For Quick Alerts
ALLOW NOTIFICATIONS  
For Daily Alerts
 

IPL 2022: ಐಪಿಎಲ್‌ನಲ್ಲಿ ವೇಗದ ಅರ್ಧಶತಕ ದಾಖಲಿಸಿದ ಪ್ಯಾಟ್ ಕಮಿನ್ಸ್, KL ರಾಹುಲ್ ದಾಖಲೆ ಪುಡಿ

Pat cummins

ಪುಣೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2022ನೇ ಸೀಸನ್‌ನ 14ನೇ ಪಂದ್ಯದಲ್ಲಿ ಕೆಕೆಆರ್ ಆಲ್‌ರೌಂಡರ್ ಪ್ಯಾಟ್ ಕಮಿನ್ಸ್‌ ಅಬ್ಬರದ ಬ್ಯಾಟಿಂಗ್‌ಗೆ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಚಿಂದಿಯಾಗಿದ್ದಾರೆ.

162 ರನ್‌ಗಳ ಗುರಿ ಬೆನ್ನತ್ತಿದ ಕೆಕೆಆರ್ ಪರ ವೆಂಕಟೇಶ್ ಅಯ್ಯರ್ ಅಮೋಘ ಅರ್ಧಶತಕ ಜೊತೆಗೆ ಕೆಳಕ್ರಮಾಂಕದಲ್ಲಿ ಆಲ್‌ರೌಂಡರ್‌ ಪ್ಯಾಟ್‌ ಕಮಿನ್ಸ್‌ ಸಿಡಿಲಬ್ಬರದ ಬ್ಯಾಟಿಂಗ್‌ಗೆ ಮುಂಬೈ ಸಾಕ್ಷಿಯಾಗಿದೆ. ಕೇವಲ 14 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ ಪ್ಯಾಟ್‌ ಕಮಿನ್ಸ್‌ ಇನ್ನೂ ನಾಲ್ಕು ಓವರ್‌ಗಳು ಬಾಕಿ ಇರುವಂತೆಯೇ ಕೆಕೆಆರ್‌ಗೆ ಗೆಲುವು ತಂದುಕೊಟ್ಟಿದ್ದಾರೆ.

ಡೇನಿಯಲ್ ಸ್ಯಾಮ್ಸ್ 16ನೇ ಓವರ್‌ನಲ್ಲಿ ಬೌಲಿಂಗ್‌ನಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಪ್ಯಾಟ್ ಕಮಿನ್ಸ್‌ ಒಂದೇ ಓವರ್‌ನಲ್ಲಿ ಮೂರು ಸಿಕ್ಸರ್‌, ಎರಡು ಬೌಂಡರಿ ಸಿಡಿಸಿದ್ರು( 6, 4, 6, 6, 2, 4, 6 ) ಇವರ ಅಬ್ಬರಕ್ಕೆ ಎದುರಾಳಿ ಮುಂಬೈ ಶಾಕ್‌ಗೆ ಒಳಗಾಗಿದೆ.

ಈ ಅಬ್ಬರದ ಗೆಲುವಿನೊಂದಿಗೆ ಪ್ಯಾಟ್ ಕಮಿನ್ಸ್‌ ಐಪಿಎಲ್‌ನಲ್ಲಿ ವೇಗದ ಅರ್ಧಶತಕ ದಾಖಲಿಸಿದ್ದಾರೆ. ಕೇವಲ 14 ಎಸೆತಗಳಲ್ಲಿ 50 ಗಡಿ ಮುಟ್ಟಿದ ಕಮಿನ್ಸ್‌ ಐಪಿಎಲ್‌ನಲ್ಲಿ ವೇಗದ ಅರ್ಧಶತಕ ದಾಖಲಿಸಿದ್ದ ಕೆ.ಎಲ್ ರಾಹುಲ್ ದಾಖಲೆಯನ್ನ ಸರಿಗಟ್ಟಿದರು. ಅಂತಿಮವಾಗಿ 15 ಎಸೆತಗಳಲ್ಲಿ ಅಜೇಯ 56 ರನ್‌ ಕಲೆಹಾಕಿ ಅಬ್ಬರದ ಆಟವಾಡಿದ್ರು. ಕೆಕೆಆರ್ ಈ ಗೆಲುವಿನೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನಕ್ಕೇರಿದೆ.

KKR

ಐಪಿಎಲ್‌ನಲ್ಲಿ ವೇಗದ ಅರ್ಧಶತಕ ಸಿಡಿಸಿದವರ ಹೆಸರು ಮತ್ತು ಎದುರಿಸಿದ ಎಸೆತ ಈ ಕೆಳಗಿದೆ

(14) ಕೆ.ಎಲ್ ರಾಹುಲ್ vs ಡೆಲ್ಲಿ ಕ್ಯಾಪಿಟಲ್ಸ್‌, ಮೊಹಾಲಿ 2018
(14) ಪ್ಯಾಟ್ ಕಮಿನ್ಸ್‌ vs ಮುಂಬೈ ಇಂಡಿಯನ್ಸ್‌, ಪುಣೆ 2022
(15) ಯೂಸುಫ್ ಪಠಾಣ್ vs ಎಸ್‌ಆರ್‌ಎಚ್‌ , ಕೊಲ್ಕತ್ತಾ 2014
(15) ಸುನಿಲ್ ನರೇನ್ vs ಆರ್‌ಸಿಬಿ, ಬೆಂಗಳೂರು 2017

ಇನ್ನು 16ನೇ ಓವರ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ದಾಳಿಗಿಳಿದ ಡೇನಿಯಲ್ ಸ್ಯಾಮ್ಸ್‌ ಒಂದೇ ಓವರ್‌ನಲ್ಲಿ ಬರೋಬ್ಬರಿ 35 ರನ್ ಬಿಟ್ಟುಕೊಡುವ ಮೂಲಕ ದುಬಾರಿ ಬೌಲರ್ ಎನಿಸಿಕೊಂಡ್ರು.

ರೊಚ್ಚಿಗೆದ್ದ ಪ್ಯಾಟ್ ಕಮಿನ್ಸ್ ಮುಂದೆ ಮಂಡಿಯೂರಿದ ಮುಂಬೈ ಇಂಡಿಯನ್ಸ್ | Oneindia Kannada

ಐಪಿಎಲ್‌ನಲ್ಲಿ ಒಂದು ಓವರ್‌ನಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಬೌಲರ್ಸ್
37 ಪಿ ಪರಮೇಶ್ವರನ್ vs ಆರ್‌ಸಿಬಿ, ಬೆಂಗಳೂರು 2011
37 ಹರ್ಷಲ್ ಪಟೇಲ್ vs ಸಿಎಸ್‌ಕೆ, ಮುಂಬೈ WS 2021
35 ಡೇನಿಯಲ್ ಸ್ಯಾಮ್ಸ್ vs ಕೆಕೆಆರ್, ಪುಣೆ 2022
33 ರವಿ ಬೋಪಾರ vs ಕೆಕೆಆರ್, ಕೋಲ್ಕತ್ತಾ 2010
33 ಪರ್ವಿಂದರ್ ಅವಾನಾ vs ಸಿಎಸ್‌ಕೆ, ಮುಂಬೈ WS 2014

Story first published: Thursday, April 7, 2022, 9:55 [IST]
Other articles published on Apr 7, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+