IPL 2022: ಅತಿಹೆಚ್ಚು ಡಾಟ್ ಬಾಲ್ ಎಸೆದ 5 ಬೌಲರ್‌ಗಳ ಪಟ್ಟಿ; 200 ಡಾಟ್ ಎಸೆದ ಏಕೈಕ ಬೌಲರ್ ಈತ!

ಮೇ 29ರ ಭಾನುವಾರದಂದು ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ ಲೀಗ್ ಟೂರ್ನಿಗೆ ತೆರೆ ಎಳೆದಿದೆ. ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವಿನ ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ತನ್ನ ಮೊದಲ ಐಪಿಎಲ್ ಆವೃತ್ತಿಯಲ್ಲಿಯೇ ಟ್ರೋಫಿಯನ್ನು ಎತ್ತಿ ಹಿಡಿಯಿತು.
ಇನ್ನು ಈ ಬಾರಿಯ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಎರಡು ನೂತನ ತಂಡಗಳು ಪದಾರ್ಪಣೆ ಮಾಡಿದ ಕಾರಣ ಪಂದ್ಯಗಳ ಸಂಖ್ಯೆ ಹೆಚ್ಚಾಗಿದ್ದು, ಇದರ ಜೊತೆಗೆ ಟೂರ್ನಿಯಲ್ಲಿ ಸಿಕ್ಸರ್, ಫೋರ್, ವಿಕೆಟ್ ಹಾಗೂ ಇತರೆ ಅಂಕಿಅಂಶಗಳ ಸಂಖ್ಯೆಯೂ ಹೆಚ್ಚಾಗಿವೆ. ಹೌದು, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಹಿಂದಿನ ಯಾವುದೇ ಆವೃತ್ತಿಯಲ್ಲಿಯೂ ದಾಖಲಾಗದಷ್ಟು ಸಿಕ್ಸರ್ ದಾಖಲಾಗಿದ್ದು, ಉಳಿದ ಅಂಶಗಳಲ್ಲಿಯೂ ಸಹ ಹೆಚ್ಚಳ ಕಂಡುಬಂದಿದೆ.
ಇನ್ನು ಡಾಟ್ ಬಾಲ್‌ನಲ್ಲಿಯೂ ಸಹ ಈ ಬಾರಿಯ ಟೂರ್ನಿಯಲ್ಲಿ ಹೆಚ್ಚು ಗಣನೀಯ ಏರಿಕೆ ಕಂಡಿದ್ದು, ಐಪಿಎಲ್ ಇತಿಹಾಸದಲ್ಲಿಯೇ ಬೌಲರ್ ಓರ್ವನಿಂದ ಅತಿಹೆಚ್ಚು ಡಾಟ್ ಬಾಲ್ ದಾಖಲಾದ ಎರಡನೇ ಟೂರ್ನಿ ಎನಿಸಿಕೊಂಡಿದೆ. ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಬೌಲರ್ ಓರ್ವ 200 ಡಾಟ್ ಬಾಲ್ ಎಸೆದ ಸಾಧನೆ ಮಾಡಿದ್ದು, ಇದರ ವಿವರ ಮತ್ತು ಟೂರ್ನಿಯಲ್ಲಿ ಅತಿಹೆಚ್ಚು ಡಾಟ್ ಬಾಲ್‌ಗಳನ್ನನು ಎಸೆದ ಐವರು ಬೌಲರ್‌ಗಳ ಪಟ್ಟಿ ಈ ಕೆಳಕಂಡಂತಿದೆ ಓದಿ..

ಅತಿಹೆಚ್ಚು ಡಾಟ್ ಬಾಲ್ ಎಸೆದ ಐವರು ಬೌಲರ್‌ಗಳು
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅತಿಹೆಚ್ಚು ಡಾಟ್ ಬಾಲ್ ಎಸೆದ ಐವರು ಬೌಲರ್‌ಗಳ ಪಟ್ಟಿ ಇಲ್ಲಿದೆ
1. ಪ್ರಸಿದ್ಧ್ ಕೃಷ್ಣ - 200 ಡಾಟ್ ಎಸೆತಗಳು
2. ಟ್ರೆಂಟ್ ಬೌಲ್ಟ್ - 176 ಡಾಟ್ ಎಸೆತಗಳು
3. ಮೊಹಮ್ಮದ್ ಶಮಿ - 172 ಡಾಟ್ ಎಸೆತಗಳು
4. ಉಮೇಶ್ ಯಾದವ್ - 143 ಡಾಟ್ ಎಸೆತಗಳು
5. ವನಿಂದು ಹಸರಂಗ - 143 ಡಾಟ್ ಎಸೆತಗಳು

ಅತಿಹೆಚ್ಚು ಡಾಟ್ ಬಾಲ್ ಎಸೆದ ಕನ್ನಡಿಗ
ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 17 ಪಂದ್ಯಗಳನ್ನಾಡಿದ ರಾಜಸ್ಥಾನ್ ರಾಯಲ್ಸ್ ತಂಡದ ಬೌಲರ್ ಪ್ರಸಿದ್ಧ್ ಕೃಷ್ಣ 200 ಡಾಟ್ ಎಸೆತಗಳನ್ನು ಹಾಕಿ ದಾಖಲೆ ಬರೆದಿದ್ದಾರೆ. ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇದು ಬೌಲರ್ ಓರ್ವ ಮಾಡಿದ ಅತಿಹೆಚ್ಚು ಡಾಟ್ ಬಾಲ್ಸ್ ಆಗಿದ್ದು, ಐಪಿಎಲ್ ಇತಿಹಾಸದಲ್ಲಿ ಇದು ಬೌಲರ್ ಓರ್ವ ಮಾಡಿದ ಎರಡನೇ ಅತಿ ಹೆಚ್ಚು ಡಾಟ್ ಬಾಲ್ ಸಂಖ್ಯೆ ಆಗಿದೆ. ಇನ್ನು ಈ ಬಾರಿಯ ಟೂರ್ನಿಯಲ್ಲಿ 66.3 ಓವರ್ ಬೌಲಿಂಗ್ ಮಾಡಿದ ಪ್ರಸಿದ್ಧ್ ಕೃಷ್ಣ 551 ರನ್ ನೀಡಿ 19 ವಿಕೆಟ್ ಪಡೆದು 200 ಡಾಟ್ ಬಾಲ್ ಎಸೆದಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಪರ ವನಿಂದು ಹಸರಂಗ ಟಾಪ್
ಇನ್ನು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅತಿಹೆಚ್ಚು ಡಾಟ್ ಬಾಲ್ ಎಸೆದ ಆಟಗಾರರ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವನಿಂದು ಹಸರಂಗ ಐದನೇ ಸ್ಥಾನದಲ್ಲಿದ್ದಾರೆ. ಟೂರ್ನಿಯಲ್ಲಿ ಒಟ್ಟು 16 ಪಂದ್ಯಗಳನ್ನು ಆಡಿದ್ದು 57 ಓವರ್ ಬೌಲಿಂಗ್ ಮಾಡಿ 430 ರನ್ ನೀಡಿ 26 ವಿಕೆಟ್ ಪಡೆದು 143 ಡಾಟ್ ಬಾಲ್ ಎಸೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications