For Quick Alerts
ALLOW NOTIFICATIONS  
For Daily Alerts
 

IPL 2022: ಪ್ಲೇಆಫ್, ಕ್ವಾಲಿಫೈಯರ್ ಪಂದ್ಯಗಳ ದಿನಾಂಕ, ಸ್ಥಳ; ಆರ್‌ಸಿಬಿಗೆ ಎದುರಾಳಿ ಯಾರು?

IPL 2022: Heres The Playoffs And Qualifier Matches Date and Venue; Who Is The Opponent Of RCB?

ಶನಿವಾರ ನಡೆದ ಐಪಿಎಲ್ 2022ರ 15ನೇ ಋತುವಿನ 69ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸುತ್ತಿದ್ದಂತೆ, ಪ್ಲೇ-ಆಫ್ ಸ್ಥಾನಗಳನ್ನು ನಿರ್ಧರಿಸಲಾಯಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಾಲ್ಕನೇ ಸ್ಥಾನವನ್ನು ಉಳಿಸಿಕೊಳ್ಳುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ-ಆಫ್‌ ರೇಸ್‌ನಿಂದ ಇದೀಗ ಹೊರಬಿದ್ದಿದೆ.

ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ನಂತರ ಜಸ್ಪ್ರೀತ್ ಬುಮ್ರಾ ಪ್ರಮುಖ ಮೂರು ವಿಕೆಟ್ ಪಡೆದಿದ್ದು, ದೆಹಲಿಯನ್ನು 20 ಓವರ್‌ಗಳಲ್ಲಿ 159/7ಕ್ಕೆ ನಿರ್ಬಂಧಿಸಲು ಸಹಾಯ ಮಾಡಿತು. ರೋವ್‌ಮನ್ ಪೊವೆಲ್ ಅವರು 43 ರನ್ ಗಳಿಸುವುದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಪರ ಗರಿಷ್ಠ ಸ್ಕೋರ್ ಮಾಡಿದರು.

ನಂತರ ಮುಂಬೈ ಇಂಡಿಯನ್ಸ್ ಪರ ಇಶಾನ್ ಕಿಶನ್ ಅವರ 48 ಮತ್ತು ಟಿಮ್ ಡೇವಿಡ್ ಅವರ ಅದ್ಭುತ 11 ಎಸೆತಗಳಲ್ಲಿ 34 ರನ್ ಚಚ್ಚಿದ ನಂತರ ಮುಂಬೈ ಇಂಡಿಯನ್ಸ್ ರೋಚಕವಾಗಿ ಗೆಲ್ಲಲು ನೆರವಾಯಿತು.

ಪ್ರಮುಖ ಮೂರು ವಿಕೆಟ್ ಪಡೆದ ಜಸ್ಪ್ರೀತ್ ಬುಮ್ರಾ

ಪ್ರಮುಖ ಮೂರು ವಿಕೆಟ್ ಪಡೆದ ಜಸ್ಪ್ರೀತ್ ಬುಮ್ರಾ

ಟಿಮ್ ಡೇವಿಡ್ ಅವರ ಕ್ಯಾಚ್ ಬಗ್ಗೆ ಗೊಂದಲ ಉಂಟಾಗಿ ರಿವೀವ್ ತೆಗೆದುಕೊಳ್ಳದಿರುವ ನಿರ್ಧಾರವು ಡೆಲ್ಲಿ ಕ್ಯಾಪಿಟಲ್ಸ್ ಹೆಚ್ಚು ಬೆಲೆ ತೆರಬೇಕಾಯಿತು. ಏಕೆಂದರೆ ನಂತರ ಟಿಮ್ ಡೇವಿಡ್ ಸಿಕ್ಸರ್‌ಗಳ ಮೂಲಕ ಅಬ್ಬರಿಸಿ ಮುಂಬೈ ಗೆಲ್ಲಲು ಸಹಾಯ ಮಾಡಿದರು.

ಐಪಿಎಲ್ 2022ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಕೇವಲ ಒಂದು ಲೀಗ್ ಪಂದ್ಯ ಬಾಕಿಯಿದ್ದು, ಈಗಾಗಲೇ ನಾಲ್ಕು ಪ್ಲೇಆಫ್ ಆಡಲಿರುವ ತಂಡಗಳು ಅಂತಿಮಗೊಂಡಿರುವುದರಿಂದ ಇಂದಿನ ಪಂದ್ಯ ಮಹತ್ವವನ್ನು ಪಡೆದಿಲ್ಲ.

ರಾಜಸ್ಥಾನ್ ರಾಯಲ್ಸ್ ಅಂಕಪಟ್ಟಿಯಲ್ಲಿ ಅಗ್ರ 2ನೇ ಸ್ಥಾನ

ರಾಜಸ್ಥಾನ್ ರಾಯಲ್ಸ್ ಅಂಕಪಟ್ಟಿಯಲ್ಲಿ ಅಗ್ರ 2ನೇ ಸ್ಥಾನ

ಗುಜರಾತ್ ಟೈಟಾನ್ಸ್ (ಜಿಟಿ) ಪ್ಲೇಆಫ್‌ಗೆ ಪ್ರವೇಶಿಸಿದ ಮೊದಲ ತಂಡವಾಗಿದೆ ಮತ್ತು ಪ್ಲೇಆಫ್ ಪಂದ್ಯಗಳಿಗೆ ಹೋಗುವ ಟೇಬಲ್‌ ಟಾಪರ್ ಆಗಿ ಅವರ ಚೊಚ್ಚಲ ಋತುವನ್ನು ಪೂರ್ಣಗೊಳಿಸಿದರು. ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ಅಂಕಪಟ್ಟಿಯಲ್ಲಿ ಅಗ್ರ 2ನೇ ಸ್ಥಾನ ಪಡೆದ ನಂತರ ಎರಡನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಆಶಾವಾದ ಇಟ್ಟುಕೊಂಡಿದ್ದಾರೆ.

ಇನ್ನು ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಪಂದ್ಯಾವಳಿಯ ಮೊದಲಾರ್ಧದಲ್ಲಿ ಪ್ರಾಬಲ್ಯ ಸಾಧಿಸಿದ ನಂತರ ಐಪಿಎಲ್ 2022 ಪಾಯಿಂಟ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕಿಳಿದಿರುವುದಕ್ಕೆ ನಿರಾಶೆಗೊಂಡಿದ್ದಾರೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ಮುಂಬೈ ಇಂಡಿಯನ್ಸ್ (ಎಂಐ) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ (ಡೆಲ್ಲಿ ಕ್ಯಾಪಿಟಲ್ಸ್) ಗೆಲ್ಲಲೇಬೇಕಾದ ಪಂದ್ಯದಲ್ಲಿ ಸೋತ ಕಾರಣ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪ್ಲೇಆಫ್ ಪ್ರವೇಶಿಸಿದ ನಾಲ್ಕನೇ ತಂಡವಾಯಿತು.

ಮೇ 25ರಂದು ಲಕ್ನೋ ವಿರುದ್ಧ ಆರ್‌ಸಿಬಿ ಸೆಣಸಾಟ

ಮೇ 25ರಂದು ಲಕ್ನೋ ವಿರುದ್ಧ ಆರ್‌ಸಿಬಿ ಸೆಣಸಾಟ

ಮೇ 24, ಮಂಗಳವಾರದಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುವ ಕ್ವಾಲಿಫೈಯರ್ 1ರಲ್ಲಿ ಗುಜರಾತ್ ಟೈಟನ್ಸ್ ತಂಡ ರಾಜಸ್ಥಾನ್ ರಾಯಲ್ಸ್ ಅನ್ನು ಎದುರಿಸಲಿದೆ.

ಇನ್ನು ಮೇ 25ರಂದು ಇದೇ ಮೈದಾನದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎಲಿಮಿನೇಟರ್ ಪಂದ್ಯವಾಡಲಿದೆ.

ಮೇ 29ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪೈನಲ್

ಮೇ 29ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪೈನಲ್

ನಂತರ ಕ್ವಾಲಿಫೈಯರ್ 1ರಲ್ಲಿ ಸೋತವರು ಎಲಿಮಿನೇಟರ್ ವಿಜೇತರನ್ನು ಎದುರಿಸುವ ಕ್ವಾಲಿಫೈಯರ್ 2 ಪಂದ್ಯ ಮೇ 27ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯಗಳು ರಾತ್ರಿ 7:30ಕ್ಕೆ (ಭಾರತೀಯ ಕಾಲಮಾನ) ಪ್ರಾರಂಭವಾಗುತ್ತದೆ. ಆದರೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೇ 29ರಂದು ನಡೆಯಲಿರುವ ಫೈನಲ್ ಪಂದ್ಯ ರಾತ್ರಿ 8:00 ಗಂಟೆಗೆ (ಭಾರತೀಯ ಕಾಲಮಾನ) ಪ್ರಾರಂಭವಾಗುತ್ತದೆ.

Story first published: Sunday, May 22, 2022, 9:02 [IST]
Other articles published on May 22, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+