2008ರಿಂದ 2022ರವರೆಗೆ ಐಪಿಎಲ್ ಟ್ರೋಫಿ ಗೆಲ್ಲಿಸಿದ ಎಲ್ಲಾ ಹೆಡ್ ಕೋಚ್‌ಗಳ ಪಟ್ಟಿ; ಒಬ್ಬರೇ ಭಾರತೀಯ!

ಒಂದು ತಂಡ ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿ ಯಶಸ್ಸು ಸಾಧಿಸುವುದರ ಹಿಂದೆ ನಾಯಕನ ಚಾಣಾಕ್ಷ ನಾಯಕತ್ವ ಎಷ್ಟು ಮುಖ್ಯವಾಗುತ್ತದೆಯೋ ಅಷ್ಟೇ ಮುಖ್ಯವಾಗುವ ಅಂಶ ಮುಖ್ಯ ಕೋಚ್‌ನ ಸರಿಯಾದ ಮಾರ್ಗದರ್ಶನ. ಹೌದು, ತಂಡದ ಹೆಡ್ ಕೋಚ್ ನೀಡುವ ಮಾರ್ಗದರ್ಶನ, ಸರಿಯಾದ ತರಬೇತಿ, ಆಟಗಾರರನ್ನು ಉತ್ತೇಜಿಸುವ ರೀತಿ ಆಟಗಾರರ ಮನಸ್ಥಿತಿಯನ್ನು ಸುಧಾರಿಸುವಂತಿದ್ದಾಗ ಮಾತ್ರ ಆ ಆಟಗಾರ ಮೈದಾನಕ್ಕಿಳಿದಾಗ ಉತ್ತಮ ಪ್ರದರ್ಶನ ನೀಡಲು ಸಾಧ್ಯ. ಹೀಗಾಗಿ ಹೆಡ್ ಕೋಚ್ ಆದವರು ತಮ್ಮ ತಂಡದ ಪ್ರತಿಯೊಬ್ಬ ಆಟಗಾರನಿಗೂ ಸಹ ಇದೇ ರೀತಿಯ ಮಾರ್ಗದರ್ಶನ ನೀಡಿ ಇಡೀ ತಂಡವನ್ನು ಉತ್ತಮ ಪ್ರದರ್ಶನ ನೀಡುವ ಹಾಗೆ ತಯಾರಿಸುವುದರಲ್ಲಿ ಯಶಸ್ವಿಯಾದಾಗ ಮಾತ್ರ ತಂಡ ಯಶಸ್ಸು ಸಾಧಿಸುತ್ತದೆ ಹಾಗೂ ಆ ತಂಡಕ್ಕೆ ಚಾಂಪಿಯನ್ ಆಗಿ ಹೊರಹೊಮ್ಮುವ ಅವಕಾಶ ಹೆಚ್ಚಿರುತ್ತದೆ.
ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ತಂಡವೊಂದು ಚಾಂಪಿಯನ್ ಆಗಿ ಹೊರಹೊಮ್ಮಿತು ಎಂದರೆ ಅದರ ಹಿಂದೆ ಹೆಡ್ ಕೋಚ್ ಪಾತ್ರ ಮತ್ತು ಕೊಡುಗೆ ಮಹತ್ವದ್ದಾಗಿರಲಿದೆ. ತಂಡವೊಂದು ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದಾಗ ಆ ತಂಡದ ನಾಯಕನ ಜೊತೆಗೆ ಟೀಕೆಗೆ ಒಳಗಾಗುವುದು ಹೆಡ್ ಕೋಚ್ ಕೂಡ. ಹೌದು, ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾದಲ್ಲಿ ತಂಡ ಕಳಪೆ ಪ್ರದರ್ಶನ ನೀಡಿದ ಕಾರಣಕ್ಕೆ ಕೋಚ್ ಟೀಕೆಗೆ ಒಳಗಾದ ಹಲವಾರು ಉದಾಹರಣೆಗಳವೆ. ಕೆಲವೊಮ್ಮೆ ಹೆಡ್ ಕೋಚ್‌ಗಳನ್ನು ಫ್ರಾಂಚೈಸಿಗಳು ಕೈಬಿಟ್ಟು ನೂತನ ಕೋಚ್‌ಗಳನ್ನು ನೇಮಿಸಿಕೊಂಡ ಪ್ರಸಂಗಗಳೂ ನಡೆದಿವೆ.
ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಇತಿಹಾಸದಲ್ಲಿ ನಡೆದಿರುವ 15 ಆವೃತ್ತಿಗಳಲ್ಲಿ ಹಲವು ಹೆಡ್ ಕೋಚ್‌ಗಳು ತಮ್ಮ ತಂಡಗಳನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದು, 2008ರಿಂದ 2022ರವರೆಗೆ ನಡೆದಿರುವ ಐಪಿಎಲ್ ಆವೃತ್ತಿಗಳಲ್ಲಿ ತಮ್ಮ ತಂಡಗಳನ್ನು ಚಾಂಪಿಯನ್ ಮಾಡುವಲ್ಲಿ ಯಶಸ್ವಿಯಾಗಿರುವ ಎಲ್ಲಾ ಹೆಡ್ ಕೋಚ್‌ಗಳ ಪಟ್ಟಿ ಮುಂದೆ ಇದೆ ಓದಿ.

ಕಪ್ ಗೆಲ್ಲಿಸಿರುವ ಹೆಡ್ ಕೋಚ್‌ಗಳ ಪಟ್ಟಿ
2008 ರಾಜಸ್ಥಾನ್ ರಾಯಲ್ಸ್ - ಶೇನ್ ವಾರ್ನ್ ( ಆಸ್ಟ್ರೇಲಿಯಾ )
2009 ಡೆಕ್ಕನ್ ಚಾರ್ಜರ್ಸ್ - ಡ್ಯಾರೆನ್ ಲೆಹ್ಮನ್ ( ಆಸ್ಟ್ರೇಲಿಯಾ )
2010 ಚೆನ್ನೈ ಸೂಪರ್ ಕಿಂಗ್ಸ್ - ಸ್ಟೀಫನ್ ಫ್ಲೆಮಿಂಗ್ ( ನ್ಯೂಜಿಲೆಂಡ್ )
2011 ಚೆನ್ನೈ ಸೂಪರ್ ಕಿಂಗ್ಸ್ - ಸ್ಟೀಫನ್ ಫ್ಲೆಮಿಂಗ್ ( ನ್ಯೂಜಿಲೆಂಡ್ )
2012 ಕೋಲ್ಕತ್ತಾ ನೈಟ್ ರೈಡರ್ಸ್ - ಟ್ರೆವರ್ ಬೇಲಿಸ್ ( ಆಸ್ಟ್ರೇಲಿಯಾ )
2013 ಮುಂಬೈ ಇಂಡಿಯನ್ಸ್ - ಜಾನ್ ರೈಟ್ ( ನ್ಯೂಜಿಲೆಂಡ್ )
2014 ಕೋಲ್ಕತ್ತಾ ನೈಟ್ ರೈಡರ್ಸ್ - ಟ್ರೆವರ್ ಬೇಲಿಸ್ ( ಆಸ್ಟ್ರೇಲಿಯಾ )
2015 ಮುಂಬೈ ಇಂಡಿಯನ್ಸ್ - ರಿಕಿ ಪಾಂಟಿಂಗ್ ( ಆಸ್ಟ್ರೇಲಿಯಾ )
2016 ಸನ್ ರೈಸರ್ಸ್ ಹೈದರಾಬಾದ್ - ಟಾಮ್ ಮೂಡಿ ( ಆಸ್ಟ್ರೇಲಿಯಾ )
2017 ಮುಂಬೈ ಇಂಡಿಯನ್ಸ್ - ಮಹೇಲಾ ಜಯವರ್ಧನೆ ( ಶ್ರೀಲಂಕಾ )
2018 ಚೆನ್ನೈ ಸೂಪರ್ ಕಿಂಗ್ಸ್ - ಸ್ಟೀಫನ್ ಫ್ಲೆಮಿಂಗ್ ( ನ್ಯೂಜಿಲೆಂಡ್ )
2019 ಮುಂಬೈ ಇಂಡಿಯನ್ಸ್ - ಮಹೇಲಾ ಜಯವರ್ಧನೆ ( ಶ್ರೀಲಂಕಾ )
2020 ಮುಂಬೈ ಇಂಡಿಯನ್ಸ್ - ಮಹೇಲಾ ಜಯವರ್ಧನೆ ( ಶ್ರೀಲಂಕಾ )
2021 ಚೆನ್ನೈ ಸೂಪರ್ ಕಿಂಗ್ಸ್ - ಸ್ಟೀಫನ್ ಫ್ಲೆಮಿಂಗ್ ( ನ್ಯೂಜಿಲೆಂಡ್ )
2022 ಗುಜರಾತ್ ಟೈಟಾನ್ಸ್ - ಆಶಿಶ್ ನೆಹ್ರಾ ( ಭಾರತ )

ಭಾರತೀಯ ಕೋಚ್ ಒಬ್ಬರೇ
ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಗುಜರಾತ್ ಟೈಟನ್ಸ್ ತಂಡದ ಹೆಡ್ ಕೋಚ್ ಆಗಿ ಆಶಿಶ್ ನೆಹ್ರಾ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ತಾವು ಹೆಡ್ ಕೋಚ್ ಆಗಿ ಟ್ರೋಫಿ ಗೆಲ್ಲಿಸುವುದರ ಮೂಲಕ ಐಪಿಎಲ್ ಟ್ರೋಫಿ ಗೆದ್ದ ಮೊದಲ ಭಾರತೀಯ ಹೆಡ್ ಕೋಚ್ ಎಂಬ ದಾಖಲೆಯನ್ನು ಬರೆದ ಆಶಿಶ್ ನೆಹ್ರಾ ಭಾರತೀಯರು ಹೆಡ್ ಕೋಚ್ ಆಗಿ ಟ್ರೋಫಿ ಗೆಲ್ಲಿಸಲಾಗುವುದಿಲ್ಲ ಎಂಬ ಹಲವು ವರ್ಷಗಳ ಮಾತನ್ನು ಹುಸಿಗೊಳಿಸಿದರು.

ವಾರ್ನ್ ವಿಶಿಷ್ಟ ಸಾಧನೆ
ಇನ್ನು ಇತ್ತೀಚೆಗಷ್ಟೆ ನಮ್ಮನ್ನೆಲ್ಲಾ ಅಗಲಿದ ಲೆಜೆಂಡರಿ ಕ್ರಿಕೆಟಿಗ ಶೇನ್ ವಾರ್ನ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ಕೋಚ್ ಮತ್ತು ನಾಯಕ ಎರಡೂ ಜವಾಬ್ದಾರಿಯನ್ನು ಹೊತ್ತು ತಂಡವನ್ನು ಗೆಲ್ಲಿಸಿ ದಾಖಲೆ ಬರೆದಿದ್ದಾರೆ. ಹೌದು, ಐಪಿಎಲ್ ಉದ್ಘಾಟನಾ ಆವೃತ್ತಿಯಲ್ಲಿ ಟ್ರೋಫಿ ಗೆದ್ದಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕತ್ವ ಮತ್ತು ಹೆಡ ಕೋಚ್ ಎರಡೂ ಜವಾಬ್ದಾರಿಯನ್ನು ಶೇನ್ ವಾರ್ನ್ ಅವರೇ ನಿರ್ವಹಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications