
20ನೇ ಓವರ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿರುವ ಆಟಗಾರರ ಟಾಪ್ 5 ಪಟ್ಟಿ
1. ಎಂಎಸ್ ಧೋನಿ - ಚೆನ್ನೈ ಸೂಪರ್ ಕಿಂಗ್ಸ್ - 52 ಸಿಕ್ಸರ್
2. ಕೀರನ್ ಪೊಲಾರ್ಡ್ - ಮುಂಬೈ ಇಂಡಿಯನ್ಸ್ - 33 ಸಿಕ್ಸರ್
3. ರವೀಂದ್ರ ಜಡೇಜಾ - ಚೆನ್ನೈ ಸೂಪರ್ ಕಿಂಗ್ಸ್ - 26 ಸಿಕ್ಸರ್
4. ಹಾರ್ದಿಕ್ ಪಾಂಡ್ಯ - ಗುಜರಾತ್ ಟೈಟನ್ಸ್ - 25 ಸಿಕ್ಸರ್
5. ರೋಹಿತ್ ಶರ್ಮಾ - ಮುಂಬೈ ಇಂಡಿಯನ್ಸ್ - 23 ಸಿಕ್ಸರ್

ಎಂಎಸ್ ಧೋನಿ ಟಾಪ್ 1
ಹೀಗೆ ಐಪಿಎಲ್ ಇತಿಹಾಸದಲ್ಲಿ ಅಂತಿಮ ಓವರ್ನಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎಂ ಎಸ್ ಧೋನಿ ಅಗ್ರಸ್ಥಾನದಲ್ಲಿದ್ದಾರೆ. ಎಂಎಸ್ ಧೋನಿ ಇಪ್ಪತ್ತನೇ ಓವರ್ನಲ್ಲಿ 52 ಸಿಕ್ಸರ್ ಮತ್ತು 48 ಬೌಂಡರಿಗಳನ್ನೂ ಸಹ ಬಾರಿಸಿದ್ದಾರೆ.

ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರದ್ದೇ ಪಾರುಪತ್ಯ
ಮೊದಲೇ ಹೇಳಿದಂತೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮಂಕಾಗಿರಬಹುದು, ಆದರೆ ಆ ತಂಡದ ಆಟಗಾರರು ಈ ಹಿಂದೆ ನಿರ್ಮಿಸಿದ ಕೆಲ ದಾಖಲೆಗಳು ಈ ಆವೃತ್ತಿಯಲ್ಲಿಯಲ್ಲೂ ಯಾರಿಂದಲೂ ಮುರಿಯಲ್ಪಡದೇ ಹಾಗೆಯೇ ಉಳಿದುಕೊಂಡಿವೆ. ಮೇಲಿನ ಟಾಪ್ 5 ಪಟ್ಟಿಯನ್ನು ಗಮನಿಸಿದರೆ ಎಲ್ಲಾ ಆಟಗಾರರೂ ಸಹ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇರಿದವರಾಗಿದ್ದಾರೆ. ಹಾರ್ದಿಕ್ ಪಾಂಡ್ಯ ಈ ಬಾರಿ ಗುಜರಾತ್ ಟೈಟನ್ಸ್ ತಂಡದ ಪರ ಆಡಿರಬಹುದು, ಆದರೆ ಈ ದಾಖಲೆಯಲ್ಲಿ ತಮ್ಮ ಹೆಸರು ಬರುವ ಹಾಗೆ ಮಾಡಿದ್ದು ಮುಂಬೈ ಇಂಡಿಯನ್ಸ್ ತಂಡದ ಪರ ಆಡಿದ್ದಾಗಿನ ಅಂಕಿಅಂಶ.


Click it and Unblock the Notifications
