ಐಪಿಎಲ್ ಹರಾಜು 2022: ಅದೃಷ್ಟ ಪರೀಕ್ಷೆಗೆ ಇಳಿದ 28 ಕನ್ನಡಿಗ ಆಟಗಾರರು: ಯಾರ ಮೂಲಬೆಲೆ ಎಷ್ಟು?

ಐಪಿಎಲ್ 2022ರ ಆವೃತ್ತಿಗೆ ಮುನ್ನ ನಡೆಯಲಿರುವ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿ ಒಟ್ಟು 590 ಆಟಗಾರರು ಈ ಮೆಗಾ ಹರಾಜುನಲ್ಲಿ ಭಾಗುಯಾಗುತ್ತಿದ್ದಾರೆ. ಒಟ್ಟು ವಿಶ್ವಾದ್ಯಂತ ಸಾವಿರಕ್ಕೂ ಅಧಿಕ ಆಟಗಾರರು ಈ ಹರಾಜಿನಲ್ಲಿ ಆರಂಭದಲ್ಲಿ ಹೆಸರನ್ನು ನೊಂದಾಯಿಸಿದ್ದರು. ಈ ಪಟ್ಟಿಯನ್ನು ಪರಿಷ್ಕರಿಸಿರುವ ಆರ್‌ಸಿಬಿ ಅಂತಿಮ ಹರಾಜಿಗೆ 590 ಆಟಗಾರರನ್ನು ಉಳಿಸಿಕೊಂಡಿದೆ. ಈ 590 ಆಟಗಾರರ ಮಧ್ಯೆ ಶನಿವಾರ ಹಾಗೂ ಭಾನುವಾರ ಹರಾಜು ಪ್ರಕ್ರಿಯೆ ನಡೆಯಲಿದೆ.
ಇನ್ನು ಬಿಸಿಸಿಐ ಬಿಡುಗಡೆ ಮಾಡಿರುವ 590 ಆಟಗಾರರ ಪರಿಷ್ಕೃತ ಪಟ್ಟಿಯಲ್ಲ ಕನ್ನಡಿಗ ಆಟಗಾರರು ಕೂಡ ಉತ್ತಮ ಪ್ರಮಾಣದಲ್ಲಿ ಅವಕಾಶವನ್ನು ಪಡೆದುಕೊಂಡಿದ್ದಾರೆ. 28 ಮಂದಿ ಕನ್ನಡಿಗ ಕ್ರಿಕೆಟಿಗರು ಈ ಹರಾಜು ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾದರೆ ಆ ಆಟಗಾರರು ಯಾರು? ಅವರ ಮೂರಬೆಲೆ ಎಷ್ಟು? ಮುಂದೆ ಓದಿ..

ಮೂಲ ಬೆಲೆ 2 ಕೋಟಿ; ಇಬ್ಬರು ಆಟಗಾರರು
ಐಪಿಎಲ್‌ನಲ್ಲಿ ಗರಿಷ್ಠ ಮೂಲಬೆಲೆಯ ಸ್ಲ್ಯಾಬ್ ಅಂದರೆ 2 ಕೋಟಿ ರೂಪಾಯಿ. ಈ ಎರಡು ಕೋಟಿ ಮೂಲ ಬೆಲೆಯ ಆಟಗಾರ ಪಟ್ಟಿಯಲ್ಲಿ ಇಬ್ಬರು ಕನ್ನಡಿಗರು ಕಾಣಿಸಿಕೊಂಡಿದ್ದಾರೆ. ಕಳೆದ ಐಪಿಎಲ್ ಆವೃತ್ತಿಯಲ್ಲಿ ಮಿಂಚಿರುವ ದೇವದತ್ ಪಡಿಕ್ಕಲ್ ಹಾಗೂ ಅನುಭವಿ ಆಟಗಾರ ರಾಬಿನ್ ಉತ್ತಪ್ಪ 2 ಕೋಟಿ ಮೂಲ ಬೆಲೆ ಹೊಂದಿರುವ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಮೂಲ ಬೆಲೆ 1 ಕೋಟಿ
ಮೂಲ ಬೆಲೆ 1 ಕೋಟಿ ರೂಪಾಯಿ ಹೊಂದಿರುವ ಆಟಗಾರರ ಪಟ್ಟಿಯಲ್ಲಿ ಕೂಡ ಇಬ್ಬರು ಕನ್ನಡಿಗ ಆಟಗಾರರು ಸ್ಥಾನವನ್ನು ಪಡೆದುಕೊಂಡಿದ್ದಾರೆ. ಐಪಿಎಲ್‌ನಲ್ಲಿ ಉತ್ತಮ ಬೇಡಿಕೆ ಹೊಂದಿದ್ದ ಮನೀಶ್ ಪಾಂಡೆ 1 ಕೋಟಿ ಮೂಲಬೆಲೆಯಲ್ಲಿ ತಮ್ಮ ಹೆಸರು ನೊಂದಾಯಿಸಿದ್ದರೆ ಯುವ ಆಟಗಾರ ಪ್ರಸಿದ್ಧ್ ಕೃಷ್ಣ ಕೂಡ 1 ಕೋಟಿ ರೂಪಾಯಿ ಮೂಲಬೆಲೆ ಹೊಂದಿರುವ ಮತ್ತೋರ್ವ ಆಟಗಾರನಾಗಿದ್ದಾರೆ.

ಮೂಲ ಬೆಲೆ 50 ಲಕ್ಷ ರೂಪಾಯಿ
ಮೂಲ ಬೆಲೆ 50 ಲಕ್ಷ ರೂಪಾಯಿ ಹೊಂದಿರುವ ಆಟಗಾರರ ಪಟ್ಟಿಯಲ್ಲಿ ಕೂಡ ಇಬ್ಬರು ಆಟಗಾರರು ಇದ್ದಾರೆ. ಕರ್ನಾಟಕ ತಂಡದ ಅನುಭವಿ ಆಟಗಾರರಾದ ಕೆ ಗೌತಮ್ ಹಾಗೂ ಕರುಣ್ ನಾಯರ್ 50 ಲಕ್ಷ ರೂಪಾಯಿ ಮೂಲ ಬೆಲೆ ಹೊಂದಿರುವ ಆಟಗಾರರ ಪಟ್ಟಿಯಲ್ಲಿದ್ದಾರೆ.

20 ಲಕ್ಷ ಮೂಲ ಬೆಲೆ
ಐಪಿಎಲ್ ಹರಾಜಿನಲ್ಲಿ ಕನಿಷ್ಟ ಮೂಲ ಬೆಲೆಯೆಂದರೆ ಅದು 20 ಲಕ್ಷ ರೂಪಾಯಿ. ಕರ್ನಾಟಕದ ಒಟ್ಟು 22 ಆಟಗಾರರ 20 ಲಕ್ಷ ಮೂಲ ಬೆಲೆಗೆ ಹೆಸರು ನೊಂದಾಯಿಸಿಕೊಂಡಿದ್ದಾರೆ. ಅಭಿನವ್ ಮನೋಹರ್, ಕೆಸಿ ಕಾರ್ಯಪ್ಪ, ಶ್ರೇಯಸ್ ಗೋಪಾಲ್, ಜೆ ಸುಜಿತ್, ರೋಹನ್ ಕದಂ, ಪ್ರವೀಣ್ ದುಬೆ, ಲವ್ನಿತ್ ಸಿಸೋಡಿಯಾ, ವೈಶಾಕ್ ವಿಜಯ್ ಕುಮಾರ್, ಅನೀಶ್ವರ್ ಗೌತಮ್, ಬಿಆರ್ ಶರತ್, ಕೆಎಲ್ ಶ್ರೀಜಿತ್, ಕುಶಾಲ್ ವಾಧ್ವಾನಿ, ಆರ್ ಸಮರ್ಥ್, ಶುಭಾಂಗ್ ಹೆಗ್ಡೆ, ರೋನಿತ್ ಮೋರೆ, ವಿದ್ಯಾಧರ್ ಪಾಟೀಲ್, ವಿ ಕೌಶಿಕ್, ಎಂ ವೆಂಕಟೇಶ್, ಅನಿರುದ್ಧ್ ಜೋಶಿ, ಎಂಬಿ ದರ್ಶನ್, ಮನೋಜ್ ಭಾಂಡಗೆಮ, ದಿಕ್ಷಾಂಶು ನೇಗಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications