
ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸಮೀಪಿಸುತ್ತಿದ್ದಂತೆ ಟೂರ್ನಿ ಕುರಿತಾಗಿ ಸಾಕಷ್ಟು ಚರ್ಚೆಗಳು ಆರಂಭವಾಗುತ್ತಿದ್ದು, ವಿವಿಧ ಫ್ರಾಂಚೈಸಿಗಳು ತಮ್ಮ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಭಿನ್ನ ವಿಭಿನ್ನವಾದ ಟ್ವೀಟ್ ಮಾಡುವ ಮೂಲಕ ಟೂರ್ನಿ ಕುರಿತು ಟೂರ್ನಿಗೆ ಮತ್ತಷ್ಟು ಕ್ರೇಜ್ ಹೆಚ್ಚಾಗುವಂತೆ ಮಾಡುತ್ತಿವೆ. ಅದರಲ್ಲಿಯೂ ಯಾವಾಗಲೂ ತಮಾಷೆಯ ಟ್ವೀಟ್‌ಗಳನ್ನು ಹೆಚ್ಚಾಗಿ ಮಾಡುವ ರಾಜಸ್ಥಾನ್ ರಾಯಲ್ಸ್ ಈ ಬಾರಿ ತಮ್ಮ ತಂಡದ ಪರ ಕಣಕ್ಕಿಳಿಯಲಿರುವ ಯುಜುವೇಂದ್ರ ಚಹಲ್ ಕೈಗೆ ತನ್ನ ಅಧಿಕೃತ ಟ್ಟಿಟರ್ ಖಾತೆಯನ್ನು ಒಂದು ದಿನದ ಮಟ್ಟಿಗೆ ನೀಡಿ ಚಹಲ್‌ಗೆ ತನಗೆ ಬೇಕಾದ ರೀತಿ ಟ್ವೀಟ್‌ಗಳನ್ನು ಅವಕಾಶ ನೀಡಿತ್ತು. ಹೀಗೆ ಯುಜುವೇಂದ್ರ ಚಹಲ್‌ಗೆ ತನ್ನ ಅಧಿಕೃತ ಟ್ವಿಟರ್ ಖಾತೆಯನ್ನು ನೀಡಿದ ರಾಜಸ್ಥಾನ್ ರಾಯಲ್ಸ್ ತಮ್ಮ ಖಾತೆಯನ್ನು ಚಹಲ್ ಹ್ಯಾಕ್ ಮಾಡಿದ್ದಾರೆ ಎಂದು ತಮಾಷೆಯ ಘೋಷಣೆಯನ್ನು ಹೊರಡಿಸಿತ್ತು.
ಹೀಗೆ ರಾಜಸ್ಥಾನ್ ರಾಯಲ್ಸ್ ಟ್ವಿಟರ್ ಖಾತೆಯನ್ನು ಉಪಯೋಗಿಸುವ ಅವಕಾಶ ಪಡೆದ ಯುಜುವೇಂದ್ರ ಚಹಲ್ ಹಲವಾರು ಟ್ವೀಟ್‌ಗಳನ್ನು ಮಾಡುವ ಮೂಲಕ ಟ್ವಿಟಿಗರಿಗೆ ಮನರಂಜನೆ ನೀಡಿದ್ದಾರೆ. ಅದರಲ್ಲಿಯೂ ಯುಜುವೇಂದ್ರ ಚಹಲ್ ತಾನು ಜೋಸ್ ಬಟ್ಲರ್ ಜೊತೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ಕುರಿತು ಮಾಡಿದ್ದ ಟ್ವೀಟ್ ಸಿಕ್ಕಾಪಟ್ಟ ವೈರಲ್ ಆಗಿದೆ. ತಾನು ಟೀಮ್ ಇಂಡಿಯಾ ಪರ ಬ್ಯಾಟಿಂಗ್ ಆಡುತ್ತಿದ್ದ ಫೋಟೋವನ್ನು ರಾಜಸ್ಥಾನ್ ರಾಯಲ್ಸ್ ಟ್ವಿಟರ್ ಖಾತೆಯ ಮೂಲಕ ಟ್ವೀಟ್ ಮಾಡಿರುವ ಯುಜುವೇಂದ್ರ ಚಹಲ್ ಈ ಫೋಟೋಗೆ ಹತ್ತು ಸಾವಿರ ರಿಟ್ವೀಟ್ ಯುಜುವೇಂದ್ರ ಚಹಲ್ ಜೋಸ್ ಬಟ್ಲರ್ ಜೊತೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ ಎಂದು ಬರೆದಿದ್ದರು. ಇನ್ನು ಈ ಟ್ವೀಟ್ ನೋಡಿದ ಜೋಸ್ ಬಟ್ಲರ್ ಮಾತನಾಡದೇ ತಲೆ ಅಲ್ಲಾಡಿಸುವ ಮೂಲಕ ಇದಕ್ಕೆ ತಾನು ಸಿದ್ಧನಿಲ್ಲ ಎಂಬುದನ್ನು ತಿಳಿಸಿದ್ದಾರೆ. ಜೋಸ್ ಬಟ್ಲರ್ ಯುಜುವೇಂದ್ರ ಚಹಲ್ ಟ್ವೀಟ್ ಕುರಿತು ನೀಡಿರುವ ಪ್ರತಿಕ್ರಿಯೆಯ ವಿಡಿಯೋವನ್ನು ರಾಜಸ್ಥಾನ್ ರಾಯಲ್ಸ್ ಹಂಚಿಕೊಂಡಿದ್ದು ಈ ವಿಡಿಯೋವನ್ನು ನೀವು ಈ ಕೆಳಗೆ ಕಾಣಬಹುದು.
ರಾಜಸ್ಥಾನ್ ರಾಯಲ್ಸ್ ಸಂಪೂರ್ಣ ತಂಡ: ಸಂಜು ಸ್ಯಾಮ್ಸನ್ ( ನಾಯಕ ), ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಟ್ರೆಂಟ್ ಬೌಲ್ಟ್, ರವಿಚಂದ್ರನ್ ಅಶ್ವಿನ್, ಶಿಮ್ರೋನ್ ಹೆಟ್ಮೆಯರ್, ದೇವದತ್ ಪಡಿಕ್ಕಲ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಹಾಲ್, ರಿಯಾನ್ ಪರಾಗ್, ಕೆಸಿ ಕಾರಿಯಪ್ಪ, ನವದೀಪ್ ಸೈನಿ, ಓಬೇದ್ ಮೆಕಾಯ್, ಅರುಣಯ್ ಸಿಂಗ್, ಕುಲದೀಪ್ ಸೇನ್, ಕರುಣ್ ಜುರೆ, ಕರುಣ್ ಜುರೆ, , ತೇಜಸ್ ಬರೋಕಾ, ಕುಲದೀಪ್ ಯಾದವ್, ಶುಭಂ ಗರ್ವಾಲ್, ಡೇರಿಲ್ ಮಿಚೆಲ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ನಾಥನ್ ಕೌಲ್ಟರ್-ನೈಲ್, ಜೇಮ್ಸ್ ನೀಶಮ್