IPL 2022: ಚೆನ್ನಾಗಿ ಆಡಿದ 11 ಆಟಗಾರರ ತಂಡ ರಚಿಸಿದ ಪೀಟರ್ಸನ್; ಡಿಕೆನೇ ಇಲ್ಲ, ಆರ್‌ಸಿಬಿಯ ಒಬ್ಬನಿಗೆ ಸ್ಥಾನ!

ಕಳೆದ ಭಾನುವಾರ ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳ ನಡುವಿನ ಫೈನಲ್ ಪಂದ್ಯದ ಮೂಲಕ ಕಳೆದೆರಡು ತಿಂಗಳುಗಳಿಂದ ನಡೆಯುತ್ತಿದ್ದ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ತೆರೆಬಿದ್ದಿದೆ. ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪದಾರ್ಪಣೆ ಮಾಡಿದ್ದ ಗುಜರಾತ್ ಟೈಟನ್ಸ್ ತನ್ನ ಚೊಚ್ಚಲ ಟೂರ್ನಿಯಲ್ಲಿಯೇ ಟ್ರೋಫಿ ಎತ್ತಿ ಹಿಡಿದು ಹೊಸ ಇತಿಹಾಸ ಬರೆದಿದೆ.
ಅದರಲ್ಲಿಯೂ ಗುಜರಾತ್ ಟೈಟನ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದ ಹಾರ್ದಿಕ್ ಪಾಂಡ್ಯ ಅದ್ಭುತವಾಗಿ ನಾಯಕತ್ವ ನಿರ್ವಹಿಸುವುದರ ಜೊತೆಗೆ ಓರ್ವ ಆಟಗಾರನಾಗಿ ಮಿಂಚಿದರು. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲಿಯೂ ಮಿಂಚಿದ ಪಾಂಡ್ಯ ಆಲ್ ರೌಂಡರ್ ಆಗಿ ಕಮ್‌ಬ್ಯಾಕ್ ಮಾಡಿದ್ದಾರೆ. ಈ ಮೂಲಕ ಟೂರ್ನಿಯ ಆರಂಭಕ್ಕೂ ಮುನ್ನವೇ ತನ್ನ ಪ್ರದರ್ಶನದ ಕುರಿತು ಟೀಕೆ ಮಾಡಿದ್ದವರಿಗೆ ಸರಿಯಾದ ಉತ್ತರ ನೀಡಿದ್ದಾರೆ. ಹೀಗೆ ಹಾರ್ದಿಕ್ ಪಾಂಡ್ಯ ಸೇರಿದಂತೆ ಹಲವಾರು ಅನುಭವಿ ಕ್ರಿಕೆಟಿಗರು ಮತ್ತು ಯುವ ಕ್ರಿಕೆಟಿಗರು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಿಂಚಿದ್ದು, ಟೀಮ್ ಇಂಡಿಯಾ ಆಯ್ಕೆಗಾರರ ಗಮನ ಸೆಳೆದಿದ್ದಾರೆ.
ಇನ್ನು ಹಲವು ಮಾಜಿ ಕ್ರಿಕೆಟಿಗರು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಿಂಚಿದ ಆಟಗಾರರನ್ನು ಆಯ್ದುಕೊಂಡು ತಂಡಗಳನ್ನು ರಚಿಸಿ ಉತ್ತಮ ತಂಡವೆಂದು ಪ್ರಕಟಿಸುತ್ತಿದ್ದಾರೆ. ಈಗಾಗಲೇ ಸಚಿನ್ ತೆಂಡೂಲ್ಕರ್, ಇರ್ಫಾನ್ ಪಠಾಣ್ ಸೇರಿದಂತೆ ಹಲವಾರು ಮಾಜಿ ಕ್ರಿಕೆಟಿಗರು ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಹನ್ನೊಂದು ಆಟಗಾರರನ್ನು ಆರಿಸಿ ತಂಡಗಳನ್ನು ರಚಿಸಿದ್ದು, ಈ ಸಾಲಿಗೆ ಇದೀಗ ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಸೇರಿಕೊಂಡಿದ್ದಾರೆ. ಕೆವಿನ್ ಪೀಟರ್ಸನ್ ತಾವು ರಚಿಸಿರುವ ತಂಡಕ್ಕೆ ಆರಿಸಿಕೊಂಡಿರುವ ಹನ್ನೊಂದು ಆಟಗಾರರ ವಿವರ ಈ ಕೆಳಕಂಡಂತಿದೆ.

ಕೆವಿನ್ ಪೀಟರ್ಸನ್ ರಚಿಸಿರುವ ತಂಡ
ಕೆವಿನ್ ಪೀಟರ್ಸನ್ ರಚಿಸಿರುವ ಟೂರ್ನಿಯಲ್ಲಿ ಉತ್ತಮ ಆಡವನ್ನಾಡಿದ ಹನ್ನೊಂದು ಆಟಗಾರರನ್ನೊಳಗೊಂಡ ತಂಡ: ಜೋಸ್ ಬಟ್ಲರ್, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಕೆಎಲ್ ರಾಹುಲ್, ಡೇವಿಡ್ ಮಿಲ್ಲರ್, ಹಾರ್ದಿಕ್ ಪಾಂಡ್ಯ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ರವಿಚಂದ್ರನ್ ಅಶ್ವಿನ್, ರಾಹುಲ್ ತೆವಾಟಿಯಾ, ಉಮ್ರಾನ್ ಮಲಿಕ್, ಯುಜ್ವೇಂದ್ರ ಚಾಹಲ್ ಮತ್ತು ಜೋಶ್ ಹ್ಯಾಜಲ್‌ವುಡ್.

ದಿನೇಶ್ ಕಾರ್ತಿಕ್‌ಗಿಲ್ಲ ಸ್ಥಾನ!
ಇನ್ನು ಕೆವಿನ್ ಪೀಟರ್ಸನ್ ರಚಿಸಿರುವ ಈ ತಂಡವನ್ನು ಕಂಡ ಹಲವು ಕ್ರಿಕೆಟ್ ಪ್ರೇಮಿಗಳು ಕೇಳುತ್ತಿರುವ ಸಾಮಾನ್ಯ ಪ್ರಶ್ನೆ ದಿನೇಶ್ ಕಾರ್ತಿಕ್ ಎಲ್ಲಿ ಎನ್ನುವುದು. ಟೂರ್ನಿಯಲ್ಲಿ ಶೂನ್ಯದೊಂದಿಗೆ ಆರಂಭ ಮಾಡಿದ್ದ ದಿನೇಶ್ ಕಾರ್ತಿಕ್ ಉತ್ತಮ ಪ್ರದರ್ಶನ ನೀಡಿ ಅಬ್ಬರಿಸಿ ಆರ್‌ಸಿಬಿಯ ಹಲವು ಪಂದ್ಯಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಹೀಗೆ ಉತ್ತಮ ಪ್ರದರ್ಶನ ನೀಡಿ ಮಿಂಚಿದ ದಿನೇಶ್ ಕಾರ್ತಿಕ್ ಮತ್ತೆ ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇಂಥ ಆಟಗಾರನನ್ನು ಐಪಿಎಲ್ ಉತ್ತಮ ಆಟಗಾರರ ತಂಡದಿಂದ ಹೇಗೆ ಕೈಬಿಟ್ಟಿದ್ದೀರ ಎಂದು ಪೀಟರ್ಸನ್‌ಗೆ ಪ್ರಶ್ನೆಗಳು ಎದುರಾಗಿವೆ.

ವನಿಂದು ಹಸರಂಗ, ಶಮಿಯ ಕಡೆಗಣನೆ
ಇನ್ನು ಈ ತಂಡದಲ್ಲಿ ಟೂರ್ನಿಯಲ್ಲಿ ಮಿಂಚಿದ ವನಿಂದು ಹಸರಂಗ ಮತ್ತು ಮೊಹಮ್ಮದ್ ಶಮಿಯನ್ನು ಆರಿಸದೇ ಕಡೆಗಣಿಸಿದ್ದಾರೆ ಕೆವಿನ್ ಪೀಟರ್ಸನ್. ಟೂರ್ನಿಯಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ವನಿಂದು ಹಸರಂಗರನ್ನು ಕೈಬಿಟ್ಟಿರುವ ಪೀಟರ್ಸನ್ ರಶೀದ್ ಖಾನ್‌ರನ್ನೂ ಕೂಡ ಆರಿಸಿಲ್ಲ. ಇವರ ಬದಲಾಗಿ ರವಿಚಂದ್ರನ್ ಅಶ್ವಿನ್ ಅವರನ್ನು ಆರಿಸಿದ್ದು, ಮೊದಮ್ಮದ್ ಶಮಿಯನ್ನೂ ಸಹ ಪೀಟರ್ಸನ್ ಆರಿಸದೇ ಕಡೆಗಣಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications