Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2022: ಟೂರ್ನಿ ಆರಂಭಕ್ಕೂ ಮುನ್ನ ಯೊ-ಯೊ ಟೆಸ್ಟ್‌ನಲ್ಲಿ ಫೇಲ್ಯೂರ್ ಆದ ಪೃಥ್ವಿ ಶಾ

Prithvi shaw

ಭಾರತದ ಯುವ ಬ್ಯಾಟ್ಸ್‌ಮನ್ ಪೃಥ್ವಿ ಶಾ ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್‌ಗೂ ಮುನ್ನ ಯೊ-ಯೊ ಟೆಸ್ಟ್ ಪಾಸ್ ಮಾಡುವಲ್ಲಿ ವಿಫಲರಾಗಿದ್ದಾರೆ. ಮಾರ್ಚ್ 26ರಂದು ಆರಂಭವಾಗಲಿರುವ ಮೆಗಾ ಐಪಿಲ್ ಸೀಸನ್‌ಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್‌ ಓಪನರ್‌ ಎನ್‌ಸಿಎನಲ್ಲಿ ಯೊ-ಯೊ ಟೆಸ್ಟ್‌ ನಿಗದಿತ ನಂಬರ್ ತಲುಪಲು ಸಾಧ್ಯವಾಗಿಲ್ಲ. ಆದರೂ ಕೂಡ ಈತ ಐಪಿಎಲ್ ಆಡಲು ಯಾವುದೇ ಸಮಸ್ಯೆಯಿಲ್ಲ ಎನ್ನಲಾಗಿದೆ.

ಬಿಸಿಸಿಐ ಆಯೋಜಿಸಿದ್ದ ಫಿಟ್ನೆಸ್ ಶಿಬಿರದಲ್ಲಿ ಭಾಗಿಯಾಗಿದ್ದ ಆಟಗಾರರಲ್ಲಿ ಪೃಥ್ವಿ ಶಾ ಕೂಡ ಒಬ್ಬರಾಗಿದ್ದರು. ಇಂಜ್ಯುರಿ ಮತ್ತು ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದ್ದ ಆಟಗಾರರಿಗೆ ಬೆಂಗಳೂರಿನ ಎನ್‌ಸಿಎ ಅಕಾಡೆಮಿಯ ಪುನರ್ವಸತಿ ಶಿಬಿರದಲ್ಲಿ ತಯಾರು ಮಾಡಲಾಗುತ್ತಿತ್ತು.

ಪೃಥ್ವಿ ಶಾ ಬಿಸಿಸಿಐ ಗುತ್ತಿಗೆ ಒಪ್ಪಂದದಲ್ಲಿಲ್ಲ!

ಪೃಥ್ವಿ ಶಾ ಬಿಸಿಸಿಐ ಗುತ್ತಿಗೆ ಒಪ್ಪಂದದಲ್ಲಿಲ್ಲ!

ಭಾರತದ ಬ್ಯಾಟರ್ ಪೃಥ್ವಿ ಶಾ ಬಿಸಿಸಿಐ ಕೇಂದ್ರೀಯ ಗುತ್ತಿಗೆ ಒಪ್ಪಂದದಲ್ಲಿಲ್ಲದಿದ್ದರೂ ಆತನಿಗೆ ಫಿಟ್ನೆಸ್ ಸಾಭೀತುಪಡಿಸಲು ಎನ್‌ಸಿಎ ಶಿಬಿರಕ್ಕೆ ಬುಲಾವ್ ನೀಡಲಾಗಿತ್ತು. ಆತ ಟೆಸ್ಟ್‌ನಲ್ಲಿ ಫೇಲ್ಯೂರ್ ಆಗಿದ್ದರೂ ಸಹ ಸಮಧಾನಕರ ಫಿಟ್ನೆಸ್ ಹೊಂದಿದ್ದಾನೆ. ಯೊ-ಯೊ ಟೆಸ್ಟ್ ಪಾಸಾಗಲು 16 ಪಾಯಿಂಟ್ಸ್ ತಲುಪಬೇಕು. ಆದ್ರೆ ಪೃಥ್ವಿ ಶಾ 15 ಪಾಯಿಂಟ್ಸ್‌ ತಲುಪಿದ್ದರೂ ಸಹ ಐಪಿಎಲ್ ಆಡಬಹುದಾಗಿದೆ.

"ಇವು ಕೇವಲ ಫಿಟ್‌ನೆಸ್ ಅಪ್‌ಡೇಟ್‌ಗಳಾಗಿವೆ. ನಿಸ್ಸಂಶಯವಾಗಿ, ಇದು ಪೃಥ್ವಿಯನ್ನು ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಪರ ಆಡುವುದನ್ನು ತಡೆಯುವುದಿಲ್ಲ. ಇದು ಕೇವಲ ಫಿಟ್‌ನೆಸ್ ಪ್ಯಾರಾಮೀಟರ್ ಆಗಿದ್ದು, ಎಲ್ಲರೂ ಪಾಸ್ ಆಗುವುದಿಲ್ಲ ಮತ್ತು ಎಲ್ಲವನ್ನೂ ಕೊನೆಗೊಳಿಸುವುದಿಲ್ಲ'' ಎಂದು ಬಿಸಿಸಿಐ ಮೂಲಗಳು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿವೆ.

ಐಸಿಸಿ ನೂತನ ಟೆಸ್ಟ್ ಶ್ರೇಯಾಂಕ ಪಟ್ಟಿ ಬಿಡುಗಡೆ: ಟಾಪ್ 5ರಲ್ಲಿ ಬೂಮ್ರಾ, 9ನೇ ಸ್ಥಾನಕ್ಕೆ ಕುಸಿದ ಕೊಹ್ಲಿ

ರಣಜಿಯಲ್ಲಿ ಸಾಧಾರಣ ಪ್ರದರ್ಶನ ನೀಡಿದ ಶಾ

ರಣಜಿಯಲ್ಲಿ ಸಾಧಾರಣ ಪ್ರದರ್ಶನ ನೀಡಿದ ಶಾ

ಪೃಥ್ವಿ ಶಾ ರಣಜಿ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಮುಂಬೈ ಸ್ಕ್ವಾಡ್‌ನಲ್ಲಿದ್ದರು. ಮೂರು ಪಂದ್ಯಗಳನ್ನ ಆಡಿದ್ದ ಪೃಥ್ವಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲಗೊಂಡರು. ಒಟ್ಟಾರೆ ನಾಲ್ಕು ಇನ್ನಿಂಗ್ಸ್‌ಗಳಲ್ಲಿ 26.75ರ ಬ್ಯಾಟಿಂಗ್ ಸರಾಸರಿಯಲ್ಲಿ ಒಟ್ಟು 107 ರನ್‌ಗಳನ್ನಷ್ಟೇ ಕಲೆಹಾಕಿದರು. ಮೂಲಗಳ ಪ್ರಕಾರ ಪೃಥ್ವಿ ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದ್ದ ಪರಿಣಾಮ, ದೇಶೀಯ ಪಂದ್ಯಗಳನ್ನ ಆಡಲು ಮುಂದಾದರು.

ಐಪಿಎಲ್ 2022: ಯೊ-ಯೊ ಟೆಸ್ಟ್ ಪಾಸ್ ಆದ ಹಾರ್ದಿಕ್ ಪಾಂಡ್ಯ ಕಣಕ್ಕಿಳಿಯಲು ಸಿದ್ಧ

ತಂಟೆ,ತರ್ಲೆ ಗೆ ಹೆಸರುವಾಸಿಯಾದ ಚಹಲ್ | Oneindia Kannada
ಪೃಥ್ವಿ ಶಾ ಫಿಟ್ನೆಸ್ ಕಾಯ್ದುಕೊಳ್ಳದಿದ್ದರೆ ಭಾರತ ತಂಡಕ್ಕೆ ಆಡುವುದು ಅನುಮಾನ

ಪೃಥ್ವಿ ಶಾ ಫಿಟ್ನೆಸ್ ಕಾಯ್ದುಕೊಳ್ಳದಿದ್ದರೆ ಭಾರತ ತಂಡಕ್ಕೆ ಆಡುವುದು ಅನುಮಾನ

ಬಿಸಿಸಿಐ ಮೂಲಗಳು ಪ್ರಕಾರ ಪೃಥ್ವಿ ಶಾ ಇದೇ ರೀತಿಯಲ್ಲಿ ಫಿಟ್ನೆಸ್ ಕಾಯ್ದುಕೊಳ್ಳುವಲ್ಲಿ ವಿಫಲಗೊಂಡರೆ, ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವುದು ಬಹುತೇಕ ಅನುಮಾನ ಮೂಡಿಸಿದೆ. ಏಕೆಂದರೆ ಭಾರತ ತಂಡದಲ್ಲಿ ಆಡಲು ಫಿಟ್ನೆಸ್ ಮಾನದಂಡಗಳು ಕಡ್ಡಾಯವಾಗಿದೆ.

Story first published: Thursday, March 17, 2022, 21:20 [IST]
Other articles published on Mar 17, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+