RCB Playoff Chances 2022 : ಸತತ ಸೋಲಿನ ಬಳಿಕ ಆರ್‌ಸಿಬಿಯ ಪ್ಲೇಆಫ್‌ಗೇರುವ ಸಾಧ್ಯತೆ ಎಷ್ಟಿದೆ?

ಈ ಬಾರಿಯ ಐಪಿಎಲ್‌ನಲ್ಲಿ ಉತ್ತಮ ಆರಂಭವನ್ನು ಪಡೆದ ಆರ್‌ಸಿಬಿ ತಂಡ ಟೂರ್ನಿ ಗೆಲ್ಲುವ ತಂಡಗಳಲ್ಲಿ ಒಂದು ಎಂದು ಆರಂಭದಲ್ಲಿಯೇ ಗುರುತಿಸಿಕೊಂಡಿತು. ಆರಂಭಿಕ ಹಂತದಲ್ಲಿ ಆರ್‌ಸಿಬಿಯ ಸಾಂಘಿಕ ಪ್ರದರ್ಶನ ನೀಡಿ ಗೆಲುವು ಸಾಧಿಸುತ್ತಾ ಸಾಗಿತ್ತು. ಆದರೆ ದ್ವಿತಿಯಾರ್ಧದಲ್ಲಿ ಆರ್‌ಸಿಬಿ ತನ್ನ ವೈಫಲ್ಯ ಅನುಭವಿಸ ತೊಡಗಿದೆ. ಸತತ ಎರಡು ಪಂದ್ಯಗಳಲ್ಲಿ ಆರ್‌ಸಿಬಿ ಹೀನಾಯ ಸೋಲು ಅನುಭವಿಸಿದ ಬಳಿಕ ತಂಡದ ಆತ್ಮವಿಶ್ವಾಸವೂ ಕುಸಿದಂತೆ ಭಾಸವಾಗುತ್ತಿದೆ.
ಆರ್‌ಸಿಬಿ ಅಗ್ರ ಕ್ರಮಾಂಕ ಸಂಪೂರ್ಣವಾಗಿ ವೈಫಲ್ಯವನ್ನು ಅನುಭಿಸುತ್ತಿದೆ. ಅದರಲ್ಲೂ ಮಾಜಿ ನಾಯಕ ವಿರಾಟ್ ಕೊಹ್ಲಿ ಸತತವಾಗಿ ಅಗ್ಗಕ್ಕೆ ವಿಕೆಟ್ ಕಳೆದುಕೊಳ್ಳುತ್ತಿರುವುದು ತಂಡಕ್ಕೆ ಹಿನ್ನಡೆಯುಂಟು ಮಾಡಿದೆ. ಅಗ್ರ ಕ್ರಮಾಂಕದ ಪ್ರಮುಖ ಆಟಗಾರಾದ ನಾಯಕ ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್ ಅವರಿಂದಲೂ ಸ್ಥಿರ ಪ್ರದರ್ಶನ ಬಾರದಿರುವುದು ತಂಡವನ್ನು ಒತ್ತಡಕ್ಕೆ ಸಿಲುಕಿಸಿದೆ.
ಆರ್‌ಸಿಬಿ ಸತತವಾಗಿ ಎರಡು ಹೀನಾಯ ಸೋಲು ಅನುಭವಿಸಿದ ಬಳಿಕ ಪ್ಲೇಆಫ್ ಹಂತಕ್ಕೇರುವ ಅವಕಾಶ ಎಷ್ಟಿದೆ ಎಂಬುದು ಸಾಮಾನ್ಯ ಪ್ರಶ್ನೆ. ಈ ಪ್ರಶ್ನಗೆ ಉತ್ತರ ಇಲ್ಲದೆ. ಮುಂದೆ ಓದಿ..

9 ಪಂದ್ಯಗಳನ್ನು ಆಡಿರುವ ಆರ್‌ಸಿಬಿ
ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಈವರೆಗೆ 9 ಪಂದ್ಯಗಳನ್ನು ಆಡಿದೆ. ಇದರಲ್ಲಿ ಇದರಲ್ಲಿ ಗೆಲುವು ಸಾಧಿಸಿರುವುದು 5 ಪಂದ್ಯಗಳಲ್ಲಿ ಮಾತ್ರ. ಉಳಿದ ನಾಲ್ಕು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದು ಪ್ರಸ್ತುತ 10 ಅಂಕಗಳನ್ನು ಖಾತೆಯಲ್ಲಿ ಹೊಂದಿದೆ. ಸದ್ಯ 5ನೇ ಸ್ಥಾನದಲ್ಲಿ ಆರ್‌ಸಿಬಿ ಇದೆ. ಆದರೆ ಇತರ ತಂಡಗಳನ್ನು ನೋಡಿದರೆ ಆರ್‌ಸಿಬಿ ಮಾತ್ರವೇ ಸದ್ಯಕ್ಕೆ 9 ಪಂದ್ಯಗಳನ್ನು ಆಡಿದ್ದು ಉಳಿದ ತಂಡಗಳು 9ನೇ ಪಂದ್ಯವನ್ನು ಇನ್ನಷ್ಟೇ ಆಡಬೇಕಿದೆ. ಹೀಗಾಗಿ ಆರ್‌ಸಿಬಿ ಸ್ಥಾನ ಕುಸಿಯುವುದರಲ್ಲಿ ಅನುಮಾನವಿಲ್ಲ.

ಆರ್‌ಸಿಬಿ ಗೆಲ್ಲಬೇಕಿದೆ ಕನಿಷ್ಠ 4 ಪಂದ್ಯ
ಆರ್‌ಸಿಬಿ ಪ್ಲೇಆಫ್ ಹಾದಿ ಸುಲಭವಾಗಿಲ್ಲ. ಮುಂದಿನ ಹಂತಕ್ಕೆ ಆರ್‌ಸಿಬಿ ಸ್ಥಾನ ಪಡೆದುಕೊಳ್ಳಬೇಕಾದರೆ ಕನಿಷ್ಠ ನಾಲ್ಕು ಪಂದ್ಯಗಳನ್ನು ಗೆಲ್ಲುವ ಅನಿವಾರ್ಯತೆಯಿದೆ. ಈಗಾಗಲೇ 9 ಪಂದ್ಯಗಳನ್ನು ಆರ್‌ಸಿಬಿ ಆಡಿರುವ ಕಾರಣ ಉಳಿದಿರುವುದು ಐದು ಪಂದ್ಯಗಳು ಮಾತ್ರ ಎಂಬುದು ಗಮನಿಸಬೇಕಾದ ಅಂಶ. ಹೀಗಾಗಿ ಯಾವುದೇ ಕಾರಣಕ್ಕೂ ಒಂದಕ್ಕಿಂತ ಹೆಚ್ಚಿನ ಪಂದ್ಯಗಳನ್ನು ಆರ್‌ಸಿಬಿ ಸೋಲುವಂತಿಲ್ಲ.

ನೆಟ್‌ರನ್‌ರೇಟ್‌ನಲ್ಲೂ ಆರ್‌ಸಿಬಿ ಹಿನ್ನಡೆ
ಇನ್ನು ಆರ್‌ಸಿಬಿ ನೆಟ್‌ರನ್‌ರೇಟ್ ವಿಚಾರದಲ್ಲಿಯೂ ಭಾರೀ ಹಿನ್ನಡೆ ಅನುಭವಿಸುತ್ತಿದೆ. ಕಳೆದ ಎರಡು ಪಂದ್ಯಗಳಲ್ಲಿ ಫಾಫ್ ಡು ಪ್ಲೆಸಿಸ್ ಪಡೆ ಭಾರೀ ಅಂತರದ ಸೋಲು ಅನುಭವಿಸಿರುವ ಕಾರಣ ನೆಟ್‌ರನ್‌ರೇಟ್ ಮೇಲೆ ನೇರ ಹೊಡೆತ ಬಿದ್ದಿದೆ. ಆರ್‌ಸಿಬಿ ನೆಟ್ ರನ್‌ರೇಟ್ ಪ್ರಸ್ತುತ -0.572 ಇದ್ದು ಮುಂದಿನ ಪಂದ್ಯಗಳಲ್ಲಿ ಗೆಲುವಿನ ಜೊತೆಗೆ ನೆಟ್ ರನ್‌ರೇಟ್ ಹೆಚ್ಚು ಮಾಡುವಲ್ಲಿಯೂ ಆರ್‌ಸಿಬಿ ಗಮನ ನೀಡುವ ಅನಿವಾರ್ಯತೆಯಿದೆ.

ಆರ್‌ಸಿಬಿ ಮುಂದಿದೆ ಕಠಿಣ ಸವಾಲು
ಮೇಲಿನ ಲೆಕ್ಕಾಚಾರಗಳು ಒಂದೆಡೆಯಾದರೆ ಮೈದಾನದಲ್ಲಿ ಆರ್‌ಸಿಬಿ ಎದುರಿಸುವ ನೈಜ ಸವಾಲು ಮತ್ತೊಂದೆಡೆ. ಯಾಕೆಂದರೆ ಆರ್‌ಸಿಬಿ ತಂಡದ ಅಂತಿಮ ಐದು ಲೀಗ್ ಪಂದ್ಯಗಳ ಸವಾಲು ಸುಲಭವಾಗಿಲ್ಲ. ಇದರಲ್ಲಿ ಎರಡು ಪಂದ್ಯಗಳು ಟೂರ್ನಿಯ ಅಗ್ರಸ್ಥಾನಿ ಗುಜರಾತ್ ಟೈಟನ್ಸ್ ವಿರುದ್ಧವಿದ್ದರೆ ಉಳಿದ ಮೂರು ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ವಿರುದ್ಧ ಸೆಣೆಸಾಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications