Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಈ ಬ್ಯಾಟ್ಸ್‌ಮನ್‌ಗೆ ಬೌಲ್ ಮಾಡುವುದು ತುಂಬಾನೆ ಕಷ್ಟವಾಗಿತ್ತು: ಸುನಿಲ್ ನರೈನ್

Sunil narine

ಕೊಲ್ಕತ್ತಾ ನೈಟ್ ರೈಡರ್ಸ್‌ನ ಪ್ರಮುಖ ಸ್ಪಿನ್ನರ್, ವಿಂಡೀಸ್‌ನ ಮಿಸ್ಟರಿ ಸ್ಪಿನ್ನರ್ ಖ್ಯಾತಿಯ ಸುನಿಲ್ ನರೈನ್ ಭಾರತದ ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್‌ಗೆ ಬೌಲಿಂಗ್ ಮಾಡುವುದು ತುಂಬಾ ಕಷ್ಟವಾಗಿತ್ತು ಎಂದು ಹೇಳಿಕೊಂಡಿದ್ದಾರೆ.

ಐಪಿಎಲ್ 2012ನೇ ಸೀನಸ್‌ನಿಂದ ಕೆಕೆಆರ್ ಪರ ಆಡುತ್ತಿರುವ ಏಕೈಕ ಪ್ಲೇಯರ್ ಆಗಿರುವ ಸುನಿಲ್ ನರೈನ್, ಕಳೆದ ಒಂದು ದಶಕದಿಂದ ಒಂದೇ ಫ್ರಾಂಚೈಸಿ ಪರ ಆಡುತ್ತಿದ್ದಾರೆ. ಇಂದು 150ನೇ ಐಪಿಎಲ್ ಪಂದ್ಯವನ್ನಾಡುತ್ತಿರುವ ನರೈನ್ ತಾನು ಎದುರಿಸಿದ ಕಷ್ಟದ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸುನಿಲ್ ನರೈನ್ ಅಂದ್ರೆ ಒಂದು ರೀತಿಯಲ್ಲಿ ಸೈಲೆಂಟ್ ಕಿಲ್ಲರ್ ಇದ್ದ ಹಾಗೆ. ಆತನಿಗೆ ರನ್ ಹೊಡೆಯೋದು ಅಷ್ಟು ಸುಲಭದ ಮಾತಲ್ಲ. ತನ್ನ ಸ್ಪಿನ್ ವೇರಿಯೇಷನ್ ಮೂಲಕ ಬ್ಯಾಟ್ಸ್‌ಮನ್‌ಗಳನ್ನ ಕಂಗಾಲು ಮಾಡುವ ಮತ್ತು ತಪ್ಪೆಸಗುವಂತೆ ಮಾಡುವ ಮಿಸ್ಟರಿ ಸ್ಪಿನ್ನರ್. ಹೀಗಿರುವಾಗ ಕಳೆದ ಒಂದು ದಶಕದಲ್ಲಿ ತನ್ನ ಅನುಭವವನ್ನ ನರೈನ್ ಹಂಚಿಕೊಂಡಿದ್ದಾರೆ.

ಐಪಿಎಲ್‌ನಲ್ಲಿ ಯಾರು ಅತ್ಯುತ್ತಮವಾಗಿ ಆಡಿದ್ದಾರೆಂದು ನೀವು ಭಾವಿಸುತ್ತೀರಿ ಎಂದು ಕೇಳಿದಾಗ, "ನಾನು ಬಹುಶಃ ವೀರೇಂದ್ರ ಸೆಹ್ವಾಗ್ ಎಂದು ಹೇಳಬೇಕಾಗಬಹುದು. ನಾನು ಯಾವಾಗಲೂ ಅವರ ವಿರುದ್ಧ ಆಡುವಾಗೊ ಕಠಿಣವಾಗಿ ಕಂಡುಕೊಂಡಿದ್ದೇನೆ. ಏಕೆಂದರೆ ಅವರು ತಂಡವು ಯಾವುದೇ ಪರಿಸ್ಥಿತಿಯಲ್ಲಿದ್ದರೂ ಯಾವಾಗಲೂ ಆಟವನ್ನು ಮುಂದುವರಿಸುವ ವ್ಯಕ್ತಿಯಾಗಿದ್ದರು, ಅವರು ಬೇಕಾದ ರೀತಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು, "ಎಂದು ಸುನಿಲ್ ನರೈನ್ ಹೇಳಿಕೊಂಡಿದ್ದಾರೆ.

ಐಪಿಎಲ್ 2022ರ ಸೀಸನ್‌ ಕುರಿತು ಮಾತನಾಡುವುದಾದ್ರೆ, ಸುನಿಲ್ ನರೈನ್ ಅತ್ಯಂತ ಗುಣಮಟ್ಟದ ಎಕಾನಮಿ ರೇಟ್ ಹೊಂದಿರುವ ಬೌಲರ್ ಆಗಿದ್ದಾರೆ. ಆತನ ಎಕಾನಮಿ 5.00ರಷ್ಟಿದೆ. ಆರು ಪಂದ್ಯಗಳನ್ನ ಆಡಿರುವ ನರೈನ್ ನಾಲ್ಕು ವಿಕೆಟ್ ಪಡೆದಿದ್ದಾರೆ.

ಶನಿವಾರ ನಡೆದ ಪಂದ್ಯದಲ್ಲಿ ಏನ್ ಆಯ್ತು ಅನ್ನೋದನ್ನ ನೋಡಿ! | Oneindia Kannada

Story first published: Monday, April 18, 2022, 20:01 [IST]
Other articles published on Apr 18, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+