IPL 2022: ಡೆತ್ ಓವರ್‌ಗಳಲ್ಲಿ ಮೇಡನ್ ವಿಕೆಟ್ ಪಡೆದದ್ದು ಕೇವಲ ಐವರು; ಆರ್‌ಸಿಬಿ ಆಟಗಾರನ ದಾಖಲೆ!

ಕಳೆದ ಮೇ 29ರ ಭಾನುವಾರದಂದು ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳ ನಡುವೆ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ 7 ವಿಕೆಟ್‍ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ತನ್ನ ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಹೀಗೆ ಫೈನಲ್ ಪಂದ್ಯದ ಫಲಿತಾಂಶ ಹೊರಬಿದ್ದ ನಂತರ ಕಳೆದೆರಡು ತಿಂಗಳುಗಳಿಂದ ನಡೆಯುತ್ತಿದ್ದ ವಿಶ್ವದ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಲೀಗ್‌ನ ಹದಿನೈದನೇ ಆವೃತ್ತಿಗೆ ತೆರೆ ಬಿದ್ದಿತು. ಇನ್ನು ಈ ಬಾರಿಯ ಐಪಿಎಲ್ ಆವೃತ್ತಿ ಮುಕ್ತಾಯವಾದ ನಂತರ ಕ್ರಿಕೆಟ್ ಪ್ರೇಮಿಗಳು ಟೂರ್ನಿಯಲ್ಲಿ ದಾಖಲಾದ ಹಲವಾರು ದಾಖಲೆ, ಮೈಲಿಗಲ್ಲುಗಳು ಹಾಗೂ ಅಂಕಿ ಅಂಶಗಳ ಕುರಿತು ಚರ್ಚಿಸುತ್ತಿದ್ದಾರೆ.
ಅಂತಹ ಮೈಲಿಗಲ್ಲುಗಳ ಪೈಕಿ ಡೆತ್ ಓವರ್‌ಗಳಲ್ಲಿ ಮೇಡನ್ ಓವರ್ ಮಾಡಿ ವಿಕೆಟ್ ಕಬಳಿಸಿದ ಬೌಲರ್‌ಗಳ ಪಟ್ಟಿ ಕೂಡ ಸೇರಿದೆ. ಹೌದು, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ 5 ಬೌಲರ್‌ಗಳು ಮಾತ್ರ ಡೆತ್ ಓವರ್‌ಗಳಲ್ಲಿ ಮೇಡನ್ ವಿಕೆಟ್ ಪಡೆದು ಮಿಂಚಿದ್ದಾರೆ. ಅದರಲ್ಲಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ ಈ ಪಟ್ಟಿಯಲ್ಲಿರುವುದು ಸಾಕಷ್ಟು ವಿಶೇಷವಾಗಿದೆ. ಈ ಕುರಿತಾದ ಮತ್ತಷ್ಟು ವಿವರ ಮುಂದೆ ಇದೆ ಓದಿ.

ಟೂರ್ನಿಯ ಡೆತ್ ಓವರ್‌ಗಳಲ್ಲಿ ಮೇಡನ್ ವಿಕೆಟ್ ಪಡೆದ ಐವರ ಪಟ್ಟಿ
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯ ಡೆತ್ ಓವರ್‌ಗಳಲ್ಲಿ ಮೇಡನ್ ವಿಕೆಟ್ ಪಡೆದ ಐವರು ಬೌಲರ್‌ಗಳ ಪಟ್ಟಿ ಮತ್ತು ಅವರು ಪಡೆದ ವಿಕೆಟ್‍ಗಳ ಸಂಖ್ಯೆ ಕೆಳಕಂಡಂತಿದೆ.
ಜಸ್ ಪ್ರೀತ್ ಬೂಮ್ರಾ vs ಸನ್ ರೈಸರ್ಸ್ ಹೈದರಾಬಾದ್ - 3 ವಿಕೆಟ್‍ಗಳು
ಉಮ್ರಾನ್ ಮಲಿಕ್ vs ಪಂಜಾಬ್ ಕಿಂಗ್ಸ್ - 3 ವಿಕೆಟ್‍ಗಳು
ವನಿಂದು ಹಸರಂಗ vs ಸನ್ ರೈಸರ್ಸ್ ಹೈದರಾಬಾದ್ - 2 ವಿಕೆಟ್‍ಗಳು
ಭುವನೇಶ್ವರ್ ಕುಮಾರ್ vs ಮುಂಬೈ ಇಂಡಿಯನ್ಸ್ - 1 ವಿಕೆಟ್
ಪ್ರಸಿದ್ಧ್ ಕೃಷ್ಣ vs ಡೆಲ್ಲಿ ಕ್ಯಾಪಿಟಲ್ಸ್ - 1 ವಿಕೆಟ್

ಟೂರ್ನಿಯಲ್ಲಿ ಹೆಚ್ಚು ಡೆತ್ ಓವರ್ ಮೇಡನ್ ವಿಕೆಟ್ ಪಡೆದದ್ದು ಬುಮ್ರಾ
ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಜಸ್ಪ್ರೀತ್ ಬುಮ್ರಾ ಸಾಮಾನ್ಯ ಪ್ರದರ್ಶನವನ್ನು ನೀಡಿದ್ದರೂ ಸಹ ಡೆತ್ ಓವರ್‌ಗಳಲ್ಲಿ ಮೇಡನ್ ಓವರ್ ಮಾಡಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಬೂಮ್ರಾ ಮೇಡನ್ ಓವರ್ ಮಾಡಿ 3 ವಿಕೆಟ್‍ಗಳನ್ನು ಕಬಳಿಸಿದ್ದಾರೆ.

ವನಿಂದು ಹಸರಂಗ ದಾಖಲೆ
ಈ ಬಾರಿಯ ಐಪಿಎಲ್ ಆವೃತ್ತಿಯ ಡೆತ್ ಓವರ್‌ಗಳಲ್ಲಿ ಮೇಡನ್ ವಿಕೆಟ್ ಪಡೆದ ಐವರು ಬೌಲರ್‌ಗಳ ಪಟ್ಟಿಯಲ್ಲಿ ನಾಲ್ವರು ಆಟಗಾರರು ವೇಗಿಗಳಾಗಿದ್ದರೆ, ಇನ್ನುಳಿದ ಓರ್ವ ಬೌಲರ್ ಮಾತ್ರ ಸ್ಪಿನ್ನರ್. ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪಿನ್ ಬೌಲರ್ ವನಿಂದು ಹಸರಂಗ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಡೆತ್ ಓವರ್‌ಗಳಲ್ಲಿ ಮೇಡನ್ ವಿಕೆಟ್ ಪಡೆದ ಏಕೈಕ ಸ್ಪಿನ್ನರ್ ಎಂಬ ದಾಖಲೆ ಬರೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications