ಜಾಸ್ ಬಟ್ಲರ್ ಎದುರಾಳಿ ನಾಯಕನ ಲೆಕ್ಕಾಚಾರಗಳನ್ನೆಲ್ಲಾ ತಲೆಕೆಳಗಾಗಿ ಮಾಡಬಲ್ಲ: ಮಾರ್ನೆ ಮಾರ್ಕೆಲ್

ರಾಜಸ್ತಾನ್ ರಾಯಲ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಾಸ್ ಬಟ್ಲರ್ ಸಿಡಿಯಲು ಶುರು ಮಾಡಿದ್ರೆ, ಎದುರಾಳಿ ತಂಡದ ನಾಯಕನ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾಗುತ್ತವೆ ಎಂದು ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಮಾರ್ನೆ ಮಾರ್ಕೆಲ್ ಹೇಳಿದ್ದಾರೆ.
ಜಾಸ್ ಬಟ್ಲರ್ ವಿಶ್ವದ ಸ್ಪೋಟಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದು, ಐಪಿಎಲ್‌ನಲ್ಲಿ ರಾಜಸ್ತಾನ್ ರಾಯಲ್ಸ್ ಸ್ಟಾರ್ ಓಪನರ್ ಮೇಲೆ ಸಾಕಷ್ಟು ಭರವಸೆ ಇಟ್ಟುಕೊಂಡಿದೆ. ಈತ ಒಮ್ಮೆ ಲಯಕ್ಕೆ ಬಂದ್ರೆ ಎದುರಾಳಿ ನಾಯಕ ಯೋಜನೆಗಳು, ರಣತಂತ್ರ ಎಲ್ಲವೂ ಧ್ವಂಸವಾಗುತ್ತದೆ ಎಂದಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಜಾಸ್ ಬಟ್ಲರ್ ಭರ್ಜರಿ ಶತಕದ ಕುರಿತು ಮಾತನಾಡಿದ ಮಾರ್ಕೆಲ್, ''ಜಾಸ್ ದಿ ಬಾಸ್.. ಕೆಲವೊಮ್ಮೆ ಬೌಲರ್‌ಗಳೇ ಅರ್ಥ ಮಾಡಿಕೊಳ್ಳಬೇಕು, ಇಂದು ಆತನ ದಿನ ಮತ್ತು ಪ್ರದರ್ಶನವನ್ನ ಎಂಜಾಯ್ ಮಾಡಬೇಕು. ಇಲ್ಲವಾದಲ್ಲಿ ಆತನನ್ನ ಬಹುಬೇಗನೆ ಔಟ್ ಮಾಡಬೇಕು. ಕಳೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆತ ಅಸಾಧಾರಣ ಪ್ರದರ್ಶನ ನೀಡಿದ್ದಾನೆ. ಆತ ಮೈದಾನದ ಎಲ್ಲಾ ಮೂಲೆಗೆ ಚೆಂಡಿನ ದರ್ಶನ ಮಾಡಿಸಿದ್ದಾನೆ. ಆರಂಭದಲ್ಲಿ ಆತ ಸಮಯ ತೆಗೆದುಕೊಳ್ಳುತ್ತಾನೆ. ಪಿಚ್‌ನ ಬೌನ್ಸ್ ಕುರಿತಾಗಿ ಅರಿತ ಬಳಿಕ ಮೈದಾನದ ಎಲ್ಲಾ ಕಡೆಗೆ ಚೆಂಡನ್ನು ಬಾರಿಸುತ್ತಾರೆ. ಆನಂತರ ಅವನನ್ನ ಯಾರು ತಡೆಯಲು ಸಾಧ್ಯವಿಲ್ಲ'' ಎಂದು ಮಾರ್ನೆ ಮಾರ್ಕೆಲ್ ಹೇಳಿದ್ದಾರೆ.

ಇನ್ನು ಜಾಸ್ ಬಟ್ಲರ್ ಅನ್ನು ಔಟ್ ಮಾಡಲು ಯಾವ ರೀತಿಯ ಲೈನ್ ಅಂಡ್ ಲೆಂಥ್‌ನಲ್ಲಿ ಬೌಲಿಂಗ್ ಮಾಡಬೇಕು ಎಂದು ಕೇಳಿದ ಪ್ರಶ್ನೆಗೆ '' ಆತ ಅತ್ಯಂತ ಗುಣಮಟ್ಟದ ಆಟಗಾರನಾಗಿದ್ದು, ಎದುರಾಳಿ ಬೌಲರ್‌ಗಳ ಮೇಲೆ ಒತ್ತಡವನ್ನ ಹೇರುತ್ತಾನೆ. ಹೀಗಾಗಿ ಆತನನ್ನ ಬೇಗನೆ ಔಟ್ ಮಾಡದ ಹೊರತು ಏನೂ ಮಾಡಲು ಸಾಧ್ಯವಿಲ್ಲ. ಏಕೆಂದರೆ ಆತನಿಗೆ ಅವಕಾಶ ನೀಡಿದ್ರೆ, ಪಂದ್ಯದ ದಿಕ್ಕನೇ ಬದಲಾಯಿಸುವ ಸಾಮರ್ಥ್ಯ ಹೊಂದಿದ್ದು, ಎದುರಾಳಿ ನಾಯಕನ ಲೆಕ್ಕಾಚಾರಗಳು ಉಲ್ಟಾ ಹೊಡೆಯುತ್ತವೆ'' ಎಂದು ಮಾರ್ನೆ ಮಾರ್ಕೆಲ್ ಹೇಳಿದ್ದಾರೆ.
ಜಾಸ್ ಬಟ್ಲರ್ 2 ಪಂದ್ಯಗಳಲ್ಲಿ 67.50 ಬ್ಯಾಟಿಂಗ್ ಸರಾಸರಿಯಲ್ಲಿ 135ರನ್ ಕಲೆಹಾಕಿದ್ದು, ಒಂದು ಶತಕ ಸಹಿತ 14 ಬೌಂಡರಿ ಮತ್ತು 8 ಸಿಕ್ಸರ್ ಸಿಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications