For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ಹ್ಯಾಟ್ರಿಕ್ ಪಡೆದಿದ್ದಾರೆ 17 ಬೌಲರ್‌ಗಳು: ಈ ಪೈಕಿ ಅತಿಹೆಚ್ಚು ಹ್ಯಾಟ್ರಿಕ್ ಪಡೆದ ಐವರು ಯಾರು ಗೊತ್ತಾ?

IPL 2022: List of 5 bowlers with most hat tricks in the IPL history

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಈ ಬಾರಿಯ ಟೂರ್ನಿ ಇದೇ ಮಾರ್ಚ್ 26ರಂದು ಶುರುವಾಗಲಿದೆ. ಇನ್ನು ಟೂರ್ನಿಯ ಚೊಚ್ಚಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ರನ್ನರ್ ಅಪ್ ಅಗಿ ಹೊರಹೊಮ್ಮಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸೆಣಸಾಡಲಿವೆ. ಹಾಗೂ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಒಟ್ಟು ಹತ್ತು ತಂಡಗಳು ಸೆಣಸಾಟ ನಡೆಸುತ್ತಿರುವುದು ವಿಶೇಷವಾಗಿರಲಿದ್ದು, ಟೂರ್ನಿಯಲ್ಲಿ ಹಲವು ದಾಖಲೆಗಳು ನಿರ್ಮಾಣವಾಗುವುದು ಖಚಿತ ಎನ್ನಬಹುದು.

ಇನ್ನು ಕ್ರಿಕೆಟ್‌ನಲ್ಲಿರುವ ಹಲವಾರು ದಾಖಲೆಗಳಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯುವುದು ಒಂದು ವಿಭಿನ್ನ ಹಾಗೂ ಅಪರೂಪದ್ದಾಗಿದ್ದು, ಎಲ್ಲಾ ಬೌಲಿಂಗ್ ಮಾಡುವ ಪ್ರತಿಯೊಬ್ಬ ಬೌಲರ್‌ ಕೂಡ ಈ ದಾಖಲೆ ಮಾಡಲಾಗುವುದಿಲ್ಲ. ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ವಿಚಾರಕ್ಕೆ ಬಂದರೆ ಇದುವರೆಗೂ ನಡೆದಿರುವ ಒಟ್ಟು 14 ಆವೃತ್ತಿಗಳಲ್ಲಿ ಕೇವಲ 17 ಬೌಲರ್‌ಗಳು ಮಾತ್ರ ಹ್ಯಾಟ್ರಿಕ್ ಸಾಧನೆ ಮಾಡಲು ಸಾಧ್ಯವಾಗಿದ್ದು, ಈ ಪೈಕಿ 15 ಬೌಲರ್‌ಗಳು ಕೇವಲ ಒಂದು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಇನ್ನು ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿರುವ 5 ಬೌಲರ್‌ಗಳ ಪಟ್ಟಿ ಈ ಕೆಳಕಂಡಂತಿದೆ ಓದಿ..

5. ಸ್ಯಾಮುವೆಲ್ ಬದ್ರಿ - 1 ಬಾರಿ

5. ಸ್ಯಾಮುವೆಲ್ ಬದ್ರಿ - 1 ಬಾರಿ

ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಬೌಲರ್‌ಗಳು ಕೇವಲ ಒಂದು ಬಾರಿ ಮಾತ್ರ ಹ್ಯಾಟ್ರಿಕ್ ವಿಕೆಟ್ ಪಡೆದಿರುವ ಕಾರಣ ಈ ಪಟ್ಟಿಯಲ್ಲಿ ಉತ್ತಮ ಅಂಕಿಅಂಶದೊಂದಿಗೆ ಹ್ಯಾಟ್ರಿಕ್ ಪಡೆದ ಬೌಲರ್‌ಗಳನ್ನೂ ಸಹ ಸೇರಿಸಲಾಗಿದೆ. ಈ ಆಧಾರದ ಮೇಲೆ ಸ್ಯಾಮುವೆಲ್ ಬದ್ರಿ ಈ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದುಕೊಂಡಿದ್ದಾರೆ. ವೆಸ್ಟ್ ಇಂಡೀಸ್ ಮೂಲದ ಈ ಬೌಲರ್ 2017ರ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಪಾರ್ಥಿವ್ ಪಟೇಲ್, ಮಿಚೆಲ್ ಮೆಕ್‌ಕ್ಲೆನಾಘನ್ ಮತ್ತು ರೋಹಿತ್ ಶರ್ಮಾರ ವಿಕೆಟ್‌ಗಳನ್ನು ಸಾಲು ಸಾಲಾಗಿ ಪಡೆದಿದ್ದರು. ಈ ಪಂದ್ಯದಲ್ಲಿ ಒಟ್ಟು 4 ವಿಕೆಟ್ ಪಡೆದ ಸ್ಯಾಮುವೆಲ್ ಬದ್ರಿ ಕೇವಲ 9 ರನ್ ನೀಡಿ ಉತ್ತಮ ಪ್ರದರ್ಶನ ತೋರಿದರು.

4. ಅಜಿತ್ ಚಂಡಿಲಾ - 1 ಬಾರಿ

4. ಅಜಿತ್ ಚಂಡಿಲಾ - 1 ಬಾರಿ

2012ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಕಣಕ್ಕಿಳಿದಿದ್ದ ಅಜಿತ್ ಚಂಡಿಲಾ ಪುಣೆ ವಾರಿಯರ್ಸ್ ತಂಡದ ಮೇಲಿನ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವಿಕೆಟ್ ಪಡೆದು ಒತ್ತಡ ಹೇರಿದ್ದರು. ಇನ್ನು ಮೊದಲ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ಪುಣೆ ವಾರಿಯರ್ಸ್‌ನ ಆರಂಭಿಕ ಆಟಗಾರರಾದ ಸೌರವ್ ಗಂಗೂಲಿ ಮತ್ತು ಜೆಸ್ಸಿ ರೈಡರ್ ವಿಕೆಟ್ ಪಡೆದಿದ್ದ ಅಜಿತ್ ಮೂರನೇ ಓವರ್‌ನ ಮೊದಲನೇ ಎಸೆತದಲ್ಲಿ ರಾಬಿನ್ ಉತ್ತಪ್ಪ ವಿಕೆಟ್ ಪಡೆದು ಹ್ಯಾಟ್ರಿಕ್ ಪೂರೈಸಿದರು. ಇನ್ನು ಈ ಪಂದ್ಯದಲ್ಲಿ ಒಟ್ಟು 4 ವಿಕೆಟ್ ಪಡೆದ ಅಜಿತ್ ಚಾಂಡಿಲಾ ಕೇವಲ 13 ರನ್ ನೀಡಿದ್ದರು.

3. ಮಖಾಯ ಎನ್‌ಟಿನಿ - 1 ಬಾರಿ

3. ಮಖಾಯ ಎನ್‌ಟಿನಿ - 1 ಬಾರಿ

ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಎನ್‌ಟಿನಿ ಕೂಡ ಒಂದು ಬಾರಿ ಐಪಿಲ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದಾರೆ. ಐಪಿಎಲ್ ಉದ್ಘಾಟನಾ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಕಣಕ್ಕಿಳಿದಿದ್ದ ಎನ್‌ಟಿನಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಸೌರವ್ ಗಂಗೂಲಿ, ದೆಬಬ್ರತಾ ದಾಸ್ ಮತ್ತು ಡೇವಿಡ್ ಹಸ್ಸಿ ಈ ಮೂವರ ವಿಕೆಟ್‌ಗಳನ್ನು ಸಾಲು ಸಾಲಾಗಿ ಪಡೆದು ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಈ ಪಂದ್ಯದಲ್ಲಿ ಒಟ್ಟು 4 ವಿಕೆಟ್ ಪಡೆದ ಎನ್‌ಟಿನಿ 21 ರನ್ ನೀಡಿದ್ದರು.

2. ಯುವರಾಜ್ ಸಿಂಗ್ - 2 ಬಾರಿ

2. ಯುವರಾಜ್ ಸಿಂಗ್ - 2 ಬಾರಿ

ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಯುವರಾಜ್ ಸಿಂಗ್ ಎರಡನೇ ಸ್ಥಾನದಲ್ಲಿದ್ದು ಒಟ್ಟು 2 ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. 2009ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಕಣಕ್ಕಿಳಿದಿದ್ದ ಯುವರಾಜ್ ಸಿಂಗ್ ಆ ಒಂದು ಆವೃತ್ತಿಯಲ್ಲಿಯೇ ಎರಡು ಪಂದ್ಯಗಳಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಆ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ 22 ರನ್ ನೀಡಿದ್ದ ಯುವರಾಜ್ ಸಿಂಗ್ ಒಟ್ಟು 3 ವಿಕೆಟ್ ಪಡೆದಿದ್ದರು ಹಾಗೂ ಅದೇ ಆವೃತ್ತಿಯಲ್ಲಿ ನಂತರ ನಡೆದ ಡೆಕ್ಕನ್ ಚಾರ್ಜರ್ಸ್ ವಿರುದ್ಧದ ಪಂದ್ಯದಲ್ಲಿ 13 ರನ್ ನೀಡಿ 3 ವಿಕೆಟ್ ಪಡೆದಿದ್ದರು.

ಪೃಥ್ವಿ ಶಾ ಯೋ ಯೋ ಟೆಸ್ಟ್ ನಲ್ಲಿ ವಿಫಲ , ಐಪಿಎಲ್ ಆಡ್ತಾರಾ? | Oneindia Kannada
1. ಅಮಿತ್ ಮಿಶ್ರಾ - 3 ಬಾರಿ

1. ಅಮಿತ್ ಮಿಶ್ರಾ - 3 ಬಾರಿ

2008, 2011 ಹಾಗು 2012 ಈ ಮೂರು ಆವೃತ್ತಿಗಳಲ್ಲಿ ಮೂರು ವಿಭಿನ್ನ ಫ್ರಾಂಚೈಸಿಗಳ ಪರ ಹ್ಯಾಟ್ರಿಕ್ ವಿಕೆಟ್ ಪಡೆದಿರುವ ಅಮಿತ್ ಮಿಶ್ರಾ ಐಪಿಎಲ್‌ನಲ್ಲಿ ಅತಿಹೆಚ್ಚು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. 2008ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಪರ ಕಣಕ್ಕಿಳಿದು ಡೆಕ್ಕನ್ ಚಾರ್ಜರ್ಸ್ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಇನ್ನು 2011ರ ಐಪಿಎಲ್ ಟೂರ್ನಿಯಲ್ಲಿ ಡೆಕ್ಕನ್ ಚಾರ್ಜರ್ಸ್ ಪರ ಕಣಕ್ಕಿಳಿದಿದ್ದ ಅಮಿತ್ ಮಿಶ್ರಾ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಹಾಗೂ 2012ರ ಐಪಿಎಲ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿದಿದ್ದ ಅಮಿತ್ ಮಿಶ್ರಾ ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಈ ಮೂಲಕ ಒಟ್ಟು 3 ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದಿರುವ ಅಮಿತ್ ಮಿಶ್ರಾ ಈ ದಾಖಲೆಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.

Story first published: Friday, March 18, 2022, 12:46 [IST]
Other articles published on Mar 18, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+