IPL 2022: ಟೂರ್ನಿಯಲ್ಲಿ 863 ರನ್ ಚಚ್ಚಿ ಅಬ್ಬರಿಸಿದ ಬಟ್ಲರ್‌ಗೆ ಪ್ರಶಸ್ತಿಗಳ ಸುರಿಮಳೆ; ಸಿಕ್ಕ ಒಟ್ಟು ಹಣವೆಷ್ಟು?

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭದಲ್ಲಿ ಸಾಲುಸಾಲು ಶತಕಗಳನ್ನು ಬಾರಿಸುವುದರ ಮೂಲಕ ಅಬ್ಬರಿಸಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ಜೋಸ್ ಬಟ್ಲರ್ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯನ್ನು ( 973 ರನ್ ) ಮುರಿದು ಹಾಕುವ ಭರವಸೆಯನ್ನು ಹುಟ್ಟುಹಾಕಿದ್ದರು.
ಆದರೆ ನಂತರ ಟೂರ್ನಿಯ ಮಧ್ಯದಲ್ಲಿ ಮಂಕಾದ ಜೋಸ್ ಬಟ್ಲರ್ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಟೂರ್ನಿಯಲ್ಲಿನ ತನ್ನ ನಾಲ್ಕನೇ ಶತಕ ಬಾರಿಸುವುದರ ಮೂಲಕ ಅಬ್ಬರಿಸಿ ಕಮ್ ಬ್ಯಾಕ್ ಮಾಡಿದರು. ಹೀಗೆ ಟೂರ್ನಿಯಲ್ಲಿ ನಾಲ್ಕನೇ ಶತಕ ಬಾರಿಸಿದ ಜೋಸ್ ಬಟ್ಲರ್ ಈ ಹಿಂದೆ ವಿರಾಟ್ ಕೊಹ್ಲಿ ನಿರ್ಮಿಸಿದ್ದ ಆವೃತ್ತಿಯೊಂದರಲ್ಲಿ ಅತಿಹೆಚ್ಚು ಶತಕ ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ಸರಿದೂಗಿಸಿದರು.
ಹೀಗೆ ವಿರಾಟ್ ಕೊಹ್ಲಿಯ ಶತಕದ ದಾಖಲೆಯನ್ನು ಸರಿದೂಗಿಸಿಕೊಂಡ ಜೋಸ್ ಬಟ್ಲರ್ ಕಳೆದ ಭಾನುವಾರ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದೊಡ್ಡ ಮಟ್ಟದ ಪ್ರದರ್ಶನ ನೀಡುವಲ್ಲಿ ಎಡವಿದರು. 35 ಎಸೆತಗಳಲ್ಲಿ 39 ರನ್ ಕಲೆಹಾಕಿದ ಜೋಸ್ ಬಟ್ಲರ್ ಆವೃತ್ತಿಯೊಂದರಲ್ಲಿ ಅತ್ಯಧಿಕ ಶತಕ ಬಾರಿಸಿದ ಆಟಗಾರ ಎಂಬ ದಾಖಲೆಯಲ್ಲಿ ಕೊಹ್ಲಿಯನ್ನು ಹಿಂದಿಕ್ಕುವಲ್ಲಿ ವಿಫಲರಾದರು ಮತ್ತು ಅತ್ಯಧಿಕ ರನ್ ದಾಖಲೆ ಮುರಿಯುವಲ್ಲಿಯೂ ಸಹ ಸೋತರು. ಆದರೂ ಸಹ ಟೂರ್ನಿ ಮುಕ್ತಾಯದ ವೇಳೆಗೆ 863 ರನ್ ಬಾರಿಸಿ ಈ ಬಾರಿಯ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ಎನಿಸಿಕೊಂಡಿರುವ ಜೋಸ್ ಬಟ್ಲರ್ ಆರೆಂಜ್ ಕ್ಯಾಪ್ ಜತೆಗೆ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಹೀಗೆ ಜೋಸ್ ಬಟ್ಲರ್ ಪಡೆದುಕೊಂಡಿರುವ ಪ್ರಶಸ್ತಿಗಳು ಮತ್ತು ಹಣದ ವಿವರ ಈ ಕೆಳಕಂಡಂತಿದೆ ನೋಡಿ..

ಜೋಸ್ ಬಟ್ಲರ್ ಗೆದ್ದ ಪ್ರಶಸ್ತಿಗಳು ಮತ್ತು ಹಣದ ಪಟ್ಟಿ
ಅನ್ ಅಕಾಡೆಮಿ ಲೆಟ್ಸ್ ಕ್ರ್ಯಾಕ್ ಇಟ್ ಸಿಕ್ಸ್ ಅವಾರ್ಡ್ ಆಫ್ ದಿ ಸೀಸನ್ - ಜೋಸ್ ಬಟ್ಲರ್ - 10 ಲಕ್ಷ
ಡ್ರೀಮ್ 11 ಗೇಮ್ ಚೇಂಜರ್ ಆಫ್ ದಿ ಸೀಸನ್ - ಜೋಸ್ ಬಟ್ಲರ್ - 10 ಲಕ್ಷ
ಕ್ರೆಡ್ ಪವರ್ ಪ್ಲೇಯರ್ ಆಫ್ ದಿ ಸೀಸನ್ - ಜೋಸ್ ಬಟ್ಲರ್ - 10 ಲಕ್ಷ
ರುಪೇ ಆನ್ ದಿ ಗೋ 4s ಆಫ್ ದಿ ಸೀಸನ್ - ಜೋಸ್ ಬಟ್ಲರ್ - 10 ಲಕ್ಷ
ಅರಾಮ್ಕೊ ಆರೆಂಜ್ ಕ್ಯಾಪ್ ವಿನ್ನರ್ ಆಫ್ ದಿ ಸೀಸನ್ - ಜೋಸ್ ಬಟ್ಲರ್ - 1೦ ಲಕ್ಷ
ಮೋಸ್ಟ್ ವ್ಯಾಲ್ಯುಯೆಬಲ್ ಪ್ಲೇಯರ್ ಆಫ್ ದಿ ಸೀಸನ್ - ಜೋಸ್ ಬಟ್ಲರ್ - 10 ಲಕ್ಷ

ಜೋಸ್ ಬಟ್ಲರ್ ಬಾಚಿದ ಒಟ್ಟು ಹಣವೆಷ್ಟು?
ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ತಾನು ನೀಡಿದ ಉತ್ತಮ ಪ್ರದರ್ಶನಕ್ಕಾಗಿ 6 ಪ್ರತ್ಯೇಕ ಪ್ರಶಸ್ತಿಗಳನ್ನು ಪಡೆದುಕೊಂಡ ಜೋಸ್ ಬಟ್ಲರ್ ಈ ಎಲ್ಲಾ ಪ್ರಶಸ್ತಿಗಳಿಂದ ಪಡೆದುಕೊಂಡದ್ದು 60 ಲಕ್ಷ ರೂಪಾಯಿಗಳು. ಈ ಮೂಲಕ ಬಟ್ಲರ್ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಅತಿ ಹೆಚ್ಚು ಪ್ರಶಸ್ತಿ ಹಾಗೂ ನಗದು ಬಹುಮಾನವನ್ನು ಪಡೆದುಕೊಂಡ ಆಟಗಾರ ಎನಿಸಿಕೊಂಡಿದ್ದಾರೆ.

ಟೂರ್ನಿಯಲ್ಲಿ ಬಟ್ಲರ್ ಅಂಕಿ ಅಂಶ
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ 17 ಪಂದ್ಯಗಳನ್ನಾಡಿದ ಜೋಸ್ ಬಟ್ಲರ್ 863 ರನ್ ಕಲೆಹಾಕಿದ್ದಾರೆ. ಆವೃತ್ತಿಯಲ್ಲಿ ಗರಿಷ್ಠ 116 ರನ್ ಕಲೆಹಾಕಿರುವ ಬಟ್ಲರ್ 4 ಶತಕಗಳು ಮತ್ತು 4 ಅರ್ಧಶತಕಗಳನ್ನು ಬಾರಿಸಿದ್ದಾರೆ. ಹಾಗೂ 45 ಸಿಕ್ಸರ್ ಚಚ್ಚಿರುವ ಜೋಸ್ ಬಟ್ಲರ್ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ಕೂಡ ಬರೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications