾಗಲಿರುವ ಆಟಗಾರರೆಷ್ಟು?
ಈ ಬಾರಿಯ ಐಪಿಎಲ್ ಹರಾಜಿಗಾಗಿ ಒಟ್ಟು ವಿಶ್ವಾದ್ಯಂತ 1214 ಆಟಗಾರರು ಹೆಸರು ನೊಂದಾಯಿಸಿದ್ದರು. ಇದರಲ್ಲಿ 896 ಭಾರತೀಯ ಆಟಗಾರರಾಗಿದ್ದರೆ 318 ವಿದೇಶಿ ಆಟಗಾರರು ಹೆಸರು ನೊಂದಾಯಿಸಿದ್ದರು. ಈ ಪಟ್ಟಿಯನ್ನು ಬಿಸಿಸಿಐ ಪರಿಷ್ಕರಣೆ ಮಾಡಿದ್ದು ಇದರಲ್ಲಿ ಕೇವಲ 590 ಆಟಗಾರರನ್ನು ಮಾತ್ರವೇ ಹರಾಜು ಸುತ್ತಿಗೆ ಅಂತಿಮಗೊಳಿಸಿದೆ. ಇದರಲ್ಲಿ 370 ಭಾರತೀಯ ಆಟಗಾರರಾಗಿದ್ದರೆ 220 ವಿದೇಶಿ ಆಟಗಾರರಾಗಿದ್ದಾರೆ.

ರೀಟೆನ್ಶನ್ ಹಾಗೂ ಡ್ರಾಫ್ಟ್ ಆಯ್ಕೆಯ ನಿಯಮಗಳು?
ಮೆಗಾ ಹರಾಜಿಗೂ ಮುನ್ನ ಈಗಾಗಲೇ ಇರುವ 8 ತಂಡಗಳಿಗೆ ತನ್ನಲ್ಲಿರುವ ಆಟಗಾರರ ಪೈಕಿ ಗರಿಷ್ಠ 4 ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ನೀಡಲಾಗಿತ್ತು. ಇದರ ಪೈಕಿ ಕೇವಲ ಓರ್ವ ಆಟಗಾರನನ್ನು ಮಾತ್ರವೇ ಫ್ರಾಂಚೈಸಿಗಳು ಉಳಿಸಿಕೊಳ್ಳಬಹುದಾಗಿತ್ತು. ಈ ನಿಯಮದ ಪ್ರಕಾರ ಕೆಲ ತಂಡಗಳು ಗರಿಷ್ಠ 4 ಆಟಗಾರರನ್ನು ರೀಟೈನ್ ಮಾಡಿಕೊಂಡಿದ್ದರೆ ಪಂಜಾಬ್ ಕಿಂಗ್ಸ್ ಮಾತ್ರ 2 ಆಟಗಾರರನ್ನು ಮಾತ್ರವೇ ರೀಟೈನ್ ಮಾಡಿಕೊಂಡಿತ್ತು. ಇನ್ನು ಹೊಸದಾಗಿ ಸೇರ್ಪಡೆಯಾಗಿರುವ ಲಕ್ನೋ ಹಾಗೂ ಅಹಮದಾಬಾದ್ ತಂಡಗಳಿಗೆ ಹರಾಜು ಪಟ್ಟಿಗೆ ಬಿಡುಗಡೆಯಾಗಿರುವ ಆಟಗಾರರ ಪೈಕಿ ತಲಾ ಮೂವರನ್ನು ಆಯ್ಕೆ ಮಾಡುವ ಅವಕಾಶವಿತ್ತು. ಎರಡು ತಂಡಗಳು ಕೂಡ ತಮ್ಮ ಆಯ್ಕೆಯ ಮೂವರು ಆಟಗಾರರನ್ನು ಅಂತಿಮಗೊಳಿಸಿದೆ.

ಫ್ರಾಂಚೈಸಿಗಳಲ್ಲಿ ಉಳಿದುಕೊಂಡಿರುವ ಪರ್ಸ್ ಮೊತ್ತ?
ಈ ಬಾರಿಯ ಹರಾಜಿಗೆ ಒಟ್ಟು 90 ಕೋಟಿ ರೂಪಾಯಿಯನ್ನು ಬಿಸಿಸಿಐ ನಿಗದಿಗೊಳಿಸಿದೆ. ಇದರಲ್ಲಿ ಈಗಾಗಲೇ ಫ್ರಾಂಚೈಸಿಗಳು ಆಟಗಾರರ ರೀಟೈನ್‌ಗೆ ಹಾಗೂ ಹೊಸ ತಂಡಗಳು ಡ್ರಾಫ್ಟ್ ಆಯ್ಕೆಗೆ ಬಳಸಿರುವ ಮೊತ್ತವನ್ನು ಕಳೆದು ಉಳಿದ ಮೊತ್ತದಲ್ಲಿ ಉಳಿದ ಆಟಗಾರರ ಸ್ಥಾನವನ್ನು ಹರಾಜಿನಲ್ಲಿ ಭರ್ತಿಗೊಳಿಸಬೇಕಿದೆ. ಹಾಗಾಗಿ ಯಾವ್ಯಾವ ತಂಡಗಳಲ್ಲಿ ಎಷ್ಟೆಷ್ಟು ಮೊತ್ತ ಬಾಕಿಯಿದೆ ಎಂಬುದು ಈ ಕೆಳಗಿದೆ
ತಂಡಗಳಲ್ಲಿ ಉಳಿದಿರುವ ಪರ್ಸ್ ಮೊತ್ತ
ಚೆನ್ನೈ ಸೂಪರ್ ಕಿಂಗ್ಸ್: 48 ಕೋಟಿ
ಡೆಲ್ಲಿ ಕ್ಯಾಪಿಟಲ್ಸ್: 47.5 ಕೋಟಿ
ಕೋಲ್ಕತ್ತಾ ನೈಟ್ ರೈಡರ್ಸ್: 48 ಕೋಟಿ
ಲಕ್ನೋ ಸೂಪರ್ ಜೈಂಟ್ಸ್: 59 ಕೋಟಿ
ಮುಂಬೈ ಇಂಡಿಯನ್ಸ್: 48 ಕೋಟಿ
ಪಂಜಾಬ್ ಕಿಂಗ್ಸ್: 72 ಕೋಟಿ
ರಾಜಸ್ಥಾನ್ ರಾಯಲ್ಸ್: 62 ಕೋಟಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು: 57 ಕೋಟಿ
ಸನ್ ರೈಸರ್ಸ್ ಹೈದರಾಬಾದ್: 68 ಕೋಟಿ
ಅಹಮದಾಬಾದ್ ತಂಡ: 52 ಕೋಟಿ

ಯಾವ ದೇಶದಿಂದ ಎಷ್ಟು ಆಟಗಾರರು ಹರಾಜಿನಲ್ಲಿ?
ಭಾರತ- 370, ಅಫ್ಘಾನಿಸ್ತಾನ- 17, ಆಸ್ಟ್ರೇಲಿಯಾ-47, ಬಾಂಗ್ಲಾದೇಶ-5, ಇಂಗ್ಲೆಂಡ್-24, ಐರ್ಲೆಂಡ್-5, ನ್ಯೂಜಿಲೆಂಡ್-24, ದಕ್ಷಿಣ ಆಫ್ರಿಕಾ-33, ಶ್ರೀಲಂಕಾ-23, ವೆಸ್ಟ್ ಇಂಡೀಸ್-34, ಜಿಂಬಾಬ್ವೆ-1, ನಮೀಬಿಯಾ-3, ನೇಪಾಳ-1, ಸ್ಕಾಟ್ಲೆಂಡ್-2, ಯುಎಸ್‌ಎ-1
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications