ಐಪಿಎಲ್‌ನಲ್ಲಿ ಈ ಬೃಹತ್ ದಾಖಲೆ ಮಾಡಿರುವುದು ರೋಹಿತ್ ಮತ್ತು ವಾರ್ನರ್ ಮಾತ್ರ; ಸನಿಹದಲ್ಲೇ ಇದ್ದಾರೆ ಕೊಹ್ಲಿ!

ಇಂಡಿಯನ್ ಪ್ರೀಮಿಯರ್ ಲೀಗ್, ಜಗತ್ತಿನ ಅತಿ ದೊಡ್ಡ ಹಾಗೂ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಟೂರ್ನಮೆಂಟ್ ಎಂದೇ ಖ್ಯಾತಿಯನ್ನು ಹೊಂದಿರುವಂತಹ ಯಶಸ್ವಿಯುತ ಕ್ರಿಕೆಟ್ ಲೀಗ್ ಆಗಿದೆ. ವರ್ಷದಿಂದ ವರ್ಷಕ್ಕೆ ದೊಡ್ಡ ಮಟ್ಟಕ್ಕೆ ಬೆಳೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಟಗಾರರ ಸಂಖ್ಯೆ ಹಾಗೂ ಆಟಗಾರರು ನಿರ್ಮಿಸುತ್ತಿರುವ ದಾಖಲೆಗಳ ಸಂಖ್ಯೆಯೂ ಕೂಡ ಬೆಳೆಯುತ್ತಿದೆ.
ಪ್ರತಿ ಆವೃತ್ತಿಯಲ್ಲಿಯೂ ಹೊಸ ದಾಖಲೆ, ಪ್ರತಿ ಪಂದ್ಯದಲ್ಲಿಯೂ ಹೊಸ ಮೈಲಿಗಲ್ಲುಗಳನ್ನು ಆಟಗಾರರು ನಿರ್ಮಿಸುತ್ತಿದ್ದಾರೆ. ವಿವಿಧ ದೇಶದ ಕ್ರಿಕೆಟಿಗರು ಈ ಐಪಿಎಲ್ ಟೂರ್ನಿಗಳಲ್ಲಿ ಭಾಗವಹಿಸುವುದರಿಂದ ಹಲವು ದಾಖಲೆಗಳಲ್ಲಿ ಭಾರತೀಯ ಕ್ರಿಕೆಟಿಗರು ಮತ್ತು ವಿದೇಶೀ ಕ್ರಿಕೆಟಿಗರ ನಡುವೆ ಪೈಪೋಟಿಗಳಿವೆ. ಭಾರತದ ಸ್ಫೋಟಕ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್ ಹಾಗೂ ಸುರೇಶ್ ರೈನಾ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ತಮ್ಮದೇ ಆದ ಹಲವು ವೈಯಕ್ತಿಕ ದಾಖಲೆ ಮತ್ತು ಮೈಲಿಗಲ್ಲುಗಳನ್ನು ಹೊಂದಿದ್ದರೆ, ವಿದೇಶಿ ಕ್ರಿಕೆಟಿಗರಾದ ಡೇವಿಡ್ ವಾರ್ನರ್, ಕೀರನ್ ಪೊಲಾರ್ಡ್, ಡ್ವೇನ್ ಬ್ರಾವೊ ಮತ್ತು ಕ್ರಿಸ್ ಗೇಲ್ ಕೂಡ ತಮ್ಮದೇ ಆದ ವಿಶಿಷ್ಟ ಐಪಿಎಲ್ ದಾಖಲೆಗಳನ್ನು ಹೊಂದಿದ್ದಾರೆ.
ಹೀಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಿರ್ಮಾಣವಾಗಿರುವ ಹಲವಾರು ವಿಶಿಷ್ಟ ದಾಖಲೆಗಳಲ್ಲೊಂದನ್ನು ರೋಹಿತ್ ಶರ್ಮಾ ಮತ್ತು ಡೇವಿಡ್ ವಾರ್ನರ್ ಮಾತ್ರ ಬರೆದಿದ್ದಾರೆ. ಹೌದು, ರೋಹಿತ್ ಶರ್ಮಾ ಮತ್ತು ಡೇವಿಡ್ ವಾರ್ನರ್ ಮಾತ್ರ ನಿರ್ಮಿಸಿರುವ ಆ ಐಪಿಎಲ್ ದಾಖಲೆ ಯಾವುದು ಮತ್ತು ಅದನ್ನು ಮಾಡಬಲ್ಲ ಇತರೆ ಆಟಗಾರರು ಯಾರು ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ ಓದಿ.

ಎದುರಾಳಿ ತಂಡವೊಂದರ ವಿರುದ್ಧ 1000 ರನ್
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ನಿರ್ದಿಷ್ಟ ಎದುರಾಳಿ ತಂಡವೊಂದರ ವಿರುದ್ಧ 100೦ಕ್ಕೂ ಹೆಚ್ಚು ರನ್ ದಾಖಲಿಸಿರುವ ಆಟಗಾರರು ಎಂಬ ದಾಖಲೆಯನ್ನು ರೋಹಿತ್ ಶರ್ಮಾ ಮತ್ತು ಡೇವಿಡ್ ವಾರ್ನರ್ ಈ ಇಬ್ಬರು ಆಟಗಾರರು ಮಾತ್ರ ಮಾಡಿದ್ದಾರೆ. ಈ ಬೃಹತ್ ದಾಖಲೆಯನ್ನು ಮೊದಲು ರೋಹಿತ್ ಶರ್ಮಾ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಮಾಡಿದ್ದರೆ ನಂತರ ಡೇವಿಡ್ ವಾರ್ನರ್ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಮಾಡಿದ್ದಾರೆ. ರೋಹಿತ್ ಶರ್ಮಾ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 1018 ರನ್ ದಾಖಲಿಸಿದ್ದರೆ, ಡೇವಿಡ್ ವಾರ್ನರ್ ಪಂಜಾಬ್ ಕಿಂಗ್ಸ್ ವಿರುದ್ಧ 1005 ರನ್ ದಾಖಲಿಸಿದ್ದಾರೆ.

ತಂಡವೊಂದರ ವಿರುದ್ಧ ಹೆಚ್ಚು ರನ್ ಬಾರಿಸಿರುವ ಟಾಪ್ 5 ಆಟಗಾರರು
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ನಿರ್ದಿಷ್ಟ ತಂಡವೊಂದರ ವಿರುದ್ಧ ಅತಿ ಹೆಚ್ಚು ರನ್ ಸಿಡಿಸಿರುವ ಟಾಪ್ 5 ಆಟಗಾರರ ಪಟ್ಟಿ ಈ ಕೆಳಕಂಡಂತಿದೆ
ರೋಹಿತ್ ಶರ್ಮಾ ಕೆಕೆಆರ್ ವಿರುದ್ಧ 1018 ರನ್
ಡೇವಿಡ್ ವಾರ್ನರ್ ಪಂಜಾಬ್ ಕಿಂಗ್ಸ್ ವಿರುದ್ಧ 1005 ರನ್
ಡೇವಿಡ್ ವಾರ್ನರ್ ಕೆಕೆಆರ್ ವಿರುದ್ಧ 976 ರನ್
ವಿರಾಟ್ ಕೊಹ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 949 ರನ್
ಶಿಖರ್ ಧವನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 941 ರನ್

ದಾಖಲೆ ಸನಿಹದಲ್ಲಿ ಕೊಹ್ಲಿ, ಧವನ್
ತಂಡವೊಂದರ ವಿರುದ್ಧ 1000 ರನ್ ಮೈಲಿಗಲ್ಲನ್ನು ನಿರ್ಮಿಸಿದ ದಾಖಲೆಯನ್ನು ಮಾಡುವ ಸನಿಹದಲ್ಲಿ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಇದ್ದಾರೆ. ಹಾಗೂ ಈ ದಾಖಲೆಯನ್ನು ಮಾಡಿದ ಎರಡನೇ ಆಟಗಾರ ಎನಿಸಿಕೊಂಡಿರುವ ಡೇವಿಡ್ ವಾರ್ನರ್ ಮತ್ತೊಮ್ಮೆ ಈ ದಾಖಲೆ ಬರೆಯುವ ಸನಿಹದಲ್ಲಿದ್ದಾರೆ. ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ 976 ರನ್ ಕಲೆಹಾಕಿರುವ ಡೇವಿಡ್ ವಾರ್ನರ್ ಇನ್ನೂ 24 ರನ್ ಬಾರಿಸಬೇಕಾದ ಅಗತ್ಯತೆಯಿದೆ. ಇನ್ನುಳಿದಂತೆ ವಿರಾಟ್ ಕೊಹ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 51 ರನ್ ಗಳಿಸಿದರೆ ಈ ದಾಖಲೆಗೆ ಪಾತ್ರರಾಗಲಿದ್ದಾರೆ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 59 ರನ್ ಕಲೆ ಹಾಕಿದರೆ ಶಿಖರ್ ಧವನ್ ಕೂಡ ಈ ದಾಖಲೆಯನ್ನು ಮಾಡಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications