IPL 2022: ನನ್ನ ತಂದೆ-ತಾಯಿಯ ಬಹು ವರ್ಷದ ಆಸೆ ಪೂರೈಸುತ್ತಿದ್ದೇನೆ ಎಂದ ಮೊಹ್ಸಿನ್ ಖಾನ್

ಇಂಡಿಯನ್ ಪ್ರೀಮಿಯರ್ ಲೀಗ್ 2022 ರ ಸೀಸನ್‌ನಲ್ಲಿ ಅನೇಕ ಯುವ ಪ್ರತಿಭೆಗಳು ಬೆಳಕಿಗೆ ಬರುತ್ತಿವೆ. ಈ ಹಿಂದೆ ಕೇವಲ 8 ತಂಡಗಳಿದ್ದು, ಹಲವು ಆಟಗಾರರು ಬೆಂಚ್‌ಗೆ ಸೀಮಿತರಾಗಿದ್ದರು. ಆದರೆ ಈ ಋತುವಿನಲ್ಲಿ ಹೊಸ ತಂಡಗಳಾದ ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಸೇರಿರುವುದರಿಂದ ಯುವ ಪ್ರತಿಭೆಗಳಿಗೆ ಸಾಕಷ್ಟು ಅವಕಾಶ ಸಿಕ್ಕಿದೆ. ಈ ಮೂಲಕ ಕೆಲವರು ತಮ್ಮ ಅದ್ಭುತ ಆಟವನ್ನು ಕ್ರಿಕೆಟ್ ಜಗತ್ತಿಗೆ ತೋರಿಸುತ್ತಿದ್ದಾರೆ.
ಲಕ್ನೋ ಪರ ಕಣಕ್ಕಿಳಿದ ಮೊಹ್ಸಿನ್ ಖಾನ್ ಕಳೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದರು. ಜೊತೆಗೆ 3 ಪ್ರಮುಖ ವಿಕೆಟ್‌ಗಳನ್ನ ಸಹ ಪಡೆದಿದ್ದಾರೆ. ಈ ಮೂಲಕ ಐಪಿಎಲ್ 2022ರ ಸೀಸನ್‌ನಲ್ಲಿ ಮತ್ತೊಬ್ಬ ಯುವ ಬೌಲರ್ ಬೆಳಕಿಗೆ ಬಂದಿದ್ದಾನೆ.
ಮುಂಬೈ ಇಂಡಿಯನ್ಸ್ ಪರ ಬೆಂಚ್ ಕಾದಿದ್ದ ಮೊಹ್ಸಿನ್ ಖಾನ್
ಮೊಹ್ಸಿನ್ ಖಾನ್‌ಗೆ ಅಷ್ಟು ಬೇಗ ಐಪಿಎಲ್‌ನಲ್ಲಿ ಅವಕಾಶಗಳು ಸಿಗಲಿಲ್ಲ. ಹಲವಾರು ವರ್ಷಗಳಿಂದ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿರುವ ಮೊಹ್ಸಿನ್ ಈ ವರ್ಷ ಲಖನೌಗಾಗಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು.
ಉತ್ತರ ಪ್ರದೇಶದ ಸಂಭಾಲ್ ಮೂಲದ ಮೊಹ್ಸಿನ್ ಅವರನ್ನು ಸೂಪರ್ ಜೈಂಟ್ಸ್ ತನ್ನ ಮೂಲ ಬೆಲೆ 20 ಲಕ್ಷಕ್ಕೆ ಮೆಗಾ ಹರಾಜಿನಲ್ಲಿ ಖರೀದಿಸಿತು. ಇತ್ತೀಚೆಗಷ್ಟೇ ಪಂಜಾಬ್ ವಿರುದ್ಧ ಲಖನೌ ಗೆಲುವಿನ ನಂತರ, ಐಪಿಎಲ್ ವೆಬ್‌ಸೈಟ್‌ಗಾಗಿ ದೀಪಕ್ ಹೂಡಾ ಅವರೊಂದಿಗೆ ಸಂವಾದದಲ್ಲಿ ಮಾತನಾಡುತ್ತಾ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಅಂತಿಮವಾಗಿ ಐಪಿಎಲ್‌ಗೆ ಪಾದಾರ್ಪಣೆ ಮಾಡುವ ಮೂಲಕ ಅವರ ಹೆತ್ತವರ ಕನಸನ್ನು ನನಸು ಮಾಡಿರುವುದಾಗಿ ತಿಳಿಸಿದ್ದಾರೆ.
'ಕಳೆದ ಮೂರು ವರ್ಷಗಳಿಂದ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದೇನೆ. ಅದು ಬಹಳ ದೊಡ್ಡ ತಂಡ. ನನಗೆ ಪಂದ್ಯಗಳನ್ನು ಆಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ನಾನು ಅಲ್ಲಿ ಬಹಳಷ್ಟು ಕಲಿತಿದ್ದೇನೆ. ಈಗ ಲಕ್ನೋ ತಂಡ ನನ್ನನ್ನು ಖರೀದಿಸಿದೆ. ಈ ತಂಡದ ಪರವಾಗಿ ನಾನು ಐಪಿಎಲ್‌ಗೆ ಪದಾರ್ಪಣೆ ಮಾಡಲು ಸಾಧ್ಯವಾಯಿತು. ಸದ್ಯ ನಮ್ಮ ತಂಡ ಬಲಿಷ್ಠವಾಗಿದೆ. ಈ ತಂಡದ ಸಹಾಯಕ ಸಿಬ್ಬಂದಿ ಮತ್ತು ನಿರ್ವಹಣೆಯು ತುಂಬಾ ಬೆಂಬಲವನ್ನು ನೀಡುತ್ತದೆ'' ಎಂದು ಹೇಳಿದ್ದಾರೆ.
''ನಾನು ದೇಶೀಯ ಕ್ರಿಕೆಟ್ ಅನ್ನು ಹೇಗೆ ಆಡಿದ್ದೇನೆ ಮತ್ತು ಇಲ್ಲಿ ಮುಕ್ತವಾಗಿ ಆಡಲು ಬಯಸುತ್ತೇನೆ ಎಂದು ತಂಡದ ಮ್ಯಾನೇಜ್‌ಮೆಂಟ್ ನನಗೆ ತಿಳಿಸಿತು. ನಾಯಕ ಕೆಎಲ್ ರಾಹುಲ್, ಕೋಚ್‌ಗಳು ನನ್ನ ಬೌಲಿಂಗ್ ನೋಡಿ ನನಗೆ ಕೆಲವು ಕೌಶಲ್ಯಗಳನ್ನು ಕಲಿಸಿದರು. ಅವರು ನನ್ನ ಕಠಿಣ ಪರಿಶ್ರಮದ ವಿಧಾನವನ್ನು ಇಷ್ಟಪಟ್ಟರು ಮತ್ತು ನನ್ನನ್ನು ಅಂತಿಮ ತಂಡಕ್ಕೆ ಸೇರಿಸಿಕೊಂಡರು'' ಎಂದು ಮೊಹ್ಸಿನ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications