Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Yuzvendra Chahal : ಯುಜವೇಂದ್ರ ಚಹಾಲ್ ಕೈ-ಕಾಲು ಕಟ್ಟಿ ಹಾಕಿ ರಾತ್ರಿಯಿಡಿ ಒಂದೆಡೆ ಬಿದ್ದಿರುವಂತೆ ಮಾಡಿದ್ದ ಪ್ಲೇಯರ್ಸ್‌

yuzvendra chahal

ರಾಜಸ್ತಾನ್ ರಾಯಲ್ಸ್ ತಂಡದ ಸ್ಪಿನ್ನರ್ ಯುಜವೇಂದ್ರ ಚಹಾಲ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕಳೆದಿದ್ದ ಕೆಟ್ಟ ಸಮಯವೊಂದನ್ನ ನೆನಪಿಸಿಕೊಂಡಿದ್ದಾರೆ. 2013ರ ಐಪಿಎಲ್‌ ಸೀಸನ್‌ವರೆಗೆ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಯುಜಿ, ಹೋಟೆಲ್‌ನಲ್ಲಿ ಕಳೆದ ಕರಾಳ ರಾತ್ರಿ ಕುರಿತು ಸತ್ಯ ಬಿಚ್ಚಿಟ್ಟಿದ್ದಾರೆ.

ಹಲವು ಸೀಸನ್‌ಗಳ ಕಾಲ ರಾಯಲ್ ಚಾಲೆಂಜರ್ಸ್ ಪರ ಆಡಿದ್ದ ಯುಜವೇಂದ್ರ ಚಹಾಲ್‌ರನ್ನ ಈ ಬಾರಿ ಆರ್‌ಸಿಬಿ ರೀಟೈನ್ ಮಾಡಿಕೊಳ್ಳಲಿಲ್ಲ. ಹೀಗಾಗಿ ಹರಾಜಿಗೆ ತೆರಳಿದ್ದ ಚಹಾಲ್‌ರನ್ನ ರಾಜಸ್ತಾನ್ ರಾಯಲ್ಸ್ 6.5 ಕೋಟಿ ರೂಪಾಯಿಗೆ ಖರೀದಿಸಿತು.

ಇತ್ತೀಚೆಗಷ್ಟೇ ಯುಜವೇಂದ್ರ ಚಹಾಲ್ ಯೂಟ್ಯೂಬ್ ಕಾರ್ಯಕ್ರಮವೊಂದರಲ್ಲಿ 2013ರಲ್ಲಿ ಅನಭವಿಸಿದ ಘಟನೆಯನ್ನ ಹಂಚಿಕೊಂಡಿದ್ದರು. ಮುಂಬೈ ಇಂಡಿಯನ್ಸ್ ಆಟಗಾರನೊಬ್ಬ ಕುಡಿದ ಮತ್ತಿನಲ್ಲಿ 15 ಮಹಡಿಯಿಂದ ಎತ್ತಿ ಎಸೆಯಲು ಹೋಗಿದ್ದ ಎಂದು ರಿವೀಲ್ ಮಾಡಿದ್ರು. ಆದ್ರೆ ಆತನ ಹೆಸರು ಏನು ಎಂಬುದನ್ನ ಮಾತ್ರ ಬಹಿರಂಗಪಡಿಸಲಿಲ್ಲ.

Chahal

ಇದೀಗ ಆ ಘಟನೆ ಜೊತೆಗೆ 2011ರಲ್ಲಿ ಆ್ಯಂಡ್ರ್ಯೂ ಸೈಮಂಡ್ಸ್ ಮತ್ತು ಜೇಮ್ಸ್ ಫ್ರಾಂಕ್ಲಿನ್ ಮಾಡಿದ್ದ ಎಡವಟ್ಟು ಅನ್ನು ಬಿಚ್ಚಿಟ್ಟಿದ್ದಾರೆ. 2011ರ ಸೀಸನ್‌ನ ಪಂದ್ಯವೊಂದ ಬಳಿಕ ಆಸ್ಟ್ರೇಲಿಯಾ ಆಟಗಾರರಾದ ಸೈಮಂಡ್ಸ್ ಮತ್ತು ಫ್ರಾಂಕ್ಲಿನ್ ಇಡೀ ರಾತ್ರಿ ಚಹಾಲ್‌ರ ಕೈ ಕಾಲು ಕಟ್ಟಿ ಹಾಕಿ ಬಾಯಿಗೆ ಪ್ಲಾಸ್ಟರ್ ಹಾಕಿದ್ದ ಕರಾಳ ಘಟನೆ ನೆನಪಿಸಿಕೊಂಡಿದ್ದಾರೆ.

