ಹರ್ಷಲ್, ರೋಹಿತ್ ಶರ್ಮಾ, ಚಹಲ್: ಐಪಿಎಲ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಎಲ್ಲಾ 18 ಬೌಲರ್‌ಗಳ ಪಟ್ಟಿ

ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ ಹದಿನೈದನೇ ಆವೃತ್ತಿಯಲ್ಲಿ ಟೀಮ್ ಇಂಡಿಯಾದಿಂದ ಅವಕಾಶ ವಂಚಿತರಾಗಿರುವ ಅನುಭವಿ ಕ್ರಿಕೆಟಿಗರು ಉತ್ತಮ ಪ್ರದರ್ಶನ ನೀಡುವುದರ ಮೂಲಕ ಮಿಂಚುತ್ತಿದ್ದಾರೆ. ಹೌದು, ಕಳಪೆ ಫಾರ್ಮ್‌ನಿಂದಾಗಿ ಟೀಮ್ ಇಂಡಿಯಾದಿಂದ ಹೊರಬಿದ್ದ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಅಂತಹ ಆಟಗಾರರನ್ನು ಆಯ್ಕೆಗಾರರು ಮರಳಿ ಟೀಮ್ ಇಂಡಿಯಾಗೆ ಆಯ್ಕೆ ಮಾಡುವ ಸಾಧ್ಯತೆಗಳು ಹೆಚ್ಚಿವೆ ಹಾಗೂ ಆಯ್ಕೆ ಮಾಡಿರುವ ಉದಾಹರಣೆಗಳೂ ಸಹ ಇವೆ. ಅದೇ ರೀತಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉಮೇಶ್ ಯಾದವ್ ಮತ್ತು ಯುಜುವೇಂದ್ರ ಚಹಲ್ ಉತ್ತಮ ಬೌಲಿಂಗ್ ಮಾಡಿ ಮಿಂಚುತ್ತಿದ್ದು, ಮರಳಿ ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವತ್ತ ಚಿತ್ತ ನೆಟ್ಟಿದ್ದಾರೆ.
ಅದರಲ್ಲಿಯೂ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಯುಜುವೇಂದ್ರ ಚಹಲ್ ಯಾರೂ ಊಹಿಸಿರದ ರೀತಿಯ ಪ್ರದರ್ಶನವನ್ನು ನೀಡುತ್ತಿದ್ದು, ರಾಜಸ್ಥಾನ್ ರಾಯಲ್ಸ್ ಪಾಲಿನ ಬೌಲಿಂಗ್ ಅಸ್ತ್ರವಾಗಿ ಹೆಚ್ಚು ವಿಕೆಟ್ ಪಡೆದುಕೊಂಡು ಮಿಂಚುತ್ತಿದ್ದಾರೆ. ಇನ್ನು ಇತ್ತೀಚೆಗಷ್ಟೆ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಯುಜುವೇಂದ್ರ ಚಹಲ್ ಆ ಓವರ್‌ನಲ್ಲಿಯೇ 4 ವಿಕೆಟ್ ಪಡೆದರು ಹಾಗೂ ಪಂದ್ಯದಲ್ಲಿ ಒಟ್ಟು 5 ವಿಕೆಟ್‌ಗಳನ್ನು ತಮ್ಮದಾಗಿಸಿಕೊಂಡರು. 17ನೇ ಓವರ್ ಬೌಲಿಂಗ್ ಮಾಡಿದ ಚಹಲ್ ಮೂರನೇ ಎಸೆತದಲ್ಲಿ 85 ರನ್ ಗಳಿಸಿ ನೆಲಕಚ್ಚಿ ನಿಂತಿದ್ದ ಶ್ರೇಯಸ್ ಐಯ್ಯರ್ ವಿಕೆಟ್ ಪಡೆದ ಚಹಲ್ ಮುಂದಿನ ಎಸೆತಗಳಲ್ಲಿ ಶಿವಮ್ ಮಾವಿ ಮತ್ತು ಪ್ಯಾಟ್ ಕಮಿನ್ಸ್ ಅವರನ್ನು ಬಂದ ದಾರಿಯಲ್ಲೇ ಪೆವಿಲಿಯನ್‌ಗೆ ಕಳುಹಿಸಿದರು.
ಹೀಗೆ ಹ್ಯಾಟ್ರಿಕ್ ವಿಕೆಟ್ ಪಡೆದ ಯುಜುವೇಂದ್ರ ಚಹಲ್ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ 18ನೇ ಬೌಲರ್ ಎನಿಸಿಕೊಂಡಿದ್ದಾರೆ. ಇನ್ನು ಐಪಿಎಲ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಎಲ್ಲಾ ಬೌಲರ್‌ಗಳ ಪಟ್ಟಿ ಈ ಕೆಳಕಂಡಂತಿದೆ.

ಐಪಿಎಲ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿ
2008ರ ಐಪಿಎಲ್‌ನಲ್ಲಿ - ಲಕ್ಷ್ಮಿಪತಿ ಬಾಲಾಜಿ, ಅಮಿತ್ ಮಿಶ್ರಾ ಮತ್ತು ಮಯಾಂಕ ಎನ್‌ಟಿನಿ
2009ರ ಐಪಿಎಲ್‌ನಲ್ಲಿ - ಯುವರಾಜ್ ಸಿಂಗ್, ರೋಹಿತ್ ಶರ್ಮಾ ಮತ್ತು ಯುವರಾಜ್ ಸಿಂಗ್
2010ರ ಐಪಿಎಲ್‌ನಲ್ಲಿ - ಪ್ರವೀಣ್ ಕುಮಾರ್
2011ರ ಐಪಿಎಲ್‌ನಲ್ಲಿ - ಅಮಿತ್ ಮಿಶ್ರಾ
2012ರ ಐಪಿಎಲ್‌ನಲ್ಲಿ - ಅಜಿತ್ ಚಂಡಿಲಾ
2013ರ ಐಪಿಎಲ್‌ನಲ್ಲಿ - ಸುನಿಲ್ ನರೈನ್, ಅಮಿತ್ ಮಿಶ್ರಾ
2014ರ ಐಪಿಎಲ್‌ನಲ್ಲಿ - ಪ್ರವೀಣ್ ತಾಂಬೆ, ಶೇನ್ ವ್ಯಾಟ್ಸನ್
2016ರ ಐಪಿಎಲ್‌ನಲ್ಲಿ - ಅಕ್ಷರ್ ಪಟೇಲ್
2017ರ ಐಪಿಎಲ್‌ನಲ್ಲಿ - ಸ್ಯಾಮುವೆಲ್ ಬದ್ರಿ, ಆಂಡ್ರೂ ಟೈ ಮತ್ತು ಜಯದೇವ ಉನಾದ್ಕತ್
2019ರ ಐಪಿಎಲ್‌ನಲ್ಲಿ - ಸ್ಯಾಮ್ ಕರನ್, ಶ್ರೇಯಸ್ ಗೋಪಾಲ್
2021ರ ಐಪಿಎಲ್‌ನಲ್ಲಿ - ಹರ್ಷಲ್ ಪಟೇಲ್
2022ರ ಐಪಿಎಲ್‌ನಲ್ಲಿ - ಯುಜುವೇಂದ್ರ ಚಹಲ್

ಅತಿಹೆಚ್ಚು ಹ್ಯಾಟ್ರಿಕ್ ವಿಕೆಟ್ ಪಡೆದವರು
ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಒಟ್ಟು 21 ಬಾರಿ ಹ್ಯಾಟ್ರಿಕ್ ವಿಕೆಟ್ ಉರುಳಿದ್ದು, ಈ ಪೈಕಿ ಅಮಿತ್ ಮಿಶ್ರಾ 3 ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರೆ, ಯುವರಾಜ್ ಸಿಂಗ್ ಎರಡು ಬಾರಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ್ದಾರೆ. ಅಮಿತ್ ಮಿಶ್ರಾ 2008, 2011 ಮತ್ತು 2013ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರೆ, ಯುವರಾಜ್ ಸಿಂಗ್ 2019ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯೊಂದರಲ್ಲೇ ಎರಡು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದಾರೆ.

ರೋಹಿತ್ ಶರ್ಮಾ ಕೂಡ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು
ರೋಹಿತ್ ಶರ್ಮಾ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿರುವ ವಿಷಯ ಹಲವು ಕ್ರಿಕೆಟ್ ಪ್ರೇಮಿಗಳಿಗೆ ತಿಳಿದಿಲ್ಲ ಎನ್ನಬಹುದು. 2009ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಡೆಕ್ಕನ್ ಚಾರ್ಜರ್ಸ್ ಪರ ಕಣಕ್ಕಿಳಿದಿದ್ದ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿ ಅಚ್ಚರಿ ಮೂಡಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications