For Quick Alerts
ALLOW NOTIFICATIONS  
For Daily Alerts
 

ರಾಜಸ್ತಾನ್ ರಾಯಲ್ಸ್‌ಗೆ ಬೌಲಿಂಗ್ ಕೋಚ್ ಆಗಿ ಆಯ್ಕೆಗೊಂಡ ಲಸಿತ್ ಮಾಲಿಂಗ

Lasith malinga

ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಬ್ಯಾಟ್ಸ್‌ಮನ್‌ಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದ ಲಸಿತ್ ಮಾಲಿಂಗ ಐಪಿಎಲ್‌ಗೆ ಗುಡ್‌ಬೈ ಹೇಳಿದ ಮೇಲೆ ಇದೀಗ ಮತ್ತೆ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಆದ್ರೆ ಈ ಬಾರಿ ಆಟಗಾರರಾಗಿ ಬದಲು ತರಬೇತುದಾರರಾಗಿ ನೋಡುವ ಅವಕಾಶ ಲಭಿಸಿದೆ.

ಶ್ರೀಲಂಕಾದ ದಿಗ್ಗಜ ಬೌಲರ್ ಮಾಲಿಂಗ ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್‌ನಲ್ಲಿ ರಾಜಸ್ತಾನ್ ರಾಯಲ್ಸ್ ಪರ ವೇಗದ ಬೌಲಿಂಗ್ ತರಬೇತುದಾರರಾಗಿ ಆಯ್ಕೆಗೊಂಡಿದ್ದಾರೆ.

ಐಪಿಎಲ್‌ ವೃತ್ತಿಬದುಕಿನಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನವಾಗಿದ್ದ ಬಲಗೈ ವೇಗದ ಬೌಲರ್‌ ಲಸಿತ್‌ ಮಾಲಿಂಗ, ಆಡಿದ 122 ಪಂದ್ಯಗಳಿಂದ ದಾಖಲೆಯ 170 ವಿಕೆಟ್‌ಗಳನ್ನು ಪಡೆದಿದ್ದಾರೆ. ತಮ್ಮ ನಿಖರ ಹಾಗೂ ಅಪಾಯಕಾರಿ ಯಾರ್ಕರ್‌ಗಳ ಮೂಲಕ ಬ್ಯಾಟ್ಸ್‌ಮನ್‌ಗಳ ನಿದ್ರೆ ಕೆಡಿಸಿದ್ದರು. ಹೀಗಾಗಿ ಲಸಿತ್‌ ಆಗಮನದಿಂದ ರಾಜಸ್ಥಾನ್‌ ತಂಡದ ಬಲ ಹೆಚ್ಚಿದೆ.

ಮಾರ್ಚ್‌ 26ರಿಂದ ಆರಂಭಗೊಳ್ಳಲಿರುವ ಐಪಿಎಲ್ 15ನೇ ಸೀಸನ್‌ನಲ್ಲಿ ಲಸಿತ್‌ ಮಾಲಿಂಗ ಅವರನ್ನು ತಂಡದ ಬೌಲಿಂಗ್‌ ಕೋಚ್‌ ಆಗಿ ಆಯ್ಕೆಮಾಡಿರುವುದಾಗಿ ರಾಜಸ್ಥಾನ್‌ ರಾಯಲ್ಸ್‌ ತಂಡ ಸಾಮಾಜಿಕ ಜಾಲತಾಣದ ಮೂಲಕ ಘೋಷಿಸಿದೆ.

ರಾಜಸ್ತಾನ್ ರಾಯಲ್ಸ್ ಸ್ಕ್ವಾಡ್
ಸಂಜು ಸ್ಯಾಮ್ಸನ್ (ನಾಯಕ/ವಿಕೆಟ್‌ಕೀಪರ್‌), ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್ (ವಿಕೆಟ್‌ಕೀಪರ್‌), ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮಾಯೆರ್, ಪ್ರಸಿದ್ದ ಕೃಷ್ಣ, ಯುಜವೇಂದ್ರ ಚಹಾಲ್, ರಿಯಾನ್ ಪರಾಗ್, ಕೆಸಿ ಕಾರಿಯಪ್ಪ, ನವದೀಪ್ ಸೈನಿ, ಓಬೆಡ್‌ ಮೆಕಾಯ್, ಅನುನಯ್ ಸಿಂಗ್, ಕುಲ್ದೀಪ್ ಸೇನ್, ಕರುಣ್ ನಾಯರ್‌, ಧ್ರುವ್ ಜುರೆಲ್, ತೇಜಸ್ ಬರೋಕ, ಕುಲ್ದೀಪ್ ಯಾದವ್, ಶುಭಂ ಗರ್ವಾಲ್, ಜೇಮ್ಸ್ ನೀಶಮ್, ನೇಥನ್ ಕೌಲ್ಟರ್-ನೈಲ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಡ್ಯಾರಿಲ್ ಮಿಚೆಲ್.

Rohit Sharma ಬಗ್ಗೆ Ashwin ಹೇಳಿದ್ದೇನು? | Oneindia Kannada

Story first published: Friday, March 11, 2022, 17:35 [IST]
Other articles published on Mar 11, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+