"ಇದು 2011 ರಲ್ಲಿ ಚೆನ್ನೈ ಹೋಟೆಲ್‌ನಲ್ಲಿ ಚಾಂಪಿಯನ್ಸ್ ಲೀಗ್ ಗೆದ್ದ ನಂತರ, ಅವರು [ಆಂಡ್ರ್ಯೂ ಸೈಮಂಡ್ಸ್] ಬಹಳಷ್ಟು "ಹಣ್ಣಿನ ರಸ" ಕುಡಿದಿದ್ದರು (ಮದ್ಯ). ನಾನು ಅವನೊಂದಿಗಿದ್ದೆ, ಜೇಮ್ಸ್ ಫ್ರಾಂಕ್ಲಿನ್ ಮತ್ತು ಅವರು ನನ್ನ ಕೈ ಮತ್ತು ಕಾಲುಗಳನ್ನು ಕಟ್ಟಿದರು ಮತ್ತು 'ಈಗ ನೀವು ತೆರೆಯಬೇಕು' ಎಂದು ಹೇಳಿದರು. ಅವರು ತುಂಬಾ ಮಸ್ತಿಯಲ್ಲಿದ್ದರು, ಅವರು ನನ್ನ ಬಾಯಿಗೆ ಟೇಪ್ ಕೂಡ ಹಾಕಿದ್ದರು. ಆದ್ರೆ ಈ ಮಸ್ತಿ ವೇಳೆ ನನ್ನ ಮರೆತು ಹೋಟೆಲ್ ರೂಂ ಬಿಟ್ಟು ಹೋದರು. ಪಾರ್ಟಿ ಮುಗಿದು ಬೆಳಿಗ್ಗೆ ಒಬ್ಬ ಕ್ಲೀನರ್ ಬಂದಾಗ ಅವನು ನನ್ನನ್ನು ನೋಡಿ ನನ್ನನ್ನು ಮುಕ್ತಗೊಳಿಸಿದನು. ನಾನು ಯಾವಾಗ ಇಲ್ಲಿಗೆ ಬಂದಿದ್ದೇನೆ ಎಂದು ಅವರು ಕೇಳಿದರು ಮತ್ತು ನಾನು ಅವರಿಗೆ ಹೇಳಿದೆ, ಇಡೀ ರಾತ್ರಿ'' ಎಂದು ರಾತ್ರಿ ಕಳೆದಿದ್ದ ಕೆಟ್ಟ ಸಮಯವನ್ನ ತಿಳಿಸಿದ್ದಾರೆ.

ಹೀಗೆ ಮಾಡಿದ್ದ ಆಟಗಾರರು ಮರುದಿನ ನಿಮ್ಮ ಬಳಿ ಬಂದು ಕ್ಷಮೆ ಕೇಳಿದ್ರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಚಹಾಲ್ '' ಇಲ್ಲ, ಅವರು ರಾತ್ರಿ ಕುಡಿದ ಜ್ಯೂಸ್‌ಗೆ ಏನು ಮಾಡಿದ್ರೂ ಅಂತಾನೇ ತಿಳಿಯಲಿಲ್ಲ. ಅವರಿಗೆ ಏನು ನೆನಪಿರಲಿಲ್ಲ'' ಎಂದು ಚಹಾಲ್ ಹೇಳಿದ್ದಾರೆ.

ಈ ಕುರಿತಾಗಿ ಯಾವುದೇ ದೂರು ನೀಡದ ಚಹಾಲ್‌ಗೆ 2013ರಲ್ಲಿಯೂ ಸಹ ಮತ್ತೊಂದು ಕೆಟ್ಟ ಘಟನೆ ಎದುರಿಸಿದ್ದರು.

2013ರಲ್ಲಿ ನಡೆದಿದ್ದ ಆ ಘಟನೆ ಈವರೆಗೂ ಎಲ್ಲೂ ಬಹಿರಂಗಪಡಿಸಿರಲಿಲ್ಲ. ರಾಜಸ್ತಾನ್ ರಾಯಲ್ಸ್‌ನ ಅಧಿಕೃತ ಅಕೌಂಟ್‌ನಿಂದ ವೀಡಿಯೋ ಬಿಡುಗಡೆಗೊಂಡಿದ್ದು, ಇದರಲ್ಲಿ ಚಹಾಲ್‌ ತಮ್ಮ ಜೀವನದಲ್ಲಿ ಆದ ಅಚಾನಕ್ ಘಟನೆ ಕುರಿತು ವಿವರಿಸಿದ್ದಾರೆ.

"ಅದು 2013ರಲ್ಲಿ ನಡೆದ ಘಟನೆ. ಆಗ ನಾನು ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆಡುತ್ತಿದ್ದೆ. ಬೆಂಗಳೂರಿನಲ್ಲಿ ಪಂದ್ಯ ನಡೆದ ನಂತರ ಆಟಗಾರರ 'ಗೆಟ್‌ ಟು ಗೆದರ್' ನಡೆದಿತ್ತು. ಆಗ ಒಬ್ಬ ಆಟಗಾರ ನನ್ನನ್ನು ನೋಡುತ್ತಲೇ ಇದ್ದ. ಕೆಲ ಸಮಯದ ನಂತರ ನನ್ನನ್ನು ಕರೆದ. ನಂತರ ಆತ ನನ್ನನ್ನು ಹಿಂದಿನಿಂದ ಲಾಕ್ ಮಾಡಿದ. 15ನೇ ಫ್ಲೋರ್‌ನಲ್ಲಿ ಆಗಿದ್ದ ಘಟನೆಯದು. ಆತನೇನಾರೂ ಬಿಟ್ಟಿದ್ದರೆ ನಾನು ಅಲ್ಲಿಂದ ಕೆಳಕ್ಕೆ ಬೀಳುತ್ತಿದ್ದೆ. ಇದನ್ನು ಗಮನಿಸಿದರ ಇತರ ಆಟಗಾರರು ತಕ್ಷಣವೇ ಓಡಿ ಬಂದು ನನ್ನನ್ನು ರಕ್ಷಿಸಿದರು. ಇಷ್ಟಾದಾಗ ನನ್ನ ಪ್ರಜ್ಞೆ ತಪ್ಪಿತ್ತು. ನಂತರ ಅಲ್ಲಿದ್ದವರು ನನಗೆ ನೀರು ನೀಡಿದ್ದರು" ಎಂದು ಯುಜವೇಂದ್ರ ಚಹಾಲ್ ಘಟನೆಯ ಬಗ್ಗೆ ತಿಳಿಸಿದ್ದಾರೆ.

Story first published: Saturday, April 9, 2022, 9:38 [IST]
Other articles published on Apr 9, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+